Advertisement
ಸೇವೆ ಕಾಯಂ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗಾಗಿ ದಿನಗೂಲಿ ಹಾಗೂ ಹೊರಗುತ್ತಿಗೆ ಪೌರ ಕಾರ್ಮಿಕರು ಜಿಲ್ಲಾ ಕಾರಿ ಕಚೇರಿ ವೃತ್ತದಲ್ಲಿ ನಡೆಸುತ್ತಿರುವ ಧರಣಿಗೆ ಕಾಂಗ್ರೆಸ್‌ನಿಂದ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು. ಇದು ರಾಜ್ಯ ಮಟ್ಟದ ಸಮಸ್ಯೆಯಾಗಿದ್ದು ಅಷ್ಟು ಸುಲಭವಾಗಿ ಬಗೆಹರಿಯುವುದಿಲ್ಲ.
ಹೊರಗುತ್ತಿಗೆ ಪೌರ ಕಾರ್ಮಿಕರು, ವಾಹನ ಚಾಲಕರು, ಲೋಡರ್, ವಾಲ್‌ಮಾನ್‌ಗಳು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಬಾರದು ಎಂದರು.ಮುಷ್ಕರ ಎಂದಾಕ್ಷಣ ಎಲ್ಲಾ ಬೇಡಿಕೆಗಳು ಈಡೇರುವುದಿಲ್ಲ. ಕಾನೂನು ತೊಡಕುಗಳಿರುತ್ತವೆ. ಎಸ್ಸೆಸ್ಸೆಲ್ಸಿ ಪಾಸಾದ 27 ಪೌರ ಕಾರ್ಮಿಕರು ನಮ್ಮ ಹೋರಾಟದ ಫಲವಾಗಿ ಚೀಫ್ ಆಫೀಸರ್ ಗಳಾಗಿದ್ದಾರೆ. 27 ಸಾವಿರ ಪೌರ ಕಾರ್ಮಿಕರು ಟೆಂಡರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ನಗರ ಒಂದರಲ್ಲಿಯೇ ಹನ್ನೊಂದು ಸಾವಿರ ಪೌರ ಕಾರ್ಮಿಕರು ದಿನಗೂಲಿಗಳಾಗಿದ್ದಾರೆ. ಟೆಂಡರ್ ಬೇಡವೇ ಬೇಡ ಎನ್ನುವ ಹೋರಾಟ ಮೊದಲಿನಿಂದಲೂ ಇದೆ. ಅದಕ್ಕೆ ನೀವು ಬೆಂಬಲಿಸಲಿಲ್ಲ. ಕಾಯಂ ಕೆಲಸಕ್ಕೆ ಟೆಂಡರ್ ಕರೆಯಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೂ ಟೆಂಡರ್ ಮೂಲಕವೇ ಪೌರ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ಕಾಂಗ್ರೆಸ್ ಮುಖಂಡರಾದ ಹಾಲಸ್ವಾಮಿ, ಕೆ.ಪಿ. ಸಂಪತ್‌ಕುಮಾರ್, ಡಿ.ಎನ್. ಮೈಲಾರಪ್ಪ, ಎಸ್.ಎನ್. ರವಿಕುಮಾರ್, ಎನ್.ಡಿ. ಕುಮಾರ್, ಮೋಹನ್ ಪೂಜಾರಿ, ಗೀತಾನಂದಿನಿ ಗೌಡ, ಜಿಪಂ ಮಾಜಿ ಸದಸ್ಯ ಶಿವಮೂರ್ತಿ ಮತ್ತಿತರರು ಇದ್ದರು.
ಪೌರ ಕಾರ್ಮಿಕರು ಹಾಗೂ ಕಮೀಷನರ್‌ಗಳು ನಿರಂತರವಾಗಿ ಹೋರಾಟದಲ್ಲಿದ್ದುಕೊಂಡು ಸಂಘಟನೆಯೊಳಗೆ ಬಂದರೆ ನೀವು ಕಾಯಂ ನೌಕರರಾಗುತ್ತೀರಿ. ಇಲ್ಲವಾದರೆ ಎಷ್ಟು ಹೋರಾಟ ಮಾಡಿದರೂ ಪ್ರಯೋಜನವಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಸರ್ಕಾರಗಳಲ್ಲಿಯೂ ಪೌರ ಕಾರ್ಮಿಕರ ಸೇವೆ ಕಾಯಂಗೆ ಹೋರಾಟ ಮಾಡಿಕೊಂಡು ಬಂದಿದ್ದೇನೆ.ಜಿ.ಎಸ್. ಮಂಜುನಾಥ್,ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ