Advertisement

“ಮುಸ್ಲಿಮರ ಒಪ್ಪಿಕೊಳ್ಳದಿದ್ದರೆ ಅದು ಹಿಂದುತ್ವ ಆಗದು’

05:38 PM Sep 19, 2018 | |

ಹೊಸದಿಲ್ಲಿ: ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುವುದೇ ಹಿಂದುತ್ವ ಎಂದು ವ್ಯಾಖ್ಯಾನಿಸಿರುವ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು, ಮುಸ್ಲಿಮರನ್ನು ಒಪ್ಪಿಕೊಳ್ಳದಿದ್ದರೆ ಅದು ಹಿಂದುತ್ವ ಎನಿಸಿಕೊಳ್ಳದು ಎಂದಿದ್ದಾರೆ.

Advertisement

“ಭವಿಷ್ಯದ ಭಾರತ: ಆರೆಸ್ಸೆಸ್‌ ದೃಷ್ಟಿಕೋನ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರಿಗೆ ಅಲ್ಲಿ ಜಾಗವಿಲ್ಲ ಎಂಬ ಅರ್ಥವಲ್ಲ. ಹಿಂದುತ್ವ ಎಂದರೆ ಭಾರತೀಯತ್ವ ಮತ್ತು ಎಲ್ಲರನ್ನೊಳಗೊಳ್ಳುವಿಕೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದೇ ವೇಳೆ ಆರೆಸ್ಸೆಸ್‌ ಅನ್ನು ಮುಸ್ಲಿಂ ಬ್ರದರ್‌ಹುಡ್‌ಗೆ ಹೋಲಿಕೆ ಮಾಡಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಉತ್ತರವೆಂಬಂತೆ ಮಾತನಾಡಿದ ಭಾಗವತ್‌, ಸಂಘವು ಜಾಗತಿಕ ಸಹೋದರತ್ವ (ಗ್ಲೋಬಲ್‌ ಬ್ರದರ್‌ಹುಡ್‌)ದ ಬಗ್ಗೆ ಮಾತನಾಡುತ್ತದೆ. ಇದು ವೈವಿಧ್ಯತೆಯಲ್ಲಿ ಏಕತೆಯನ್ನು ಬಯಸುವಂಥ ಭಾತೃತ್ವ. ಇದುವೇ ಹಿಂದುತ್ವದ ಸಂಪ್ರದಾಯ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next