Advertisement

ದೇಶದ ಅತಿ ದೊಡ್ಡ ಪಕ್ಷ ಗೂಂಡಾಗಿರಿ ಮಾಡಿದರೆ ಪ್ರಗತಿ ಹೇಗೆ : ಕೇಜ್ರಿವಾಲ್ ಪ್ರಶ್ನೆ

02:00 PM Mar 31, 2022 | Team Udayavani |

ನವದೆಹಲಿ : ದೇಶದ ಅತಿ ದೊಡ್ಡ ಪಕ್ಷ ಗೂಂಡಾಗಿರಿಯಲ್ಲಿ ತೊಡಗಿದರೆ, ಅದು ತಪ್ಪು ಸಂದೇಶವನ್ನು ರವಾನಿಸುತ್ತದೆ ಮತ್ತು ಅಂತಹ ಸನ್ನಿವೇಶದಲ್ಲಿ ದೇಶವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.

Advertisement

ಬಿಜೆಪಿಯ ಯುವ ಮೋರ್ಚಾ ಸದಸ್ಯರು ಪ್ರತಿಭಟನೆಯ ವೇಳೆ ತಮ್ಮ ನಿವಾಸದ ಹೊರಗೆ ಆಸ್ತಿಯನ್ನು ಧ್ವಂಸ ಮಾಡಿದ ವಿಚಾರಕ್ಕೆ ಸಂಬಂಧಿಸಿ ಕೇಜ್ರಿವಾಲ್ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಅರವಿಂದ್ ಕೇಜ್ರಿವಾಲ್ ಮುಖ್ಯವಲ್ಲ ಆದರೆ ದೇಶ ಮುಖ್ಯ. ನಾನು ದೇಶಕ್ಕಾಗಿ ನನ್ನ ಪ್ರಾಣವನ್ನು ತೆರಬಲ್ಲೆ. ಇಂತಹ ಗೂಂಡಾಗಿರಿಯಿಂದ ಭಾರತ ಪ್ರಗತಿ ಸಾಧಿಸುವುದಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ದೇಶದ ದೊಡ್ಡ ಪಕ್ಷ ಇಂತಹ ಗೂಂಡಾಗಿರಿ ನಡೆಸಿದರೆ ಜನರಲ್ಲಿ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಯಾವುದನ್ನೂ ಎದುರಿಸಲು ಇದೇ ಸರಿಯಾದ ಮಾರ್ಗ ಎಂದು ಜನರು ಭಾವಿಸುತ್ತಾರೆ ”ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದಾರೆ.

ಬುಧವಾರ, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕೇಜ್ರಿವಾಲ್ ಅವರ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತಾಗಿನ ಹೇಳಿಕೆಗಳ ವಿರುದ್ಧ ಅವರ ನಿವಾಸದ ಹೊರಗೆ ಪ್ರತಿಭಟನೆ ನಡೆಸುವ ವೇಳೆ ಕೆಲವರು ಆಸ್ತಿಯನ್ನು ಧ್ವಂಸಗೊಳಿಸಿದ್ದರು. ಈ ಕುರಿತು ಪ್ರಕರಣ ದಾಖಲಾಗಿದ್ದು, ಈಗಾಗಲೇ 8 ಮಂದಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next