ತುಮಕೂರು: ಕೋವಿಡ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ, ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದರೆ ಹೆಚ್ಚು ಉಪಯೋಗವಾಗಲಿದೆ ಎಂದು ಹಿರಿಯ ಮಕ್ಕಳ ತಜ್ಞ, ತಿಪಟೂರು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಟಿ.ವಿ. ಈಶ್ವರಯ್ಯ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಜಿಲ್ಲಾ ಶಾಖೆಯಿಂದ ನಿವೃತ್ತರಾದ ಡಾ.ಟಿ.ವಿ.ಈಶ್ವರಯ್ಯ ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ರೋಗಿಗಳ ಆತ್ಮವಿಶ್ವಾಸ ಹೆಚ್ಚಿಸುವುದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಲಿದೆ ಎಂದರು.
ಇಂದು ಕೊರೊನಾ ರೋಗ ಬಂದರೆ ಯಮಯಾತನೆಎಂಬಂತಹಚಿತ್ರಗಳುಕಂಡುಬರುತ್ತಿವೆ. ಅಷ್ಟೊಂದು ಗಾಬರಿ ಪಡುವ ಅಗತ್ಯವಿಲ್ಲ. ರೋಗಿಯೊಂದಿಗೆ ಆಪ್ತ ಸಮಾ ಲೋಚನೆ ನಡೆಸಿದರೆ ರೋಗದ ಮೂಲ ಕಂಡುಕೊಳ್ಳಲು ಸಾಧ್ಯ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲದ ಕಾರಣ ಸಾಧ್ಯವಾದಷ್ಟುರೋಗ ಹರಡದಂತೆ ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಬೇಕಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ, ಮಾಸ್ಕ್ ಹಾಕಿಕೊಂಡಿರಬೇಕು, ಅನಾವಶ್ಯಕ ಓಡಾಟಕ್ಕೆ ಕಡಿವಾಣ ಹಾಕಿದರೆ, ಈ ರೋಗದಿಂದ ಮುಕ್ತವಾಗಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿಮಕ್ಕಳ ತಜ್ಞರಾಗಿ,ಆಡಳಿತಾಧಿಕಾರಿಯಾಗಿ ಜೊತೆಗೆ ಬರಹಗಾರರನಾಗಿಯೂ ಕೆಲಸ ಮಾಡಿರುವ ವೃತ್ತಿ ಜೀವನ ತೃಪ್ತಿ ತಂದಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕೋಡ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವೃತ್ತಿ ಆರಂಭಿಸಿ, 33 ವರ್ಷಗಳ ಕಾಲ ಸೇವೆ ಸಲ್ಲಿಸಿ, ಹಲವು ಹುದ್ದೆಗಳ ಜವಾಬ್ದಾರಿ ನಿರ್ವಹಿಸಿದ್ದೇನೆ. ಮುಂದೆಯೂ ಮಕ್ಕಳ ತಜ್ಞನಾಗಿ ಕಾರ್ಯ ನಿರ್ವಹಿಸಲಿದ್ದೇನೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಮಾತನಾಡಿ,ಮಕ್ಕಳ ತಜ್ಞರಾಗಿ ಸುಮಾರು 33 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಡಾ.ಟಿ.ಎ.ಈಶ್ವರಯ್ಯಇಡೀ ವೃತ್ತಿ ಜೀವನದಲ್ಲಿ ಒಂದು ಕಪ್ಪು ಚುಕ್ಕೆಪಡೆದವರಲ್ಲ. ಜಿಲ್ಲಾ ಸರ್ಜನ್ ಆಗಿ,ಮಕ್ಕಳವೈದ್ಯಾಧಿಕಾರಿಗಳ ತರಬೇತಿ ಕೇಂದ್ರದ ಉಪನಿರ್ದೇಶಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ನಿವೃತ್ತಿ ಜೀವನ ಸುಖಃಕರವಾಗಿರಲೆಂದು ಶುಭ ಹಾರೈಸಿದರು.
ಜಿಲ್ಲಾ ಸರ್ಜನ್ ಡಾ.ವೀರಭದ್ರಯ್ಯ ಮಾತನಾಡಿ, ಸರ್ಕಾರಿ ವೈದ್ಯರಿಗೆ ನಿವೃತ್ತಿ ಎಂಬುದು ಕೇವಲ ಸರ್ಕಾರಿ ಹುದ್ದೆಗೆ, ಉತ್ತಮ ಮಕ್ಕಳ ತಜ್ಞರಾಗಿರುವ ಡಾ.ಟಿ.ಎ.ಈಶ್ವರಯ್ಯ ಅವರಿಗೆ ಒಳ್ಳೆಯ ಹೆಸರಿರುವ ಕಾರಣ ವೈದ್ಯಕೀಯ ವೃತ್ತಿ ಮುಂದುವರೆಸಿದರೆ ಹೆಚ್ಚು ಅನುಕೂಲವಾಗಲಿದೆ. ಅವರ ಸರ್ಕಾರಿ ಸೇವೆ ಇತರೆ ವೈದ್ಯರಿಗೆ ಮಾದರಿ ಎಂದರು.
ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಡಾ.ಎಚ್.ಆರ್.ರಾಜಶೇಖರಯ್ಯ, ಜಿಲ್ಲಾ ತರಬೇತಿ ಕೇಂದ್ರದ ನಿರ್ದೇಶಕಿ ಡಾ.ರಜನಿ, ಡಾ.ಮೋಹನ್, ಡಾ.ಮಂಜುನಾಥ್, ಡಾ. ಕೇಶವ ರಾಜ್, ಡಾ.ಸನತ್, ನೇತ್ರ ತಜ್ಞ ಡಾ. ಮಂಜುನಾಥ್, ಡಾ.ಮೋಹನ್, ಡಾ.ಸವಿತಾ ಇದ್ದರು.