Advertisement
ಮನೆ ಕಟ್ಟುವ ಮೊದಲೇ ರಿಪೇರಿಗೆ ಅನುಕೂಲಕರವಾಗುವಂತೆ ಸಾಕಷ್ಟು ಮುಂಜಾಗ್ರತೆ ವಹಿಸುವುದು ಉತ್ತಮ. ಇತ್ತೀಚಿನ ಟ್ರೆಂಡ್ ಅಂದರೆ ಮನೆ ಒಳಗಿನ ವೈರಿಂಗ್, ಪ್ಲಂಬಿಂಗ್ ಎಲ್ಲವೂ ಮುಚ್ಚಿದಂತಿರಬೇಕು. ಯಾವುದೂ ತೆರೆದಿರಬಾರದು. ಆದರೆ ರಿಪೇರಿಯ ದೃಷ್ಟಿಯಿಂದ ಮನೆಯ ವಿನ್ಯಾಸ ಮಾಡುವಾಗಲೇ ಮುಂಜಾಗರೂಕತೆ ವಹಿಸಿ, ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವುದು ಉತ್ತಮ.
ವಿದ್ಯುತ್ ವಾಹಕಗಳನ್ನು ಸಾಮಾನ್ಯವಾಗಿ ಒಂದೆರಡು ತಿರುವುಗಳಲ್ಲಿ ಸುಲಭದಲ್ಲಿ ಎಳೆದು ಹಾಕಬಹುದು. ಇದಕ್ಕಿಂತ ಹೆಚ್ಚಿನ ಬೆಂಡುಗಳು ಬಂದರೆ, ವೈರ್ ಗಳನ್ನು ಎಳೆಯಲು ಕಷ್ಟವಾಗುತ್ತದೆ. ಆದುದರಿಂದ ಪ್ರತಿ ಎರಡು ಮೂರು ಬೆಂಡಿಗೆ ಒಂದರಂತೆ ಜಂಕ್ಷನ್ ಬಾಕ್ಸ್ ಗಳನ್ನು ನೀಡಬೇಕು. ಮಹಡಿಯಿಂದ ಮಹಡಿಗೆ, ಒಳಗಿನಿಂದ ಹೊರಗೆ ಹೋಗುವ ಸ್ಥಳದಲ್ಲೂ ಇದನ್ನು ಅಳವಡಿಸಿದರೆ ಪರಿಶೀಲನೆ ಮಾಡಲು ಸುಲಭವಾಗುತ್ತದೆ. ವಿದ್ಯುತ್ ವಾಹಕಗಳಲ್ಲಿ ಹೆಚ್ಚಿನ ವೋಲ್ಟೇಜ್ ಬಂದು ವೈರುಗಳು ಸುಡಬಹುದು. ಆಗ ಪೈಪುಗಳು ತೀರ ಉದ್ದವಾಗಿದ್ದರೆ ಹಳೆಯ ವಯರ್‌ಗಳನ್ನು ತೆಗೆದು ಹೊಸದು ಹಾಕುವುದು ಕಷ್ಟ. ಕೇಬಲ್ ದುರಸ್ತಿ
ರಸ್ತೆ ಬದಿಯ ಕಂಬದಿಂದ ಮನೆಗೆ ಸಂಪರ್ಕ ಕಲ್ಪಿಸುವ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸುವಾಗ ನಾಲ್ಕು ಇಲ್ಲವೇ ಆರು ಇಂಚಿನ ಸ್ಯಾನಿಟರಿ ಪೈಪ್‌ಗಳನ್ನು ಬಳಸುವ ಪ್ಲಾಸ್ಟಿಕ್ ಇಲ್ಲವೇ ಸುಟ್ಟ ಜೇಡಿ ಮಣ್ಣಿನ ಕೊಳವೆಗಳಲ್ಲಿ ಹಾದುಹೋಗುವಂತೆ ಮಾಡಬೇಕು. ಇದರಿಂದ ಮುಂದೆ ಹೆಚ್ಚು ತೊಂದರೆಯಾಗುವುದಿಲ್ಲ.
Related Articles
Advertisement
ಪೈಪ್, ಕೊಳವೆ ಪರಿಶೀಲನೆಪ್ರತಿ ಹತ್ತು ಹದಿನೈದು ಅಡಿಗಳಿಗೊಂದು ಇನ್ ಸ್ಪೆಕ್ಷನ್ ಛೇಂಬರ್ ಹಾಕುವುದು ಉತ್ತಮ. ಹಾಗೆಯೇ, ಪ್ರತಿ ತಿರುವಿನಲ್ಲೂ ಒಂದು ಪರಿಶೀಲನಾ ಕಿಂಡಿಯನ್ನು ಕೊಡಲು ಮರೆಯಬಾರದು. ಪ್ರತಿ ಬೆಂಡ್ ಹಾಗೂ ಪ್ರತಿ ಹತ್ತು ಹನ್ನೆರಡು ಅಡಿಗಳಿಗೆ ಒಂದರಂತೆ ಡೋರ್ ಎಂದು ಕರೆಯಲ್ಪಡುವ ಮುಚ್ಚಳಗಳನ್ನು ಅಳವಡಿಸಬೇಕು. ಮನೆಯೊಳಗಿನಿಂದ ಹೊರಗೆ ಬರುವ ಕಡೆ, ಅಡ್ಡ ಹರಿದು ಕೆಳಗೆ ಇಳಿಯುವ ಕಡೆ ಕಡ್ಡಾಯವಾಗಿ ಈ ಡೋರ್ ಗಳು ಇರ ಬೇಕು. ಹೀಗೆ ಮಾಡುವುದರಿಂದ ಹಂತಹಂತವಾಗಿ ರಿಪೇರಿ ಮಾಡಲು ಅನುಕೂಲಕರ. ಮನೆಗೆ ಬರುವ ನೀರನ್ನು ಎಷ್ಟೇ ಪರಿಷ್ಕರಿಸಿದರೂ ಒಂದಷ್ಟು ಮಣ್ಣು, ಮತ್ತೂಂದು ಉಳಿದು ಬಿಡುತ್ತದೆ. ಜತೆಗೆ ದೇಹಕ್ಕೆ ಪೂರಕವಾದ ಕೆಲವು ರಾಸಾಯನಿಕಗಳೂ ಮಳೆಯ ನೀರಿನ ಜತೆ ನೆಲದಲ್ಲಿ ಹರಿದು ನದಿ, ಬಾವಿಗೆ ಸೇರ್ಪಡೆಯಾಗುತ್ತದೆ. ಇದೆಲ್ಲ ಕೆಲವೊಮ್ಮೆ ಪೈಪ್ ಗಳ ಒಳಗೆ ಕಟ್ಟಿಕೊಂಡು ನಿಧಾನವಾಗಿ ಅವುಗಳ ಸಾಮರ್ಥ್ಯವನ್ನು ಕುಗ್ಗಿಸುತ್ತವೆ. ಆದ್ದ ರಿಂದ ಈ ಎಲ್ಲವನ್ನೂ ಆಗಾಗ ನಿರ್ವಹಣೆ ಮಾಡಿ, ರಿಪೇರಿ ಮಾಡುವ ರೀತಿಯಲ್ಲಿ ಅಳವಡಿಸಿಕೊಂಡರೆ ತೊಂದರೆ ಬಂದಾಗ ನಿವಾರಿಸಿಕೊಳ್ಳುವುದು ಸುಲಭ. ಮನೆ ಕಟ್ಟಿದ ಮೇಲೆ ನಿರ್ವಹಣೆ ಪದೇ ಪದೇ ಬೇಡದಿದ್ದರೂ, ತೊಂದರೆ ಕೊಟ್ಟಾಗ ಸುಲಭದಲ್ಲಿ ರಿಪೇರಿ ಆಗುವಂತೆ ವ್ಯವಸ್ಥೆ
ಮೊದಲೇ ಮಾಡಿಕೊಂಡಿದ್ದರೇ ಒಳ್ಳೆಯದು. ಇಲ್ಲದಿದ್ದರೆ, ಮನೆಯನ್ನು ಒಡದೇ ರಿಪೇರಿ ಮಾಡುವ ಪರಿಸ್ಥಿತಿಯೂ ಎದುರಾಗಬಹುದು. ಅದಕ್ಕಾಗಿ ಪೂರ್ವಾಲೋಚನೆ ಮಾಡಿಕೊಂಡು ಮುಂದುವರಿಯುವುದು ಉತ್ತಮ.