Advertisement

ಒಂದು ವೇಳೆ ಪವಾರ್ ರಾಷ್ಟ್ರಪತಿಯಾದರೆ ದೇಶದಲ್ಲಿ ಭಯೋತ್ಪಾದನೆ ಹೆಚ್ಚಳ: ಸಂಸದ ಘೋಷ್

06:31 PM Jun 16, 2022 | Nagendra Trasi |

ನವದೆಹಲಿ: ಎನ್ ಸಿಪಿ ವರಿಷ್ಠ ಶರದ್ ಪವಾರ್ ಗೆ ಭಯೋತ್ಪಾದಕರ ಸಂಪರ್ಕವಿದೆ. ಇಂತಹ ವ್ಯಕ್ತಿಯನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದರೆ ದೇಶದಲ್ಲಿ ಭಯೋತ್ಪಾದನೆ ಹೆಚ್ಚಳವಾಗಬಹುದು…ಇದು ಬಿಜೆಪಿಯ ಅಖಿಲ ಭಾರತ ಉಪಾಧ್ಯಕ್ಷ ದಿಲೀಪ್ ಘೋಷ್ ಪ್ರತಿಕ್ರಿಯೆ.

Advertisement

ಇದನ್ನೂ ಓದಿ:ಒಂದಕ್ಕೆ ಐದರಷ್ಟು ಮೊತ್ತ… ಹಣ ಡ್ರಾ ಮಾಡಲು ಎಟಿಎಂ ಎದುರು ಮುಗಿಬಿದ್ದ ಜನರು!

ಈ ವಿಚಾರದಲ್ಲಿ ಯಾರೊಬ್ಬರೂ ಮೂರ್ಖರಾಗಲು ಬಯಸುವುದಿಲ್ಲ. ಪವಾರ್ ಅವರಿಗೆ ವಯಸ್ಸಾಗಿದೆ. ಆದರೆ ಒಂದು ವೇಳೆ ಪವಾರ್ ಹೆಸರನ್ನು ಒಂದು ಬಾರಿ ಎಲ್ಲರೂ ಹೇಳಲಿ ಎಂದು ದೀದಿ ಆಲೋಚಿಸಿದ್ದರು. ವಿಪರ್ಯಾಸವೆಂದರೆ ಯಾರೊಬ್ಬರೂ ಪವಾರ್ ಅವರ ಹೆಸರನ್ನು ಸಭೆಯಲ್ಲಿ ಪ್ರಸ್ತಾಪಿಸಲ್ಲ ಎಂದು ಘೋಷ್ ಹೇಳಿದರು.

ಸಭೆಯಲ್ಲಿ 18 ವಿಪಕ್ಷಗಳು ಭಾಗವಹಿಸಿರುವ ಬಗ್ಗೆ ಅವರ ಅಸ್ತಿತ್ವದ ಬಗ್ಗೆ ಘೋಷ್ ಪ್ರಶ್ನಿಸಿದ್ದಾರೆ. ಪಶ್ಚಿಮಬಂಗಾಳ ಮುಖ್ಯಮಂತ್ರಿಗೆ ಅಖಿಲ ಭಾರತದ ನಾಯಕಿಯಾಗಬೇಕೆಂಬುದು ಬಹುಕಾಲದ ಕನಸಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಜನರು ಸಿಬಿಐ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಉತ್ತರಿಸಿದ ಘೋಷ್, ಸಿಬಿಐ ತನಿಖೆ ನಡೆಸುವಂತೆ ಕೋರ್ಟ್ ಆದೇಶ ನೀಡಿರುವುದು. ಇದರಿಂದಾಗಿ ಜನರಿಗೆ ಸಿಬಿಐ ತನಿಖೆ ಮೇಲೆ ಇರುವ ನಂಬಿಕೆಯನ್ನು ಸಾಬೀತುಪಡಿಸುತ್ತದೆ ಎಂದರು.

Advertisement

ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆ ಟೀಕಿಸಿದ ಘೋಷ್,  19ನೇ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿಪಕ್ಷಗಳ ಭಾರೀ ದೊಡ್ಡ ರಾಲಿಯನ್ನು ನಡೆಸಿದ್ದವು. ಬಹಳಷ್ಟು ನಾಯಕರು ಬಂದಿದ್ದರು, ಅವರೆಲ್ಲಾ ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

BJP MP, Sharad pawar, Presidential election 2022, Mamatha, ರಾಷ್ಟ್ರಪತಿ ಚುನಾವಣೆ 2022, ಶರದ್ ಪವಾರ್, ಮಮತಾ ಬ್ಯಾನರ್ಜಿ

 

Advertisement

Udayavani is now on Telegram. Click here to join our channel and stay updated with the latest news.

Next