Advertisement

ಕಂಪ್ಯೂಟರ್‌ ಜ್ಞಾನನವಿದ್ದರೆ ಅವಕಾಶಗಳು ಅಪಾರ 

07:23 AM Feb 20, 2019 | |

. ಕಂಪ್ಯೂಟರ್‌ ವಿಜ್ಞಾನ ಕ್ಷೇತ್ರದಲ್ಲಿ ಅವಕಾಶಗಳು ಹೇಗಿವೆ ?
ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ಕಂಪ್ಯೂಟರ್‌ ಪ್ರಮುಖ ಅಂಗವಾಗಿದೆ. ಈ ಹಿನ್ನೆಲೆಯಲ್ಲಿ ಕಂಪ್ಯೂಟರ್‌ ಆಧಾರಿತ ಯಾವುದೇ ಕೋರ್ಸ್‌ಗಳನ್ನು ಮಾಡಿದರೂ ಉತ್ತಮ ಅವಕಾಶಗಳಿವೆ. ಕಂಪ್ಯೂಟರ್‌ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕು ಎಂದಾದರೆ ಕಂಪ್ಯೂಟರ್‌ ಸೈನ್ಸ್‌ ಕಲಿಯಬೇಕೆಂದೇನಿಲ್ಲ. ಪಿಯುಸಿ, ಪದವಿ ಬಳಿಕ ವಿವಿಧ ಸಣ್ಣ ಕೋರ್ಸ್‌ ಗಳನ್ನು ಮಾಡಿದರೂ ಯಾವುದೇ ಕ್ಷೇತ್ರದಲ್ಲಿ ಉದ್ಯೋಗವಕಾಶಗಳನ್ನು ಪಡೆದುಕೊಳ್ಳಬಹುದು. ಪಿಯುಸಿ ಬಳಿಕ ಟ್ಯಾಲಿ, ಅನಿಮೇಶನ್‌ ಕಲಿತರೆ ಸಾಕು ಉದ್ಯೋಗ ಲಭಿಸುತ್ತವೆ. ಸರಕಾರಿ ಉದ್ಯೋಗಿಗಳಿಗೆ ಕಂಪ್ಯೂಟರ್‌ ಜ್ಞಾನ ತಿಳಿದುಕೊಳ್ಳಲು ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆ ನಿಟ್ಟಿನಲ್ಲಿ ಕಂಪ್ಯೂಟರ್‌ ಸಾಕ್ಷರತೆ ಅವಶ್ಯ ಎಂಬುದು ಸಾಬೀತಾಗಿದೆ. ಕಂಪ್ಯೂಟರ್‌ ಜ್ಞಾನ ಇದ್ದಲ್ಲಿ ಉದ್ಯೋಗ ಖಂಡಿತ ಎಂದರೆ ತಪ್ಪಾಗಲಾರದು.

Advertisement

. ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಹೊಸ ಆವಿಷ್ಕಾರಗಳಿಗೆ ಹೇಗೆ ಅವಕಾಶವಿದೆ?
ಎಲ್ಲ ಕ್ಷೇತ್ರಗಳಲ್ಲೂ ಆಯಾಯಾ ಕ್ಷೇತ್ರಗಳಿಗೆ ಅವಶ್ಯವಿರುವ ವಿಚಾರಗಳಲ್ಲಿ ಆವಿಷ್ಕಾರಗಳು ನಿರಂತರವಾಗಿ ನಡೆಯುತ್ತಿರುತ್ತದೆ. ಮುಖ್ಯವಾಗಿ ತಾಂತ್ರಿಕ ವಲಯದಲ್ಲಿ. ಹೊಸ ಸಾಫ್ಟ್‌ವೇರ್‌ ಅಥವಾ ಇನ್ಯಾವುದೋ ವಿಚಾರಗಳಲ್ಲಿ ಸಂಶೋಧನೆ ಮಾಡಲು ಬಯಸುವವರಿಗೆ ಸರಕಾರ ವಿವಿಧ ಯೋಜನೆಗಳ ಮೂಲಕ ಬೆಂಬಲ ನೀಡುತ್ತಿದೆ. ಕಂಪ್ಯೂಟರ್‌ ಸೈನ್ಸ್‌ ಭಾಗದಲ್ಲಿ ಸಂಶೋಧನೆಗಳನ್ನು ಮಾಡಲು ಬಿಎಸ್ಸಿ ಕಂಪ್ಯೂಟರ್‌ ಸೈನ್ಸ್‌, ಎಂಎಸ್ಸಿ ಕಂಪ್ಯೂಟರ್‌ ಸೈನ್ಸ್‌, ಎಂ.ಡಿ. ಮೊದಲಾದ ಕೋರ್ಸ್‌ ಮಾಡಬೇಕಾಗುತ್ತದೆ.

. ಪ್ರಸ್ತುತ ಭಾರತದಲ್ಲಿ ಕಂಪ್ಯೂಟರ್‌ ಸೈನ್ಸ್‌ ಶಿಕ್ಷಣದ ಬೇಡಿಕೆ ಹೇಗಿದೆ?
ತುಂಬಾ ಚೆನ್ನಾಗಿದೆ. ಬೆಂಗಳೂರನ್ನು ಸಿಲಿಕಾನ್‌ ಸಿಟಿ ಎಂದು ಕರೆಯಲಾಗುತ್ತದೆ. ಅಲ್ಲಿ ಅಷ್ಟು ಸಾಫ್ಟ್ವೇರ್‌ ಕಂಪೆನಿಗಳಿವೆ. ಅದರಂತೆ ಭಾರತದಲ್ಲಿ ಸಂಶೋಧನೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪಿಯುಸಿ ಆದ ಮೇಲೆ ಬಿಇ ಕಂಪ್ಯೂಟರ್‌ ಸೈನ್ಸ್‌, ಬಿಎಸ್ಸಿ ಕಂಪ್ಯೂಟರ್‌ ಸೈನ್ಸ್‌, ಎಂಟೆಕ್‌, ಎಂಎಸ್ಸಿ ಕಂಪ್ಯೂಟರ್‌ ಸೈನ್ಸ್‌ ಕೋರ್ಸ್‌ ಅಲ್ಲದೆ ಹೊಸದಾಗಿ ಬಂದಿರುವ ಡೇಟಾ ಸೈನ್ಸ್‌ ಮೊದಲಾದ ಕೋರ್ಸ್‌ಗಳನ್ನು ಮಾಡಿ ಉತ್ತಮ ವೇತನದೊಂದಿಗೆ ಉದ್ಯೋಗ ಪಡೆದುಕೊಳ್ಳಬಹುದು.

ಕಂಪ್ಯೂಟರ್‌ ವಿಜ್ಞಾನದಿಂದ ಏನು ಲಾಭ ?
ಬ್ಯಾಂಕ್‌, ಬಸ್‌ ಕಾಯ್ದಿರಿಸುವಿಕೆ, ಆನ್‌ಲೈನ್‌  ಪರೀಕ್ಷೆ, ಆಧಾರ್‌ ಕಾರ್ಡ್‌, ಮತದಾನ ಪ್ರಕ್ರಿಯೆ, ದಾಖಲೆಗಳ ಪರಿಶೀಲನೆಗೆ ಈ ಹಿಂದೆ ಹಲವು ಸಮಯ ಬೇಕಾಗುತ್ತಿತ್ತು. ಈಗ ಒಂದೇ ಕ್ಷಣದಲ್ಲಿ ಎಲ್ಲ ದಾಖಲೆಗಳು ಸಿಗುತ್ತಿವೆ. ರೈತನಿಂದ ಹಿಡಿದು ದೊಡ್ಡ ಆಫೀಸರ್‌ ವರೆಗೂ ಕಂಪ್ಯೂಟರ್‌ ವಿಜ್ಞಾನದ ಕೊಡುಗೆ ಅಪಾರ.

 ಪ್ರಜ್ಞಾ ಶೆಟ್ಟಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next