ಬೀದರ: 2020-21ನೇ ಹಂಗಾಮಿನಲ್ಲಿ ಖರೀದಿಸಿದ ಕಬ್ಬಿಗೆ ಎಫ್‌ಆರ್‌ಪಿ ದರದಂತೆ ಈಗಾಗಲೇ ರೈತರಿಗೆ ಸಂಪೂರ್ಣ ಬಿಲ್ ಪಾವತಿಸಲಾಗಿದ್ದು, ಆರ್ಥಿಕ ಪರಿಸ್ಥಿತಿ ಹಿನ್ನೆಲೆ ಹೆಚ್ಚಿನ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದರೂ ಸರ್ಕಾರದ ಹಂತದಲ್ಲಿರುವ ಕಾರ್ಖಾನೆ ಪ್ರಸ್ತಾವನೆಗಳಿಗೆ ಆರ್ಥಿಕ ಸಹಾಯ ಬಂದಾಗ ಹೆಚ್ಚುವರಿ ಹಣ ಪಾವತಿಸಲು ಕ್ರಮ ವಹಿಸಲಾಗುವುದು ಎಂದು ಎನ್‌ಎಸ್‌ಎಸ್‌ಕೆ ಕಾರ್ಖಾನೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಹೇಳಿದರು.
ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ 36ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಖಾನೆಯಲ್ಲಿ ಈಗಿರುವ ಸಕ್ಕರೆ ಘಟಕದ ಜೊತೆ 60 ಕೆಎಲ್‌ಪಿಡಿ ಡಿಸ್ಟಿಲರಿ ಎಥೆನಾಲ್ ಘಟಕ ಹಾಗೂ ಬಯೋ- ಸಿಎನ್‌ಜಿ ಗೊಬ್ಬರ ಘಟಕ ಸ್ಥಾಪನೆಗಾಗಿ ಪ್ರಯತ್ನಿಸಲಾಗುತ್ತಿದೆ ಎಂದರು.
ಕಾರ್ಖಾನೆ ಅಭಿವೃದ್ಧಿಗೆ ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಎಲ್ಲ ರೀತಿಯಿಂದ ಸಹಾಯ ಸಹಕಾರ ನೀಡುತ್ತಿದ್ದಾರೆ ಎಂದರು.
ಈ ವೇಳೆ ನಿರ್ದೇಶಕರಾದ ಉಮಾಕಾಂತ ನಾಗಮಾರಪಳ್ಳಿ, ಝರೆಪ್ಪಾ ಮಮದಾಪೂರೆ, ಚಂದ್ರಕಾಂತ ಪಾಟೀಲ, ರಾಜಕುಮಾರ ಕರಂಜಿ, ಶಂಕರೆಪ್ಪ ಪಾಟೀಲ, ಶಿವಬಸಪ್ಪ ಚೆನ್ನಮಲ್ಲೆ, ಸಿದ್ರಾಮ ವಾಘಮಾರೆ, ವಿಜಯಕುಮಾರ ಪಿ. ಪಾಟೀಲ, ಸೀತಾರಾಮ ಖೇಮಾ, ಶೋಭಾವತಿ ಪಾಟೀಲ, ಮಲ್ಲಮ್ಮಾ ಪಾಟೀಲ, ಶಶಿಕುಮಾರ ಪಾಟೀಲ, ವೀರಶೆಟ್ಟಿ ಪಟೆ°, ನಾಗರೆಡ್ಡಿ ಯಾಚೆ ಸೇರಿದಂತೆ ಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಅ ಧಿಕಾರಿಗಳು ಇದ್ದರು. ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್ ಅಪರಂಜಿ ಸ್ವಾಗತಿಸಿದರು. ಉಪಾಧ್ಯಕ್ಷ ಬಾಲಾಜಿ ಚವ್ಹಾಣ ವಂದಿಸಿದರು.