Advertisement

ಎಲ್ಲವೂ ಅಂದುಕೊಂಡಂತಾದರೆ ವರ್ಷಾಂತ್ಯದ ವೇಳೆಗೆ ಕೋವಿಡ್ ಲಸಿಕೆ ಸಿದ್ಧ: ಡಾ. ಹರ್ಷವರ್ಧನ್

06:36 PM Aug 23, 2020 | Mithun PG |

ನವದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದರೇ 2020ರ ವರ್ಷಾಂತ್ಯದ ವೇಳೆಗೆ ಕೋವಿಡ್ ಲಸಿಕೆ ದೇಶದಲ್ಲಿ ಸಿದ್ದವಿರುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

Advertisement

ಪ್ರಸ್ತುತ ಎರಡು ಸ್ವದೇಶಿ ಸೇರಿದಂತೆ ಮೂರು ಕೋವಿಡ್ ಲಸಿಕೆಗಳು ಅಭಿವೃದ್ಧಿಯಾಗುತ್ತಿದೆ. ಮಾತ್ರವಲ್ಲದೆ ವಿವಿಧ ಹಂತಗಳಲ್ಲಿ ಪ್ರಯೋಗಕ್ಕೆ ಒಳಪಟ್ಟಿದೆ. ಅದರಲ್ಲೂ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 2 ಲಸಿಕೆಗಳು ಮೊದಲ ಹಂತದಲ್ಲಿ ಮಾನವನ ಮೇಲೆ ಪ್ರಯೋಗಕ್ಕೆ ಒಳಪಟ್ಟಿದೆ. ಇದೀಗ ಎರಡನೇ ಹಂತದ ಪ್ರಯೋಗಕ್ಕೆ ಒಳಪಡುತ್ತಿದೆ ಎಂದಿದ್ದಾರೆ.

ಸ್ವದೇಶಿ ಲಸಿಕೆಗಳಲ್ಲಿ ಒಂದನ್ನು ಭಾರತ್ ಬಯೋಟೆಕ್ ಕಂಪೆನಿಯೂ ಐಸಿಎಂಆರ್ ಸಹಯೋಗದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಮತ್ತೊಂದನ್ನು ಝೈಡಿಸ್ ಕ್ಯಾಡಿಲ್ಲಾ ಕಂಪೆನಿ ತಯಾರಿಸುತ್ತಿದೆ ಎಂದು ಐಸಿಎಂಆರ್ ನಿರ್ದೇಶಕ ಡಾ. ಬಲರಾಮ್ ಭಾರ್ಗವ್ ತಿಳಿಸಿದ್ದಾರೆ.

ಏತನ್ಮಧ್ಯೆ ಐಸಿಎಂಆರ್ ಸಂಸ್ಥೆ ಭಾರತ ಮತ್ತು ವಿದೇಶಗಳಲ್ಲಿ ಕೋವಿಡ್ ಲಸಿಕೆಗೆ ಅಭಿವೃದ್ದಿಗೆ  ಸಂಬಂಧಿಸಿದ ಮಾಹಿತಿಯನ್ನು ಒದಗಿಸುವ ಪೋರ್ಟಲ್ ಒಂದನ್ನು ಅಭಿವೃದ್ಧಿಪಡಿಸುತ್ತಿದ್ದು, ಇಂಗ್ಲೀಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next