Advertisement
ನಗರದ ಕರ್ನಾಟಕ ಕಾಲೇಜಿನಲ್ಲಿ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಸಚಿವಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಗಾರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇ-ತ್ಯಾಜ್ಯದ ಬಗ್ಗೆ ಅರಿವು ಮೂಡಿಸದಿದ್ದಲ್ಲಿ ಭವಿಷ್ಯದಲ್ಲಿ ಆಪತ್ತಾಗುವ ಯಾವುದೇ ಸಂದೇಹವಿಲ್ಲ ಎಂದು ಎಚ್ಚರಿಕೆ ನೀಡಿದರು.
Related Articles
Advertisement
ಕಾರ್ಯಕ್ರಮ ಸಂಯೋಜಕ ಪ್ರೊ| ರಾಜೇಂದ್ರ ಬಿರಾದಾರ 2016ರ ಇ-ತ್ಯಾಜ್ಯ ಕಾಯ್ದೆ ಬಗ್ಗೆ ಮಾತನಾಡಿ, ಪ್ರತಿಯೊಬ್ಬರಿಗೆ ಸಂಬಂಧಪಟ್ಟ ಕಾನೂನು ಹಾಗೂ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಿದರು. ರಾಜ್ಯ ಹಾಗೂ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜವಾಬ್ದಾರಿ ಹಾಗೂ ಪ್ರತಿ ವರ್ಷ ಮಾಲಿನ್ಯ ಮಂಡಳಿಗೆ ರಿಟರ್ನ್ ಫೈಲ್ ಮಾಡುವ ಕುರಿತು ಮಾಹಿತಿ ನೀಡಿದರು.
ಪ್ರಾಚಾರ್ಯ ಡಾ| ಎಂ.ಎಸ್. ಪಾಟೀಲ ಅಧ್ಯಕ್ಷತೆ ಮಾತನಾಡಿದರು. ಶಿಬಿರಾರ್ಥಿಗಳಿಗಾಗಿ ಇ-ತ್ಯಾಜ್ಯದ ಬಗ್ಗೆ ರಸ ಪ್ರಶ್ನೆ ಕಾರ್ಯಕ್ರಮ ಹಾಗೂ ಅವರನ್ನೊಳಗೊಂಡ ಇ-ತ್ಯಾಜ್ಯದ ಪೆನಾಲ್ ಗುಂಪು ಸಂದರ್ಶನ ಆಯೋಜಿಸಲಾಗಿತ್ತು. ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಬಹುಮಾನ ವಿತರಿಸಲಾಯಿತು.
ಪ್ರೊ| ಭರತರಾಜ, ಪ್ರೊ| ಎ.ಡಿ. ಶೆಟಕಾರ, ಪ್ರೊ| ರಮೇಶ ಪಾಟೀಲ ಪ್ರೊ| ವೈಜಿನಾಥ ಚಿಕಬಸ್ಸೆ, ಪ್ರೊ| ಅಶೋಕ ಹುಡೆದ, ಡಾ| ಯು.ಎಸ್. ಪಾಟೀಲ, ಸೋಮನಾಥ ಬಿರಾದಾರ, ಡಾ| ಹೆಬ್ಟಾಳೆ, ಸಚೀನ ವಿಶ್ವಕರ್ಮ, ವಿಶಾಲಾಕ್ಷಿ, ಶಿವಲೀಲಾ ಹಾಗೂ ಪ್ರೊ| ರವಿಚಂದ್ರನ್ ಸೇರಿದಂತೆ ಒಟ್ಟು 45 ಇಲಾಖೆಗಳಿಂದ ವಿವಿಧ ಜಿಲ್ಲೆಗಳಿಂದ ಒಟ್ಟು 135 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಪ್ರೊ| ವಿನೋದಕುಮಾರ ನಿರೂಪಿಸಿದರು. ಪ್ರೊ| ರಾಜೇಂದ್ರ ಬಿರಾದಾರ ವಂದಿಸಿದರು.