ಬೇಲೂರು: ಪರಿಸರ ಉಳಿಸಲು ಸಸಿ ನೆಟ್ಟು ಬೆಳೆಸಿ ಪೋಷಿಸಿರುವ ಮರಗಳನ್ನು ಸರ್ಕಾರ ಕಡಿಯಲು ಮುಂದಾದರೆ ನಾನು ಬೆಳೆಸಿ ರುವ ಮರದ ರಸ್ತೆಯಲ್ಲಿ ಮಲಗಿ ಪ್ರತಿಭಟಿಸುವುದಾಗಿ ಸಾಲುಮರದ ತಿಮ್ಮಕ್ಕ ಎಚ್ಚರಿಸಿದರು.
ಬೇಲೂರು ತಾಲೂಕು ಕಚೇರಿ ಮುಂಭಾಗ ಸಸಿ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನವಿ ಮಾಡಿದ್ದೇನೆ: ತಾನು ಬೆಳೆದ ಗ್ರಾಮ ದಲ್ಲಿ ನೂರಾರು ಮರಗಳನ್ನು ರಸ್ತೆ ಬದಿಯಲ್ಲಿ ನೆಟ್ಟು ಪೋಷಿಸಿದ್ದೇನೆ. ಇತ್ತೀಚಿಗೆ ಅಭಿವೃದ್ಧಿ ನೆಪದಲ್ಲಿ ಬೆಳೆದಿರುವ ಮರಗಳನ್ನು ಕಡಿ ಯಲು ಸರ್ಕಾರ ಮುಂದಾಗಿದೆ. ಬೆಳೆಸಿದ ಮರಗಳನ್ನು ಕಡಿಯಬಾರದು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ. ಅವರು ಮರ ಕಡಿಯುವುದಿಲ್ಲ ಎಂದು ತಿಳಿಸಿದ್ದಾರೆ. ಆದರೂ, ಸರ್ಕಾರ ವೇನಾದರೂ ಮರ ಕಡಿಯಲು ಮುಂದಾ ದರೆ, ತಾನು ಬೆಳೆಸಿದ ಮರದ ರಸ್ತೆಯಲ್ಲಿ ಮಲಗಿ ಪ್ರತಿಭಟಿಸುವುದಾಗಿ ಹೇಳಿದರು.
ಪರಿಸರ ರಕ್ಷಿಸಿ: ಮನುಷ್ಯನಿಗೆ ಅವಶ್ಯಕವಾಗಿ ಜೀವನ ನಡೆಸಲು ಮರಗಿಡಗಳು ಬೇಕಾ ಗಿದೆ. ಇಂದಿನ ದಿನಗಳಲ್ಲಿ ಪರಿಸರ ನಾಶ ಮಾಡುವುದೇ ನಮ್ಮ ಕೆಲಸವಾಗಿದ್ದು ಪರಿಸರ ಉಳಿದರೆ ನಾವೆಲ್ಲ ಉಳಿದಂತೆ. ಹೀಗಾಗಿ ಪ್ರತಿಯೊಬ್ಬರೂ ಮರಗಿಡ ಬೆಳಸಲು ಮುಂದಾಗಿ ಎಂದು ಸಲಹೆ ನೀಡಿದರು.
ಪ್ರೇರಣೆ ನೀಡಿದೆ: ತಹಶೀಲ್ದಾರ್ ಮೇಘನಾ ಮಾತ ನಾಡಿ, ಪರಿಸರ ಸಂಕರಕ್ಷಣೆ ಮಾಡು ವುದು ಎಲ್ಲರ ಕರ್ತವ್ಯ. ಇಳಿ ವಯಸ್ಸಿನಲ್ಲಿ ಸಾಲುಮರದ ತಿಮ್ಮಕ್ಕನವರು ಪರಿಸರದ ಮೇಲೆ ಇಟ್ಟಿರುವ ಕಾಳಜಿ ತನಗೆ ಪ್ರೇರಣೆ ನೀಡಿದೆ ಎಂದರು.
ಪ್ರಸಕ್ತ ವರ್ಷದಲ್ಲಿ 8 ಸಾವಿರ ಸಸಿ ನೆಡುವ ಉದ್ದೇಶ ಹೊಂದಿದ್ದೆ. ಆದರೆ, ತಿಮ್ಮಕ್ಕನವರು ಹೇಳಿದ ಮಾತಿಗೆ ಪ್ರೇರಣೆಯಾಗಿ 10 ಸಾವಿರ ಸಸಿ ನೆಡುವ ಯೋಜನೆ ಹಾಕುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ತಿಮ್ಮಕ್ಕನವರ ಮಗ ಉಮೇಶ್, ಕಂದಾಯ ಇಲಾಖೆ ಉಪತಹಶೀಲ್ದಾರ್ ಪ್ರದೀಪ್, ಶಿರಸ್ತೇದಾರ್ ನಾಗರಾಜ್, ಸಿಬ್ಬಂದಿ ಇದ್ದರು.