Advertisement

ಕೋವಿಡ್ ಹೆಚ್ಚಾದರೆ ಹಿಂದೆ ಇದ್ದ ನಿಯಮಗಳೇ ಜಾರಿ: ಸಚಿವ ಅಶೋಕ್

01:32 PM Nov 30, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಉಲ್ಬಣಿಸಿದರೆ ಹಿಂದೆ ಇದ್ದಂತಹ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ಸಚಿವ ಆರ್.ಅಶೋಕ್ ಹೇಳಿದರು.

Advertisement

ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಾಸ್ಕ್ ಬಳಸುದು ಕಡ್ಡಾಯವಾಗಿ ಮುಂದುವರೆಯಲಿದೆ. ರಾಜಕೀಯ ಸಮಾರಂಭ, ಮದುವೆ ನಿಯಮ ಎಲ್ಲರಿಗೂ ಅನ್ವಯವಾಗಲಿದೆ. ನಿಯಮ ಪಾಲನೆಯು ಬಿಜೆಪಿ, ಕಾಂಗ್ರೆಸ್, ಜನತಾದಳ ಎಲ್ಲದಕ್ಕೂ ಅನ್ವಯವಾಗುತ್ತದೆ ಎಂದರು.

ಮೈಸೂರು, ಚಾಮರಾಜನಗರ ಗಡಿಗಳಲ್ಲಿ ಸ್ಟ್ರಿಕ್ಟ್ ಮಾಡಲಾಗಿದೆ. ದಕ್ಷಿಣ ಆಫ್ರಿಕಾ ಸೇರಿದಂತೆ ಹಲವೆಡೆ ಕಾಣಿಸಿಕೊಂಡಿದೆ. ದೇಶಾದ್ಯಂತ ಹರಡಿಕೊಂಡಿದೆ. ವಿದೇಶದಿಂದ ಬರುವವರ ಮೇಲೆ ಕಣ್ಣಿಡಲಾಗಿದೆ. ಸ್ವತಃ ಜಿಲ್ಲಾಧಿಕಾರಿಗಳು ಗಡಿಯಲ್ಲಿ ಕಾಯುವಂತೆ ಸೂಚನೆ ನೀಡಲಾಗಿದೆ. ಕೇರಳದಿಂದ ಬರುವ ನರ್ಸಿಂಗ್ ವಿದ್ಯಾರ್ಥಿಗಳ ಮೇಲೆ ನಿಗಾ ಇಡಲಾಗಿದೆ. ಲಾಕ್ ಡೌನ್ ಮಾಡುವ ಪ್ರಸಂಗ ಬಂದಿಲ್ಲ ಎಂದರು.

ಇದನ್ನೂ ಓದಿ:ಭಾರತದಲ್ಲಿ ಈವರೆಗೆ ಒಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ; ಕೇಂದ್ರ ಸಚಿವ ಮಾಂಡವೀಯಾ

ಮುರುಗೇಶ್ ನಿರಾಣಿ ಸಿಎಂ ಆಗಲಿದ್ದಾರೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರೂ ತಿರುಕನ ಕನಸು ಕಾಣುವುದು ಬೇಡ. ನಮ್ಮ ಕೇಂದ್ರದ ನಾಯಕ ಮೋದಿ, ಅಮಿತ್ ಶಾ ಅವರು ತೀರ್ಮಾನದಂತೆ ಸಿಎಂ‌ ಆಗಿ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಇದನ್ನು ನಮ್ಮ ವರಿಷ್ಠರೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.

Advertisement

ಜನ ಸಂಕಷ್ಟ ಸಂದರ್ಭದಲ್ಲಿ ಜನರ ಧ್ವನಿಯಾಗಿ ಸ್ಪಂದನೆ ಮಾಡಬೇಕು. ಬೊಮ್ಮಾಯಿಗೆ ಕಾಮನ್ ಸಿಎಂ ಅಂತ ಹೆಸರಿದೆ. ಈಗ ಬಂದಿರೋ ಎಲ್ಲಾ ಸಂಕಷ್ಟಗಳನ್ನ ಒಳ್ಳೆಯ ರೀತಿ ಕೆಲಸ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುವುದು. ಈಶ್ವರಪ್ಪ ತಮಾಷೆಯಾಗಿ ಹೇಳಿದ್ದಾರೆ ಎಂದರು.

ಅಶೋಕ್ ಸಿಎಂ ಆಗುವುದಿಲ್ಲವೇ ಎಂಬ ವಿಚಾರಕ್ಕೆ ಮಾತನಾಡಿದ ಅವರು, ರಾಜ್ಯದ ಚುಕ್ಕಾಣಿ ಯಾರು ಹಿಡಿಬೇಕೆಂದು ಜನ ತೀರ್ಮಾನ ಮಾಡುತ್ತಾರೆ. ನಾಯಕರು, ಹಣೆ ಬರಹ ತೀರ್ಮಾನ ಆಗಲಿದೆ. ಈಗ ಬೊಮ್ಮಾಯಿ ಅವರಿಗೆ ಒಲಿದು ಬಂದಿದೆ. ಬಿಸಿಲಿನ ಕುದುರೆ ಮೇಲೆ ಹೋಗಬಾರದು ಎಂದರು

Advertisement

Udayavani is now on Telegram. Click here to join our channel and stay updated with the latest news.

Next