Advertisement
ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ಡಾ| ಪ್ರಭಾಕರ ಭಟ್ ಅವರನ್ನು ಏಕವಚನದಿಂದ ನಿಂದಿಸಿರುವ ಸಚಿವರ ದರ್ಪಕ್ಕೆ ಜಿಲ್ಲೆಯ ಜನತೆ ಆಕ್ರೋಶಿತರಾಗಿದ್ದಾರೆ. ಅಲ್ಪಸಂಖ್ಯಾಕರನ್ನು ಓಲೈಸುವ ಏಕೈಕ ಉ¨ªೇಶದಿಂದ ಸಚಿವರು ಹಿಂದೂ ನಾಯಕರ ಬಂಧನಕ್ಕೆ ಒತ್ತಡ ಹೇರುತ್ತಿದ್ದಾರೆ. ಸಚಿವರ ಒತ್ತಡಕ್ಕೆ ಮಣಿದು ವಿನಾ ಕಾರಣ ಡಾ| ಪ್ರಭಾಕರ ಭಟ್ ವಿರುದ್ಧ ಕೇಸು ದಾಖಲಿಸಿದರೆ ಮುಂದೆ ನಡೆಯಬಹುದಾದ ಅನಾಹುತಗಳಿಗೆ ಸಚಿವರೇ ನೇರ ಹೊಣೆಯಾಗಲಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ರಾಜಕೀಯ ಹಸ್ತಕ್ಷೇಪವೇ ಕಲ್ಲಡ್ಕದ ಕೋಮು ಗಲಭೆಗೆ ಹಾಗೂ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿರುವುದು ವಾಸ್ತವ ಸಂಗತಿಯಾಗಿದೆ. ಈ ಹಿಂದೆ ಮೊದಲ ಬಾರಿಗೆ ಶಾಸಕನಾಗಿದ್ದಾಗ ಬಂಟ್ವಾಳದಲ್ಲಿ ಡಾ| ಪ್ರಭಾಕರ್ ಭಟ್ ಅವರನ್ನು ಅಟ್ಟಾಡಿಸಿ ಓಡಿಸಿದ್ದೆ ಎಂಬ ಅವರ ಆಕ್ಷೇಪಾರ್ಹ ಹೇಳಿಕೆ ಸಚಿವರ ಕ್ರಿಮಿನಲ್ ಪ್ರವೃತ್ತಿಯನ್ನು ತೋರಿಸುತ್ತದೆ. ಇಂತಹ ಪ್ರವೃತ್ತಿಯ ಉಸ್ತುವಾರಿ ಸಚಿವರು ಕರ್ನಾಟಕ ಸರಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವುದು ಸೂಕ್ತವಲ್ಲ. ಮುಖ್ಯಮಂತ್ರಿಯವರು ಕೂಡಲೇ ರಮಾನಾಥ ರೈ ಅವರಿಂದ ರಾಜೀನಾಮೆ ಪಡೆಯಬೇಕು ಇಲ್ಲವೆ ಸಂಪುಟದಿಂದ ವಜಾ ಮಾಡ ಬೇಕು ಎಂದು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಕ್ಯಾ| ಗಣೇಶ್ ಕಾರ್ಣಿಕ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ. ಯಾವುದೇ ದಾಖಲೆಗಳಿಲ್ಲದೆ ಡಾ| ಪ್ರಭಾಕರ್ ಭಟ್ ಅವರನ್ನು ಬಂಧಿಸುವಂತೆ, ಅವರ ವಿರುದ್ಧ ಸೆಕ್ಷನ್ 307 ದಾಖಲಿಸುವಂತೆ ಪೊಲೀಸ್‌ಅಧಿಕಾರಿಗೆ ತಾಕೀತು ಮಾಡುವ ಉಸ್ತುವಾರಿ ಸಚಿವರ ವರ್ತನೆ ಸರಿಯಲ್ಲ ಎಂದಿದ್ದಾರೆ.
Related Articles
Advertisement
ಅಹಂಕಾರದ ಪರಮಾವಧಿನೇತ್ರಾವತಿ ಹೋರಾಟಗಾರರನ್ನು ಬಂಧಿಸು ವಂತೆ ಉಸ್ತುವಾರಿ ಸಚಿವರು ಹೇಳಿರುವುದು ಅಹಂಕಾರದ ಪರಮಾವಧಿಯಾಗಿದೆ. ಸಂಘ ಪರಿವಾರದ ಮನಸ್ಥಿತಿಯ ಪೊಲೀಸರನ್ನು ಎತ್ತಂಗಡಿ ಮಾಡಿಲ್ಲ ಯಾಕೆಂದು ಸಚಿವರು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ತಾಳಕ್ಕೆ ತಕ್ಕಂತೆ ಪೊಲೀಸ್ ಇಲಾಖೆ ಕುಣಿಯಬೇಕೆಂದು ಬಯಸುವ ಇಂತಹ ಸಚಿವರು ಇರುವ ತನಕ ಶಾಂತಿ ನೆಲೆಸಲು ಸಾಧ್ಯವೇಎಂದು ನಳಿನ್ ಕುಮಾರ್ ಪ್ರಶ್ನಿಸಿದ್ದಾರೆ.