ಶಿವಮೊಗ್ಗ: ಸೋಮವಾರ ಬೆಳ್ಳಂಬೆಳಗ್ಗೆ ಶಿವಮೊಗ್ಗ ರೌಡಿ ಶೀಟರ್‌ಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಎಂ. ಅಶ್ವಿನಿ ಬಿಸಿ ಮುಟ್ಟಿಸಿದ್ದಾರೆ.
ನಗರದ ಡಿ.ಎ.ಆರ್. ಮೈದಾನದಲ್ಲಿ ರೌಡಿ ಶೀಟರ್‌ಗಳ ಪರೇಡ್ ನಡೆಸಿದ ಅವರು, ಕಾನೂನು ಮೀರಿ ನಡವಳಿಕೆ ತೋರಿದರೆ ಕಠಿಣ ಕ್ರಮ ಅನಿವಾರ್ಯ ಎಂದು ಖಡಕ್ ಎಚ್ಚರಿಕೆ ನೀಡಿದರು.
ಸುಮಾರು 400 ಕ್ಕೂ ಹೆಚ್ಚು ರೌಡಿ ಶೀಟರ್‌ಗಳನ್ನು ಒಬ್ಬೊರನ್ನೆ ಕರೆಸಿ, ಖಡಕ್ ಎಚ್ಚರಿಕೆ ನೀಡಿದ ಎಸ್.ಪಿ. ಡಾ| ಅಶ್ವಿನಿ, ಪ್ರತಿಯೊಬ್ಬರ ಮಾಹಿತಿ ಪಡೆದರು.
ಇನ್ನು ಕಳ್ಳತನ, ದರೋಡೆ ಸೇರಿದಂತೆ ಹಲವಾರು ಕೊಲೆ ಕೇಸ್‌ಗಳಲ್ಲಿ ಆರೋಪಿತರಾಗಿರುವವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮುಂದಿನ ದಿನಗಳಲ್ಲಿ ಬರುವ ರಂಜಾನ್ ಸೇರಿದಂತೆ, ಹಬ್ಬಗಳ ಸಂದರ್ಭದಲ್ಲಿ ಶಾಂತಿಯಿಂದ ಇರಬೇಕು ಎಂದರು. ರಾತ್ರಿ ಗಸ್ತು ತಿರುಗುವ ವೇಳೆ ರೌಡಿ ಪಟ್ಟಿಯಲ್ಲಿರುವ ಹಲವರು ತ್ರಿಬಲ್ ರೈಡಿಂಗ್ ಸೇರಿದಂತೆ ಅಲ್ಲಲ್ಲಿ ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯುತ್ತಿರುವುದು ಕಂಡು ಬಂದಿದೆ. ಇನ್ನು ಮುಂದೆ ಹಾಗಾಗುವಂತಿಲ್ಲ. ಸಾರ್ವಜನಿಕರಂತೆ ಯಾವಾಗ ಅಂದರೆ ಅವಾಗ ಹೊರಗೆ ಓಡಾಡುವಂತಿಲ್ಲ. ರಾತ್ರಿ 10:30ಕ್ಕೂ ಮೊದಲು ಇವರೆಲ್ಲ ಮನೆ ಸೇರಿಕೊಳ್ಳಬೇಕು. ಇನ್ನು, ಬೈಕ್‌ನಲ್ಲಿ ಥ್ರಿಬಲ್ ರೈಡಿಂಗ್, ವೀಲಿಂಗ್ ಮಾಡುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವುದು. ಇನ್ನು ವಯಸ್ಸಾಗಿರುವ ಕೆಲ ರೌಡಿ ಶೀಟರ್‌ಗಳು ಕೂಡ, ಊರುಗೋಲಿನೊಂದಿಗೆ ರೌಡಿ ಪೆರೆಡ್‌ನಲ್ಲಿ ಭಾಗವಹಿಸಿದ್ದರು. ಈ ವೇಳೆ ಎಸ್ಪಿ ಡಾ| ಅಶ್ವಿನಿ, ಊರುಗೋಲನ್ನು ಬಳಸಿ ಯಾರ ಮೇಲೂ ಹಲ್ಲೆ ನಡೆಸಬಾರದು ಎಂದು ನಗೆ ಚಟಾಕಿ ಹಾರಿಸಿದರು. ಬೇಲ್ ಮೇಲೆ ಹೊರಬಂದಿರುವ ರೌಡಿಗಳಿಗೆ ಎಚ್ಚರಿಕೆಯಿಂದಿರ ಇರಬೇಕು ಎಂದರು.