Advertisement

ತಾಕತ್ತಿದ್ದರೆ ಅಭಿವೃದ್ಧಿ ಹೆಸರಲ್ಲಿ ಮತ ಕೇಳಿ: ಶಾಸಕ ರಾಜುಗೌಡ

06:02 PM Apr 04, 2022 | Team Udayavani |

ಸುರಪುರ: ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ಗಾಳಿ ಬಿಟ್ಟಾಗ ಛತ್ರಿ ಹಿಡಿಯುವವರು. 2013ರಲ್ಲಿ ಸಿಎಂ ಸ್ಥಾನಕ್ಕೆ ನಡೆದ ಮತದಾನದ ವೇಳೆ ಸಿದ್ದರಾಮಯ್ಯ ವಿರುದ್ಧ ಮತ ಚಲಾಯಿಸಿದ್ದರು. ಇವತ್ತು ಅದೇ ಸಿದ್ದರಾಮಯ್ಯನವರ ಹೆಸರಲ್ಲಿ ಮತ ಕೇಳುವುದು ಯಾವ ನ್ಯಾಯ. ತಾಕತ್ತಿದ್ದರೆ ಕ್ಷೇತ್ರದಲ್ಲಿ ನಿವೇನು ಅಭಿವೃದ್ಧಿ ಮಾಡಿದ್ದೀರಿ ಅನ್ನುವುದನ್ನು ತೋರಿಸಿ ಮತ ಕೇಳಿ ಎಂದು ಶಾಸಕ ರಾಜುಗೌಡ ಸವಾಲ್‌ ಎಸೆದರು.

Advertisement

ತಾಲೂಕಿನ ಅಗತೀರ್ಥ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕುರುಬ ಸಮಾಜದ ನಾಯಕನೊಬ್ಬ ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸುವ ಉದ್ದೇಶದಿಂದ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಮತ ಹಾಕಿದವರು ಇವತ್ತು ಸಿದ್ದರಾಮಯ್ಯನವರನ್ನು ಮುಂದಿಟ್ಟುಕೊಂಡು ಮತ ಕೇಳುವುದು ಯಾವ ನ್ಯಾಯ. ಕ್ಷೇತ್ರದಲ್ಲಿ ಕುರುಬ ಸಮಾಜದವರನ್ನು ದಾರಿ ತಪ್ಪಿಸುವ ತಂತ್ರವಾಗಿದೆ. ಇದಕ್ಕೆಲ್ಲ ಕ್ಷೇತ್ರದ ಕುರುಬ ಸಮಾಜ ಬಾಂಧವರು ಮರುಳಾಗಬಾರದು ಎಂದರು.

ದಲಿತರ ಸಮುದಾಯದವರ ಬಳಿ ಖರ್ಗೆ ಸಾಹೇಬ್ರ ಹೆಸರೇಳುವುದು ಇನ್ನೊಂದು ಸಮುದಾಯದ ಬಳಿ ಆ ಜನಾಂಗದ ನಾಯಕರ ಹೆಸರೇಳುವುದು. ಇದು ಸರಿಯಲ್ಲ. ಮೂರು ಬಾರಿ ಶಾಸಕರಾಗಿದ್ದೀರಿ ಹಳ್ಳಿಯಿಂದ ದಿಲ್ಲಿವರೆಗೆ ಅಧಿ ಕಾರ ನಡೆಸಿದ್ದೀರಿ ಕ್ಷೇತ್ರದಲ್ಲಿ ನೀವು ಮಾಡಿದ ಅಭಿವೃದ್ಧಿಯನ್ನು ಜನರಿಗೆ ತಿಳಿಸಿ, ಅಭಿವೃದ್ಧಿ ಮೇಲೆ ಮತ ಕೇಳಿ. ಅದು ಬಿಟ್ಟು ಯಾರದೋ ಹೆಸರೇಳಿ ಮತ ಕೇಳುವುದು ಶೋಭೆ ತರುವಂತ್ತದಲ್ಲ ಎಂದು ದೂರಿದರು.

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ 100ಕ್ಕೂ ಹೆಚ್ಚು ಜನರಿಗೆ ಶಾಸಕ ರಾಜುಗೌಡ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಜಿಪಂ ಮಾಜಿ ಅಧ್ಯಕ್ಷರಾದ ರಾಜಾ ಹನುಮಪ್ಪ ನಾಯಕ ತಾತಾ, ಯಲ್ಲಪ್ಪ ಕುರುಕುಂದಿ, ಬಸನಗೌಡ ಪಾಟೀಲ ಯಡಿಯಾಪುರ, ಪಕ್ಷದ ತಾಲೂಕು ಅಧ್ಯಕ್ಷ ಮೇಲಪ್ಪ ಗುಳಗಿ, ಮುಖಂಡರಾದ ಎಚ್‌.ಸಿ. ಪಾಟೀಲ, ಡಾ| ಬಿ.ಎಂ. ಹಲ್ಲಿಕೋಟಿ, ಮಲ್ಲು ದಂಡಿನ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next