Advertisement

‘ಆರ್ಚರ್‌ ಇದ್ದರೆ ಇಂಗ್ಲೆಂಡ್‌ ಇನ್ನಷ್ಟು ಬಲಿಷ್ಠವಾಗುತ್ತಿತ್ತು’

03:01 AM May 10, 2019 | Sriram |

ಲಂಡನ್‌: ವೇಗಿ ಜೋಫ‌್ರ ಆರ್ಚರ್‌ ಅವರನ್ನು ವಿಶ್ವಕಪ್‌ಗೆ ಆಯ್ಕೆ ಮಾಡಿದ್ದರೆ ಇಂಗ್ಲೆಂಡ್‌ ಇನ್ನಷ್ಟು ಬಲಿಷ್ಠ ತಂಡವಾಗುತ್ತಿತ್ತು ಎಂಬುದಾಗಿ ತಂಡದ ಮತ್ತೋರ್ವ ಸದಸ್ಯ ಲಿಯಮ್‌ ಪ್ಲಂಕೆಟ್ ಅಭಿಪ್ರಾಯಪಟ್ಟಿದ್ದಾರೆ.

Advertisement

ಬಾರ್ಬಡಾಸ್‌ ಮೂಲದ ಜೋಫ‌್ರ ಆರ್ಚರ್‌ ಇಂಗ್ಲೆಂಡಿನ ಪ್ರಾಥಮಿಕ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಅಂತಿಮ 15ರಿಂದ ಕೈಬಿಡಲಾಯಿತು.

‘ಆರ್ಚರ್‌ ಸಾಮರ್ಥ್ಯ ಪಾಕಿಸ್ಥಾನ ವಿರುದ್ಧದ ಮಳೆ ಪಂದ್ಯದಲ್ಲಿ ಮತ್ತೂಮ್ಮೆ ಅನಾವರಣಗೊಂಡಿದೆ. ಅವರ ಮೊದಲ ಸ್ಪೆಲ್ ಅತ್ಯಂತ ಘಾತಕ ವಾಗಿತ್ತು’ ಎಂಬುದಾಗಿ ಪ್ಲಂಕೆಟ್ ಹೇಳಿದರು. ‘ಓವಲ್ ಟ್ರ್ಯಾಕ್‌ ಆರ್ಚರ್‌ ಶೈಲಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಿತ್ತು. ಅವರು 93 ಕಿ.ಮೀ. ವೇಗದಲ್ಲಿ ಬೌಲಿಂಗ್‌ ನಡೆಸಿದ್ದರು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next