Advertisement

ರಾಮ ಮಂದಿರ ಉದ್ಘಾಟನೆ ದಿನ ಶಾಲೆಗೆ ರಜೆ ಹಾಕಿದರೇ ಸಾವಿರ ರೂ. ದಂಡ ಆರೋಪ; ವಿಹಿಂಪ ಆಕ್ರೋಶ

02:14 PM Jan 20, 2024 | Team Udayavani |

ಚಿಕ್ಕಮಗಳೂರು: ಜ.22 ರಂದು ರಾಮ ಮಂದಿರ ಉದ್ಘಾಟನೆ ನಡೆಯಲಿದೆ. ಅಂದು ಶಾಲೆಗೆ ರಜೆ ಹಾಕಿದರೇ ಸಾವಿರ ರೂ.ದಂಡ ಹಾಕುವುದಾಗಿ ಚಿಕ್ಕಮಗಳೂರು ನಗರದ ಖಾಸಗಿ ಶಾಲೆಯೊಂದರ ಮಕ್ಕಳಿಗೆ ಆರೋಪ ಮಾಡಿದ್ದು, ಶಾಲೆಯ  ವಿರುದ್ಧ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಆಕ್ರೋಶ ಹೊರ ಹಾಕಿದೆ.

Advertisement

ಅಯೋಧ್ಯೆಯಲ್ಲಿ ರಾಮ ಮಂದಿರ ಪುನರ್ ಪ್ರತಿಷ್ಠಾಪನೆ ದಿನ ರಾಜ್ಯದ ಎಲ್ಲಾ ಮುಜರಾಯಿ ದೇಗುಲಗಳಲ್ಲಿ ಪೂಜೆಗೆ ಸರ್ಕಾರವೇ ಆದೇಶಿಸಿದೆ. ಜ.22ರಂದು ಶಾಲೆಗಳಿಗೆ ರಜೆ ನೀಡಬೇಕೋ… ಬೇಡವೋ ಎಂಬ ಕುರಿತು ಸರ್ಕಾರ ಕೂಡ ಗೊಂದಲದಲ್ಲಿದೆ‌. ಈ ಮಧ್ಯೆ ಖಾಸಗಿ ಶಾಲೆಗಳು ಮಕ್ಕಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು, ಹಿಂದೂ ಪರ ಸಂಘಟನೆಗಳು ಶಾಲೆ ವಿರುದ್ಧ ಆಕ್ರೋಶ ಹೊರಹಾಕಿದರು.

ಜ.22ರಂದು ಯಾವುದೇ ಮಕ್ಕಳಿಗೆ ರಾಮ ಮಂದಿರದ ಲೈವ್ ನೋಡಬೇಕು ಅನ್ನಿಸಿದರೆ ರಜೆ ಹಾಕಿ ಮನೆಯಲ್ಲೇ ನೋಡಿ. ಜಿಲ್ಲೆಯ ಯಾವುದೇ ಶಾಲೆಯ ಯಾವುದೇ ಮಕ್ಕಳಿಗೆ ಯಾರಾದರೂ ದಂಡ ಹಾಕಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಆರೋಪ ನೀಡಿದ್ದಾರೆ.

ಸ್ಥಳಕ್ಕೆ ಎ.ಎಸ್ಪಿ. ಕೃಷ್ಣಮೂರ್ತಿ ಭೇಟಿ ನೀಡಿ ಹಿಂದೂಪರ ಸಂಘಟನೆ ಕಾರ್ಯಕರ್ತರ ಜೊತೆ ಮಾತನಾಡಿದರು. ಶಾಲಾ ಆಡಳಿತ ಮಂಡಳಿ ಬಳಿ ಮಾತನಾಡುವುದಾಗಿ ಹೇಳಿದರು. ಶಾಲೆಗೆ ಪ್ರಭಾರ ಡಿಡಿಪಿಐ ಪ್ರಕಾಶ್ ಭೇಟಿ ನೀಡಿದ್ದು, ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next