Advertisement
ನಗರದ ಎಸ್.ಆರ್.ಎನ್. ಮೆಹತಾ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿಜಯಲಕ್ಷ್ಮೀ ಬಿರಾದಾರ ತಯಾರು ಮಾಡಿರುವ ಸಾಧನ ಈಗ ರಾಜ್ಯ- ದೇಶವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲಾರಂಭಿಸಿದೆ. ವಿದೇಶದಲ್ಲಿ ಈ ಸಾಧನ ಪ್ರಸ್ತುತಪಡಿಸಲು ಆಹ್ವಾನವೂ ಬಂದಿದೆ. 2023ರ ಜನವರಿಯಲ್ಲಿ ನಡೆಯುವ ಸೈನ್ಸ್ ಫೇರ್‌ನಲ್ಲಿ ಪ್ರದರ್ಶನವಾಗಲಿದೆ.
Related Articles
Advertisement
ಬಾಲಕಿ ಕಂಡುಹಿಡಿದ ವಿಶೇಷ ಸಾಧನ; ಏನಿದು ಐಡಿಯಾ?ಈ ಸಾಧನ ಮಹಿಳೆಯರ ಮೇಲೆ ಯಾರಾದರೂ ದಾಳಿ ಮಾಡಿದರೆ ವಿರೋಧಿಸಲು ಅನುಕೂಲವಾಗುತ್ತದೆ. ಹೆಬ್ಬೆರಳಿನಿಂದಲೇ ಆಪರೇಟ್ ಮಾಡಬಹುದು. ಹೆಬ್ಬೆರಳಿನಿಂದ ಮುಂಭಾಗದಲ್ಲಿ ಒತ್ತಿದರೆ ಚಪ್ಪಲಿಯ ಹಿಮ್ಮಡಿಯಲ್ಲಿರುವ ಬ್ಯಾಟರಿ ಶುರುವಾಗುತ್ತದೆ. ಇದರ ಮುಖಾಂತರ ಮುಂಭಾಗದ ತುದಿಯಲ್ಲಿ ಅಳವಡಿಸಿರುವ ಸಾಧನದಲ್ಲಿ ವಿದ್ಯುತ್ ಪ್ರವಹಿಸಿ ಅದು ಎದುರಿನ ವ್ಯಕ್ತಿಗೆ ಶಾಕ್ ಹೊಡೆಸುತ್ತದೆ. ಇದರಿಂದ ಸಂಭಾವ್ಯ ಆಪತ್ತಿನಿಂದ ಮಹಿಳೆ ಪಾರಾಗಬಹುದು. ಶಿಕ್ಷಕರ ಮಾರ್ಗದರ್ಶನ ಪಡೆದು ಈ ಪಾದರಕ್ಷೆ ರೂಪಿಸಿದ್ದೇನೆ ಎನ್ನುತ್ತಾಳೆ ವಿಜಯಲಕ್ಷ್ಮೀ ಬಿರಾದಾರ. ಚಾರ್ಜೆಬಲ್ ಬ್ಯಾಟರಿ
ಫಿಜೋ ಎಲೆಕ್ಟ್ರಿಕ್‌ಎಫೆಕ್ಸ್‌ಟ್ ತಣ್ತೀದಡಿ ಈ ಚಪ್ಪಲಿಗಳನ್ನು ನಿರ್ಮಿಸಲಾಗಿದೆ. ಇದು ವ್ಯಕ್ತಿ ನಡೆಯುತ್ತಿರುವಾಗಲೇ ಚಾರ್ಜ್ ಆಗುತ್ತದೆ. ಈ ಶಕ್ತಿ ಚಾರ್ಜೆಬಲ್ ಬ್ಯಾಟರಿಯಲ್ಲಿ ಸಂಗ್ರಹವಾಗಿರುತ್ತದೆ. ವ್ಯಕ್ತಿ ನಿಮ್ಮ ಮೇಲೆ ದಾಳಿ ಮಾಡಿದಾಗ ಹೆಬ್ಬೆರಳನ್ನು ಒತ್ತಿದಾಗ ಸಾಧನ ಆರಂಭವಾಗುತ್ತದೆ. ವಿದ್ಯುತ್ ಪ್ರವಹಿಸಿ ದಾಳಿ ಮಾಡಿದ ವ್ಯಕ್ತಿಗೆ ಶಾಕ್ ತಗಲುತ್ತದೆ. ಇದರಿಂದ ವ್ಯಕ್ತಿಯನ್ನು ಹಿಮ್ಮೆಟ್ಟಿಸಬಹುದು.