ರಾಯಪುರ: ನಕ್ಸಲರು ನಡೆಸಿದ ಸುಧಾರಿತ ಐಇಡಿ ದಾಳಿಯಲ್ಲಿ ಓರ್ವ ಸಿಆರ್ ಪಿಎಫ್ ಕಮಾಂಡೋ ಸಾವನ್ನಪ್ಪಿ, ಹತ್ತು ಜನರು ಗಾಯಗೊಂಡ ಘಟನೆ ಛತ್ತೀಸ್ ಘಡ್ ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಶನಿವಾರ ರಾತ್ರಿ 10 ಗಂಟೆಗೆ ಈ ಘಟನೆ ನಡೆದಿದೆ. ನಕ್ಸಲರ ವಿರುದ್ಧ ಶೋಧ ಕಾರ್ಯಾಚರಣೆ ನಡೆಸಿ ಭದ್ರತಾ ಸಿಬ್ಬಂದಿಗಳು ವಾಪಾಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ವೇಳೆ ಎರಡು ಸುಧಾರಿತ ಐಇಡಿ ಗಳು ಸ್ಪೋಟವಾಗಿ ಹತ್ತು ಮಂದಿ ಯೋಧರು ಗಾಯಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ 10 ಯೋಧರಲ್ಲಿ 8 ಮಂದಿಯನ್ನು ರಾಯಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ಲಷ್ಕರ್ ಬೆಂಬಲಿಸಿ ಬೆದರಿಕೆ ಪ್ರಕರಣ ; 3 ತಂಡಗಳಿಂದ ತನಿಖೆ
ಗಾಯಗೊಂಡ ಎಲ್ಲಾ ಯೋಧರು ಕೋಬ್ರಾ 206ನೇ ಬೆಟಾಲಿಯನ್ ಗೆ ಸೇರಿದವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.