Advertisement

Sandalwood: ‘ಇದು ನಮ್‌ ಶಾಲೆ’ಯ ಹಾಡುಗಳು ಬಂತು

04:42 PM May 16, 2024 | Team Udayavani |

“ಇದು ನಮ್‌ ಶಾಲೆ’ ಎಂಬ ಸಿನಿಮಾವೊಂದು ತಯಾರಾಗಿದ್ದು, ಇತ್ತೀಚೆಗೆ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು.

Advertisement

ಕೃಷ್ಣ ಬೆಳ್ತಂಗಡಿ ಈ ಚಿತ್ರದ ನಿರ್ದೇಶಕರು. ಚಿತ್ರದ ಬಗ್ಗೆ ಮಾತನಾಡಿದ ಅವರು, “ಇದು ನಮ್‌ ಶಾಲೆ ನನ್ನ ನಿರ್ದೇಶನದ ಮೂರನೇ ಚಿತ್ರ. ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಕುರಿತಾದ ಚಿತ್ರ. ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆಗಳ ಬಗ್ಗೆ ತಿಳಿಸಿ ಕೊಡುವ ಚಿತ್ರ. ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಸೆನ್ಸಾರ್‌ ಕೂಡಾ ಆಗಿದ್ದು, ಬಿಡುಗಡೆಯ ಹೊಸ್ತಿಲಿನಲ್ಲಿದೆ. ಅರಸೀಕೆರೆ, ಜೇನುಕಲ್, ಗೀಜಿಹಳ್ಳಿ ಹಾಗೂ ಬೆಂಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ರವಿ ಆಚಾರ್‌ ನಿರ್ಮಾಣ ಮಾಡಿದ್ದು, ಅರಸೀಕೆರೆ ಉಮೇಶ್‌ ಅವರ ಸಹಕಾರ ಚಿತ್ರಕ್ಕಿದೆ. ನಾಗರಾಜ್‌ ಅದವಾನಿ ಛಾಯಾ ಗ್ರಾಹಣ, ಹಿತನ್‌ ಹಾಸನ್‌ ಸಂಗೀತ ಈ ಸಿನಿಮಾಕ್ಕಿದ್ದು, ಪುಣ್ಯ ಹಾಗೂ ಪೂಜ್ಯ ಎನ್ನುವ ಇಬ್ಬರು ಹೆಣ್ಣು ಮಕ್ಕಳು ಪ್ರಧಾನ ಭೂಮಿಕೆಯಲ್ಲಿ ಇದ್ದಾರೆ’ ಎಂದು ಚಿತ್ರದ ವಿವರ ನೀಡಿದರು.

ಇನ್ನು ಚಿತ್ರದಲ್ಲಿ ಶಂಕರ್‌ ಭಟ್‌, ಪೂಜಾ ಸುಮನ್‌, ಈಶ್ವರ್‌, ಮಲ್ಲಿಕಾರ್ಜುನ್‌ ತುಮಕೂರು, ಶಿವಲಿಂಗೇ ಗೌಡ ಮಂಡ್ಯ, ಮುರಳಿಕೃಷ್ಣ, ಬಸವರಾಜ್‌, ವಾಣಿ ಗೌಡ, ರಾಜು ನಾಯಕ್‌, ಮಾಸ್ಟರ್‌ ರಾಮು, ಗಂಗಾ ರವಿ, ಕಲಾ ಉಮೇಶ್‌ ಮುಂತಾದವರು ತಾರಾಬಳಗದಲ್ಲಿದ್ದಾರೆ.

ನಿರ್ಮಾಪಕರಾದ ರವಿ ಆಚಾರ್‌, ಸಂಗೀತ ನಿರ್ದೇಶಕ ಹಿತನ್‌ ಹಾಸನ್‌ ಇದು ನಮ್‌ ಶಾಲೆ ಚಿತ್ರದ ಕುರಿತು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next