Advertisement

Idol: ತೆಕ್ಕಾರಿನಲ್ಲಿ ದೇವರ ಪುರಾತನ ಭಗ್ನವಿಗ್ರಹ, ವಿವಿಧ ಪರಿಕರ ಪತ್ತೆ

12:11 PM Nov 07, 2023 | Team Udayavani |

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಭಟ್ರಭೈಲು ದೇವರ ಗುಡ್ಡೆಯಲ್ಲಿ ಬಾವಿ ನಿರ್ಮಾಣದ ವೇಳೆ 12ನೇ ಶತಮಾನದ್ದೆನ್ನಲಾದ ಶ್ರೀ ಗೋಪಾಲಕೃಷ್ಣ ದೇವರ ಭಗ್ನ ವಿಗ್ರಹ ಹಾಗೂ ಇನ್ನಿತರ ಪರಿಕರಗಳು ರವಿವಾರ ಪತ್ತೆಯಾಗಿವೆ.

Advertisement

ದೇವಾಲಯವಿತ್ತೆನ್ನಲಾದ ದೇವರಗುಡ್ಡೆ ಪ್ರದೇಶದಲ್ಲಿ ಬೆಳ್ತಂಗಡಿ ಶಾಸಕರ ಮುತುವರ್ಜಿಯಿಂದ ದೇವಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಈ ಸಂಬಂಧ 5 ದಿನಗಳ ಹಿಂದೆ ಸ್ಥಳದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗಿತ್ತು. ಜೋತಿಷಿ ವೆಂಕಟರಮಣ ಭಟ್‌ ಮಾಡಾವು ಅವರು ಮೊತ್ತ ಮೊದಲಾಗಿ ದೇವಾಲಯಕ್ಕೆ ಅಗತ್ಯವಿರುವ ಬಾವಿಯನ್ನು ನಿರ್ಮಿಸುವಂತೆ ಸೂಚಿಸಿ ಸ್ಥಳವನ್ನು ಗುರುತಿಸಿದ್ದರು.

ಅದರಂತೆ ರವಿವಾರ ಬಾವಿ ನಿರ್ಮಾಣಕ್ಕೆ ಚಾಲನೆ ನೀಡಿದಾಗ ಸುಮಾರು 15 ಅಡಿ ಆಳದಲ್ಲಿ ಶ್ರೀ ಗೋಪಾಲಕೃಷ್ಣ ದೇವರ ಭಗ್ನ ಸ್ಥಿತಿಯ ವಿಗ್ರಹ, ದೀಪದ ಕಲ್ಲು, ದೇವಾಲ ಯದ ಅಡಿಪಾಯದ ಕುರುಹು, ಪತ್ತೆಯಾಗುವ ಮೂಲಕ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಮೂಡಿಬಂದ ವಿಚಾರಗಳು ಸತ್ಯವೆಂದು ದೃಢಪಟ್ಟಿವೆ. ಇಷ್ಟೇ ಅಲ್ಲದೆ ದೇವಾಲಯದ ಸೊತ್ತುಗಳೆನ್ನಲಾದ ಬಹಳಷ್ಟು ಶಿಲಾಮಯ ವಸ್ತುಗಳು ನೇತ್ರಾವತಿ ನದಿಗೆ ಇಳಿಯುವ ಜಾಗದಲ್ಲಿ ಕಾಣಿಸಿವೆ.

ಲಭ್ಯ ಮೂರ್ತಿ ಸಹಿತ ಪರಿಕರಗಳನ್ನು ಶ್ರದ್ಧಾ ಭಕ್ತಿಯಿಂದ ಸಂರಕ್ಷಿಸಲಾಗಿದ್ದು, ಮುಂದಿನ ಕಾಮಗಾರಿಯ ವೇಳೆ ಇನ್ನಷ್ಟು ಅಂಶಗಳು ಬೆಳಕಿಗೆ ಬರುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯರಾದ ಲಕ್ಷ್ಮಣ ಚೆನ್ನಪ್ಪ, ನಾಗ ಭೂಷಣ ಬಾಗ್ಲೋಡಿ, ತಿಮ್ಮಪ್ಪ ಪೂಜಾರಿ, ತುಕಾರಾಮ ನಾಯಕ್‌, ಅನಂತ ಪ್ರಸಾದ್‌ ನೈತಡ್ಕ, ಸುರೇಶ್‌ ಸತೀಶ್‌, ಮಂಜುನಾಥ ಸಾಲಿಯಾನ್‌, ಪ್ರವೀಣ್‌ ರೈ, ಸದಾನಂದ ನಾಯಕ್‌, ಪ್ರಕಾಶ್‌ ನಾಯಕ್‌, ಅಣ್ಣಿ ಪೂಜಾರಿ, ಗಿರಿಧರ ನಾಯಕ್‌, ಗೋಪಾಲ ನಾಯಕ್‌, ರವೀಂದ್ರ ಗೌಡ, ನವೀನ್‌ ರೈ, ತಿಲಕ್‌ ರಾಜ್‌, ಪದ್ಮನಾಭ ಉಪಸ್ಥಿತರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next