Advertisement

Fraud: ವಂಚನೆ; ಮುಂಬೈನಲ್ಲಿ ಇಡ್ಲಿ ಗುರು ಮಾಲೀಕ ವಶಕ್ಕೆ

11:44 AM Feb 15, 2024 | Team Udayavani |

ಬೆಂಗಳೂರು: ಹೋಟೆಲ್‌ ಫ್ರಾಂಚೈಸಿ ನೀಡುವುದಾಗಿ ನಂಬಿಸಿ ವಂಚಿಸಿದ ಆರೋ ಪದಡಿ “ಇಡ್ಲಿ ಗುರು’ ಹೋಟೆಲ್‌  ಮಾಲೀಕ ಕಾರ್ತಿಕ್‌ ಬಿ.ಶೆಟ್ಟಿಯನ್ನು ಕಾಮಾ ಕ್ಷಿಪಾಳ್ಯ ಠಾಣೆ ಪೊಲೀಸರು ಮುಂಬೈನಲ್ಲಿ ವಶಕ್ಕೆ ಪಡೆದಿದ್ದಾರೆ. ಆರೋಪಿ ಹಾಗೂ ಆತನ ಕುಟುಂಬ ಸದಸ್ಯರ ವಿರುದ್ಧ ಚೇತನ್‌ ಎಂಬವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

2022ರ ಅಕ್ಟೋಬರ್‌ನಲ್ಲಿ ದೂರುದಾರ ಚೇತನ್‌ ಮಾಗಡಿ ಮುಖ್ಯರಸ್ತೆಯ ಕೊಟ್ಟಿಗೆ ಪಾಳ್ಯದಲ್ಲಿರುವ ಇಡ್ಲಿಗುರು ಕಚೇರಿಗೆ ಭೇಟಿ ನೀಡಿ, ಸಂಸ್ಥೆಯ ಬಗ್ಗೆ ಕಾರ್ತಿಕ್‌ನಿಂದ ಮಾಹಿತಿ ಪಡೆದು ಕೊಂಡರು. ಈ ವೇಳೆ ಆರೋಪಿಗಳು ತಿಂಗಳಿಗೆ 50 ಸಾವಿರ ರೂ. ಸಂಪಾದಿಸ ಬಹುದು ಎಂದು ತಿಳಿಸಿ, ಆರಂಭದಲ್ಲಿ ನಮ್ಮ ಹೋಟೆಲ್‌ ಫ್ರಾಂಚೈಸಿ ನೀಡುವುದಾಗಿ ಚೇತನ್‌ಗೆ ನಂಬಿಸಿದ್ದರು. ಅದಕ್ಕಾಗಿ ಠೇವಣಿ ರೂಪದಲ್ಲಿ 3 ಲಕ್ಷ ರೂ. ಪಡೆದಿದ್ದಾರೆ ಎಂದು ಚೇತನ್‌ ದೂರಿನಲ್ಲಿ ಉಲ್ಲೇಖೀಸಿದ್ದರು.

ಆರೋಪಿಗಳ ಸಲಹೆ ಮೇರೆಗೆ ಚೇತನ್‌, ತಮ್ಮ ಮನೆಯ ನೆಲಮಹಡಿಯಲ್ಲಿದ್ದ 9 ಸಾವಿರ ರೂ. ಬಾಡಿಗೆ ಬರುತ್ತಿದ್ದ ಅಂಗಡಿಯನ್ನು ಖಾಲಿ ಮಾಡಿಸಿದ್ದರು. ಈ ಜಾಗದಲ್ಲಿ ಇಡ್ಲಿ ಗುರು ನಡೆಸಲು ಕಾರ್ತಿಕ್‌ ಒಪ್ಪಿಕೊಂಡಿ ದ್ದರು. ಹೀಗಾಗಿ ಅಂಗಡಿಯನ್ನು ಹೋಟೆಲ್‌ ನಡೆಸಲು ಬೇಕಾದ ವಿನ್ಯಾಸಕ್ಕೆ ಬದಲಾಯಿ ಸಲಾಗಿತ್ತು. ಅದಕ್ಕೆ ಎರಡು ಲಕ್ಷ ರೂ. ವ್ಯಯಿಸಲಾಗಿತ್ತು. ಆದರೆ, ಆರೋಪಿಗಳು ಹೋಟೆಲ್‌ನ ಬದಲಾಗಿ ಫ‌ುಡ್‌ ಕಾರ್ಟ್‌ (ಮೊಬೈಲ್‌ ಕ್ಯಾಂಟಿನ್‌) ತಂದು ನಿಲ್ಲಿಸಿ ಸ್ವಲ್ಪ ದಿನಗಳ ಬಳಿಕ ಅಂದು ಕೊಂಡಂತೆ ವ್ಯಾಪಾರ ಆಗುತ್ತಿಲ್ಲ. ಬೇರೆಡೆ ವ್ಯಾಪಾರ ಮಾಡೋಣ ಎಂದಿದ್ದ ಆರೋಪಿಗಳು, ನಂತರ ಶೇ.10 ಕಮಿಷನ್‌ ನೀಡುವುದಾಗಿ ನಂಬಿಸಿದ್ದರು. ಆದರೆ, ಯಾವುದೇ ಕಮಿಷನ್‌ ನೀಡದೆ, ನಿಗದಿತ ಅಂಗಡಿಯಲ್ಲಿ ಹೋಟೆಲ್‌ ನಡೆಸದೆ, ಹೋಟೆಲ್‌ಗಾಗಿ ಅಂಗಡಿಯನ್ನು ಮರು ವಿನ್ಯಾಸ ಮಾಡಿದ ಹಣ ಸೇರಿ 5 ಲಕ್ಷ ರೂ. ಆಗಿದೆ. ಈ ಬಗ್ಗೆ ವಿಚಾರಿಸಿದಾಗ ಇಡ್ಲಿ ಗುರು ಹೋಟೆಲ್‌  ಮಾಲೀಕ ಕಾರ್ತಿಕ್‌ ಬಿ.ಶೆಟ್ಟಿ, ಅವರ ಪತ್ನಿ ಮಂಜುಳಾ, ಕಾರ್ತಿಕ್‌ ತಂದೆ ಬಾಬು ಶೆಟ್ಟಿ ಹಾಗೂ ಹೋಟೆಲ್ ಸಿಬ್ಬಂದಿ ದಿವಾಕರ್‌ ಬೆದರಿಕೆ ಹಾಕಿದ್ದರು ಎಂದು ಚೇತನ್‌ ಆರೋಪಿಸಿ ದೂರು ನೀಡಿದ್ದರು. ‌ಆರೋಪಿಯನ್ನು ಮುಂಬೈ ನಲ್ಲಿ ವಶಕ್ಕೆ ಪಡೆದು ಪೊಲೀಸರು ಬೆಂಗಳೂರಿಗೆ ಕರೆ ತರುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next