Advertisement
ಪಟ್ಟಣದ ಸರ್ಕಾರಿ ಬಾಲಕಿಯರ ಕಾಲೇಜು ಆವರಣದಲ್ಲಿ ನಡೆಯುತ್ತಿರುವ 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಯಾವುದೇ ಪ್ರಚಾರವನ್ನೂ ಬಯಸದೇ ಸೇವೆ ಮಾಡುವುದೇ ನಿಜವಾದ ಜನಸೇವೆಯಾಗಿದೆ ಎಂದರು.
Related Articles
Advertisement
ಸಾಧಕರಿಗೆ ಸನ್ಮಾನ: ಶಿಕ್ಷಕರಾದ ಹರ್ಷಿಯಾ ಭಾನು, ಎಂ.ಎಸ್.ನಾರಾಯಣಸ್ವಾಮಿ, ಗುಲ್ಲಹಳ್ಳಿ ರಮೇಶ್, ಹರ್ಷದ್, ರಾಜೇಶ್ಪರಿ ಪಡತಾರೆ, ಕಂದಾಯ ನಿರೀಕ್ಷಕ ಗೋಪಾಲ್, ಎಎಸ್‌ಐ ರವೀಂದ್ರ, ಚಿತ್ರ ಕಲಾವಿದ ಪಿ.ಮುನಿಯಪ್ಪ, ತಾಪಂ ನೌಕರ ಗೋವಿಂದಪ್ಪ, ಗ್ರಾಪಂ ನೌಕರ ಕೇಶವರಾವ್, ಗೃಹರಕ್ಷಕ ದಳದ ನಾಗೇಶ್, ಸಮಾಜ ಸೇವಕರಾದ ದೊಡ್ಡವಲಗಮಾದಿ ಲಕ್ಷ್ಮಮ್ಮ, ಮುಭಾರಕ್, ಭಗವಾನ್, ಬೆಮಲ್ ಎಂವಿಎನ್ ಮೂರ್ತಿ, ಪಿಡಿಒಗಳಾದ ಗುಲ್ಲಹಳ್ಳಿ ಕೆ.ವಿ.ರಾಧಾಕೃಷ್ಣ, ಕೇತಗಾನಹಳ್ಳಿ ಜಿ.ಸರಸ್ವತಿ, ಸಾಯಿಬಾಬ ದೇವಾಲಯದ ನಾಗರಾಜ್, ಪುರಸಭೆ ಅರೋಗ್ಯ ನಿರೀಕ್ಷಕ ಗೋವಿಂದರಾಜ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಸದಸ್ಯರಾದ ಸಾಧಿಕ್‌ಪಾಷ, ಗೋವಿಂದ, ಕಪಾಲಿ ಶಂಕರ್, ವಸಂತರೆಡ್ಡಿ, ರಾಕೇಶ್‌ಗೌಡ, ಸುನೀಲ್ಕುಮಾರ್, ಸುಹೇಲ್, ದೇಶಿಹಳ್ಳಿ ಪ್ರಭಾಕರ್ ಮುಂತಾದವರನ್ನು ಗೌರವಿಸಲಾಯಿತು. 2018-19ನೇ ಸಾಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಬಿ.ಎನ್.ಪ್ರಭುಲಿಂಗ ದೇವರು, ತಾಲೂಕು ಕಸಾಪ ಅಧ್ಯಕ್ಷ ತೇ.ಸಿ.ಬದರೀನಾಥ್, ಲಯನ್ ನಂದಾ, ಎಸ್ಸಿ.ಎಸ್ಟಿ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಟಿ.ಆರ್.ಮುನಿನಾರಾಯಣ, ಆರ್.ಸಂಜೀವಪ್ಪ, ಎನ್‌ಜಿಓ ವೆಂಕಟೇಶಪ್ಪ, ಶಿಕ್ಷಕ ರವಿ ಹಲಕರ್ಣಿ, ಮೈ.ಸತೀಶ್‌ಕುಮಾರ್ ಮುಂತಾದವರು ಹಾಜರಿದ್ದರು.