Advertisement
ದೇವಾಂಗ ಸಮಾಜ ಶೈಕ್ಷಣಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿ ಮುಂದೆ ಬರಬೇಕೆಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾಜದ ಅಭಿವೃದ್ಧಿಗಾಗಿ ದುಡಿದವರನ್ನು ಗುರುತಿಸಿ ಗೌರವಿಸಿ ದಾಸಿಮಯ್ಯ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು, ಪ್ರತಿಭಾ ಪುರಸ್ಕಾರವನ್ನು ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶಿದಿಂದ ಕಾರ್ಯಕ್ರಮ ಆಯೋಜಿಸಿರುವುದು ಅರ್ಥ ಪೂರ್ಣವಾಗಿದೆ. ಮಕ್ಕಳಲ್ಲಿರುವ ಬುದ್ದಿಮಟ್ಟ, ಜ್ಞಾಪಕ ಶಕಿು¤ಂದಾಗಿ ಹೆಚ್ಚಿನ ಪಲಿತಾಂಶ ಪಡೆಯಲು ಕಾರಣವಾಗಿದೆ. ದೇವಾಂಗ ಸಂಘದ ಜತೆಗೆ ಸಮುದಾಯದ ಮುಖಂಡರು ಸಮಾಜದ ಸಂಘಟನೆಗೆ ಮುಂದಾಗಿರುವುದು ನಿಜಕ್ಕೂ ಪ್ರಶಂಸನೀಯ. ಮುಂದಿನ ದಿನಗಳಲ್ಲಿ ಸಹಸ್ರ ಸಂಖ್ಯೆಯ ಮಕ್ಕಳನ್ನು ಗೌರಸುವಂತಾಗಬೇಕು ಎಂದರು.
Related Articles
Advertisement
ಕೇಂದ್ರ ಗೃಹಮಂತ್ರಿಗಳು ಹಾಗೂ ರಾಜ್ಯದ ಅನೇಕ ಬಿಜೆಪಿ ನಾಯಕರು ಸೇರಿಕೊಂಡು ನ್ಯಾಯಯುತವಾಗಿ ಆಯ್ಕೆಯಾಗಿದ್ದ ಸರ್ಕಾರವನ್ನು ಬೀಳಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂಬುದನ್ನು ನಾಡಿನ ಜತೆಗೆ ರಾಷ್ಟ್ರದ ಜನತೆ ನೋಡಿದ್ದಾರೆ. ಮುಂದಿನ ದಿನಗಳಲ್ಲಿ ನಾಡಿನ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಬಿಎಸ್ ಯಡಿಯೂರಪ್ಪ ಅವರುಗಳು ನೈತಿಕಹೊಣೆಯಿಂದ ಗೌರವಯುತವಾಗಿ ರಾಜೀನಾಮೆಯನ್ನು ಕೂಡಲೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಪ್ರಚಲಿತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಧ್ಯಮದವರು ಕುರಿತ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ದಾಸಿಮಯ್ಯ ರತ್ನ ಪ್ರಶಸ್ತಿ ಪುರಸ್ಕಾರ: ಕೃಷಿ, ಸಮಾಜಸೇವೆ, ಜ್ಞಾನ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಗ್ರಾಮೀಣ ಸಾಧಕರು, ರಂಗಭೂಮಿ, ಶಿಕ್ಷಣ ಕ್ಷೇತ್ರ, ನೇಕಾರಿಕೆ ಮತ್ತು ವಿದ್ಯುತ್ ಮಗ್ಗ, ಕೈ ಮಗ್ಗ, ದೇಶ ಸೇವೆ, ಕ್ರೀಡಾ ಕ್ಷೇತ್ರಗಳಲ್ಲಿ ಅನೇಕ ರೀತಿಯಲ್ಲಿ ತಮ್ಮದೇ ಆದ ಸೇವೆ ಮತ್ತು ಸಾಧನೆ ಮಾಡಿರುವ 11 ಜನ ಸಾಧಕರಿಗೆ ದಾಸಿಮಯ್ಯ ರತ್ನಪ್ರಶಸ್ತಿ ನೀಡಿ ಗೌರಸಿದರೆ, ಸಮುದಾಯದ 125 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರಸಲಾಯಿತು.
ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ಡಾ. ಜಿ.ರಮೇಶ್ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯೆ ಮಂಜುಳನಾರಾಯಣಸ್ವಾು, ಕರ್ನಾಟಕ ದೇವಾಂಗ ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ಪಿ. ಕಲಬುರ್ಗಿ, ಖಜಾಂಚಿ ಡಾ.ಕೆ ನಾರಾಯಣ್, ಬೆಂ.ಗ್ರಾ ಜಿಲ್ಲಾದ್ಯಕ್ಷ ಸೂರ್ಯನಾರಾಯಣ್, ಹಿರಿಯ ಸಂಶೋಧಕ ಶಂಕರ್, ಲಗ್ಗರೆ ದೇವಾಂಗ ಸಂಘದ ಅದ್ಯಕ್ಷ ನಿರಂಜನ್, ರ್ಹತಾ ಸೇವಾ ಟ್ರಸ್ಟ್ ಕಾರ್ಯದರ್ಶಿ ನಾರಾಯಣ, ವ್ಯವಸ್ಥಾಪಕ ಮಧುಸೂದನ್ ಮತ್ತಿತರರು ಇದ್ದರು.