Advertisement

ಸೋಂಕಿತರ ಸಂಪರ್ಕಿತರನ್ನುತಕ್ಷಣ ಗುರುತಿಸಿ: ಡೀಸಿ

03:50 PM Oct 19, 2020 | Suhan S |

ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಶೀಘ್ರ ಗುರುತಿಸಿ, ಸೂಕ್ತಚಿಕಿತ್ಸೆ ನೀಡುವಮೂಲಕ  ಕೋವಿಡ್  ಪ್ರಕರಣಗಳನ್ನುನಿಯಂತ್ರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್‌ ತಿಳಿಸಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಮಂಡ್ಯ ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿ,ಆಶಾಕಾರ್ಯಕರ್ತೆಯರಿಗೆ ಸರಿಯಾದ ಪ್ರಾಥಮಿಕ ದತ್ತಾಂಶದ ಬಗ್ಗೆ ತಿಳಿದಿರುವುದರಿಂದ ಸೋಂಕು ಸಂಭವಿಸಿದ ವ್ಯಕ್ತಿಕುಟುಂಬವು ಪ್ರಾಥಮಿಕ ಸಂಪರ್ಕವಾಗಿರುತ್ತದೆ. ನಂತರ ಸಂಪರ್ಕ ಹೊಂದಿದ ಗ್ರಾಮದಜನರುದ್ವೀತಿಯಸಂಪಕಿರ್ತರಾಗಿರುತ್ತಾರೆ. ಆದ್ದರಿಂದ ತಕ್ಷಣ ಅವರ ಹೆಸರು, ದೂರವಾಣಿ ಸಂಖ್ಯೆ, ವಿಳಾಸ ಪಡೆದು ಚಿಕಿತ್ಸೆ ನೀಡುವ ಮೂಲಕ ಪ್ರಕರಣಗಳನ್ನುಕಡಿಮೆ ಮಾಡಬಹುದು ಎಂದರು.

ಕ್ರಮ ಅನುಸರಿಸಿ: ಜಿಲ್ಲೆಯ ಇತರ ತಾಲ್ಲೂಕುಗಳಿಗೆ ಹೋಲಿಸಿದರೆ ಮಂಡ್ಯ ತಾಲೂಕಿನಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಕೋವಿಡ್‌ ನಿಯಂತ್ರಿಸಲು ಇತರ ತಾಲೂಕುಗಳು ಅನುಸರಿಸುತ್ತಿರುವ ಕ್ರಮಗಳನ್ನು ಅನುಸರಿಸಿ, ಪ್ರಕರಣಗಳ ಸಂಖ್ಯೆಯನ್ನು ನಿಯಂತ್ರಿಸಬೇಕು ಎಂದು ಹೇಳಿದರು.

ಅತ್ಯಂತ ಶ್ರೇಷ್ಠ ಕಾರ್ಯ: ಮಂಡ್ಯ ತಾಲೂಕಿನಲ್ಲಿ ಪ್ರಕರಣಗಳನ್ನು ಶೀಘ್ರವಾಗಿ ಪತ್ತೆಹಚ್ಚಿ, ಹೋಂಐಸೋಲೇಷನ್‌ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಬೇಕು. ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಈ ಕರ್ತವ್ಯವನ್ನು ಅತ್ಯಂತ ಶ್ರೇಷ್ಠವಾದ ಕಾರ್ಯ ಎಂದು ತಿಳಿದು ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ. ಮಂಚೇಗೌಡ, ತಾಲೂಕಿನ ಎಲ್ಲ ಆರೋಗ್ಯಾಧಿಕಾರಿಗಳು, ಆರ್‌ಸಿಹೆಚ್‌ಗಳು ಹಾಗೂ ಆಶಾಕಾರ್ಯ ಕರ್ತೆಯರು ಉಪಸ್ಥಿತರಿದ್ದರು.

Advertisement

ಪೊಲೀಸ್‌ ಇಲಾಖೆಯಲ್ಲಿಕರ್ತವ್ಯ ನಿರ್ವಹಿಸುತ್ತಿದ್ದ ಹಲವು ಪೊಲೀಸರಿಗೆ ಕೋವಿಡ್ ಸೋಂಕು ತಗುಲಿತ್ತು. ಅದರಲ್ಲಿ ಕೆ.ಆರ್‌.ಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯ ಮುಖ್ಯಪೇದೆ ಮಹಾಲಿಂಗೇಗೌಡಅವರು ಮೃತಪಟ್ಟಿದ್ದರು. ಅವರಕುಟುಂಬಕ್ಕೆ 30 ಲಕ್ಷ ರೂ. ವಿಮೆ ಸೌಲಭ್ಯ ನೀಡಲಾಗಿದೆ. ಕೆ.ಪರಶುರಾಮ, ಜಿಲ್ಲಾ ಎಸ್‌ಪಿ, ಮಂಡ್ಯ

ಜಿಲ್ಲೆಯಲ್ಲಿ ಕೋವಿಡ್ ವಾರಿಯರ್ಸ್ ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಒಬ್ಬರು ವೈದ್ಯರು ಹಾಗೂ ಇಬ್ಬರು ಲ್ಯಾಬ್‌ ಟೆಕ್ನಿಷಿಯನ್‌ಗಳಿಗೆ ಸರ್ಕಾರದ ಸೌಲಭ್ಯ ಒದಗಿಸಲು ಈಗಾಗಲೇ ಅರ್ಜಿಗಳನ್ನು ತೆಗೆದುಕೊಂಡು ಸರ್ಕಾರಕ್ಕೆಕಳುಹಿಸಲಾಗಿದೆ. ಡಾ.ಟಿ.ಎನ್‌.ಧನಂಜಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಮಂಡ್ಯ

Advertisement

Udayavani is now on Telegram. Click here to join our channel and stay updated with the latest news.

Next