Advertisement
ಅರಣ್ಯ ಭೂಮಿ ಹಾಗೂ ಹೇಮಾವತಿ ಯೋಜನೆ (ಎಚ್‌ಆರ್‌ಪಿ ) ಸಂತ್ರಸ್ತರಿಗೆ ಕಾಯ್ದಿರಿಸಿದ ಭೂಮಿಮಂಜೂರು ಮಾಡುವ ಕುರಿತಂತೆ ಜಿಲ್ಲಾಧಿಕಾರಿಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿಮಾತನಾಡಿದ ಆವರು, ಆಲೂರು ಸಕಲೇಶಪುರವ್ಯಾಪ್ತಿಯಲ್ಲಿ ಆನೆ ಹಾವಳಿ ಹೆಚ್ಚಿದ್ದು, ಒಂದೇಹಂತದಲ್ಲಿ ಬ್ಯಾರಿಕೇಡ್ ಅಳವಡಿಯಾಗಬೇಕು.ಆನೆ ಕಾರಿಡಾರ್ ಯೋಜನೆ ಪ್ರಸ್ತಾವನೆ ಮರುಸಲ್ಲಿಕೆಯಾಗಬೇಕು ಎಂದು ಅವರು ಆಗ್ರಹಿಸಿದರು.
Related Articles
Advertisement
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜು ಮಾತನಾಡಿ, ನಿಯಮಾನುಸಾರ ಸಾರ್ವಜನಿಕರಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಲಾಗುತ್ತಿದೆ.ಕುಡಿವ ನೀರು, ಕಾಮಗಾರಿಗಳಿಗೆ ಯಾವುದೇಅಡ್ಡಿಯಾಗುತ್ತಿಲ್ಲ ಜಿಲ್ಲಾಡಳಿತದೊಂದಿಗೆ ಸಮನ್ವಯಸಾಧಿಸಿ ಕಾನೂನಿನ ುತಿಯೊಳಗೆ ಹೆಚ್ಚಿನ ನೆರವುನೀಡಲು ಶ್ರಮಿಸಲಾಗುವುದು ಎಂದರು.
ಸರ್ಕಾರಿ ಯೋಜನೆಗಳಿಗೆ ಅರಣ್ಯ ಭೂಮಿ ಹಾಗೂ ಹೇಮಾವತಿ ಜಲಾಶಯ ಯೋಜನೆಗೆ ಭೂಮಿಕಳೆದುಕೊಂಡ ಸಂತ್ರಸ್ತರಿಗೆ ಮಂಜೂರಾದ ಭೂಮಿ ಒದಗಿಸುವುದು ಹಾಗೂ ಮಾಜಿ ಸೈನಿಕರಿಗೆ ಜಮೀನುಒದಗಿಸುವುದು ಆನೆ-ಮಾನವ ಸಂರ್ಘಕ್ಕೆ ಶಾಶ್ವತಪರಿಹಾರ ಒದಗಿಸುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ವಿಶೇಷ ಭೂ ಸ್ವಾಧಿನಾಧಿಕಾರಿಮಂಜುನಾಥ್, ಭೂ ದಾಖಲಾತಿಗಳ ಉಪ ನೊಂದಣಾಧಿಕಾರಿ ಹೇಮಲತಾ ಹಾಗೂ ಎಲ್ಲ ತಾಲೂಕು ತಹಶೀಲ್ದಾರ್ ಇತರರಿದ್ದರು
ತ್ವರಿತಗತಿಯಲ್ಲಿ ದಾಖಲೆ ಸರಿಪಡಿಸುವ ಕಾರ್ಯ :
ಮಾಜಿ ಸೈನಿಕರಿಗೆ ಮೀಸಲಿರುವ ಜಮೀನಿನಲ್ಲಿ ಆದಷ್ಟು ತ್ವರಿತವಾಗಿ ಜೇಷ್ಠತೆ ಆಧಾರದ ಮೇಲೆ ಮಂಜೂರಾತಿ ನೀಡಲಾಗುವುದು. ಕಂದಾಯ ಹಾಗೂ ಅರಣ್ಯ ಇಲಾಖೆ ಜಮೀನುಗಳನ್ನು ಗುರುತಿಸಿ ದಾಖಲೆ ಸರಿಪಡಿಸಿ
ಕಾರ್ಯ ನಡೆಸಲಾಗುತ್ತಿದೆ. 1978ಕ್ಕೂ ಮುನ್ನ ಮಂಜೂಗರಾದ ಅರಣ್ಯ ಪ್ರದೇಶದ ಭೂಮಿಯ ಹಕ್ಕು ಪತ್ರ ರೈತರಿಗೆ ನೀಡಲಾಗುತ್ತಿದೆ. ಅದೇ ರೀತಿ 2005ರ ಅರಣ್ಯ ಹಕ್ಕು ಕಾಯ್ದೆಯಡಿ ಬರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಾಮಾನ್ಯ ವರ್ಗದ ಜನರಿಗೆ ಮಾನದಂಡ ಅನುಸರಿಸಿ ಭೂಮಿಯ ಒಡೆತನ ಮಂಜೂರುಮಾಡಲಾಗುತ್ತದೆ. ನಮೂನೆ 50,53,57 ಅನ್ವಯ ವಿಲೇವಾರಿ ಮಾಡಲಾಗುತ್ತಿದ್ದು, ಎಲ್ಲಾ ತಾಲೂಕುಗಳಲ್ಲಿ ಅರಣ್ಯ ಜಮೀನುಗಳ ವಿವರ ಒದಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಹೇಳಿದರು.