ಹಾವೇರಿ: ಲೋಕಸಭೆ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮತಯಂತ್ರ ಹಾಗೂ ವಿವಿಪ್ಯಾಟ್‌ಗಳನ್ನು ಬಿಗಿ ಭದ್ರತೆಯೊಂದಿಗೆ ನಗರ ಸಮೀಪದ ದೇವಗಿರಿಯ ಸರ್ಕಾರಿ ಎಂಜನಿಯರಿಂಗ್ ಕಾಲೇಜಿನಲ್ಲಿ ಸ್ಥಾಪಿಸಲಾದ ಡಿ-ಮಸ್ಟರಿಂಗ್ ಕೇಂದ್ರದಲ್ಲಿಡಲಾಗಿದೆ.
24 ತಾಸು ಸ್ಟ್ರಾಂಗ್‌ರೂಮ್‌ಗಳ ಭದ್ರತೆಗಾಗಿ ಕಾರ್ಯನಿರ್ವಹಿಸಲು ಕೇಂದ್ರ ಸಶಸ್ತ್ರ ಮೀಸಲು ಪಡೆ ಹಾಗೂ ಪೊಲೀಸ್‌ರನ್ನು ನಿಯೋಜಿಸಲಾಗಿದೆ. ಒಂದು ಪ್ಲಟೂನ್, ಸಿಆರ್‌ಪಿಎಫ್ ತಂಡ, ಒಂದು ಕೆಎಸ್‌ಆರ್‌ಪಿ ಪ್ಲಟೂನ್, ಮೂರು ಡಿಎಆರ್ ಪ್ಲಟೂನ್, ಇಬ್ಬರು ಪೊಲೀಸ್ ವಿಭಾಗೀಯ ಉಪಾಧೀಕ್ಷಕರು, ನಾಲ್ಕುಜನ ವೃತ್ತ ಆರಕ್ಷಕ ನಿರೀಕ್ಷಕರು, ಎಂಟು ಜನ ಪೊಲೀಸ್ ಸಬ್ ಇನ್ಸಪೆಕ್ಟರ್, 16 ಜನ ಸಹಾಯಕ ಪೊಲೀಸ್ ಸಬ್ ಇನ್ಸಪೆಕ್ಟರ್, 52 ಪೇದೆಗಳು ಹಾಗೂ ಮುಖ್ಯ ಪೇದೆಗಳನ್ನು ನಿಯೋಜಿಸಲಾಗಿದೆ. ಎಲ್ಲ ದಿಕ್ಕುಗಳಲ್ಲಿ ಬಿಗಿಭದ್ರತೆ ಒದಗಿಸಲಾಗಿದ್ದು, ಅಗ್ನಿಶಾಮಕ ವಾಹನ, ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ. ಸ್ಟ್ರಾಂಗ್ ರೂಮ್ ಒಳಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಡಿಸಿ ಕೃಷ್ಣ ಭಾಜಪೇಯಿ, ಎಸ್ಪಿ ಕೆ. ಪರಶುರಾಮ ವ್ಯವಸ್ಥೆಯ ಮೇಲೆ ನಿಗಾವಹಿಸಿದ್ದಾರೆ.
Advertisement
ಮತ ಎಣಿಕೆ ದಿನಾಂಕದ ವರೆಗೆ ಸ್ಟ್ರಾಂಗ್ ರೂಮ್ ಕಟ್ಟಡವನ್ನು 24×7 ಭದ್ರತೆಯಲ್ಲಿ ಇಡಲು ಸೂಕ್ತ ಏರ್ಪಾಡು ಮಾಡಲಾಗಿದ್ದು, ಒಟ್ಟು ಎಂಟು ಸ್ಟ್ರಾಂಗ್ ರೂಮ್‌ನಲ್ಲಿ ಮತಯಂತ್ರಗಳನ್ನು ಇಡಲಾಗಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಇವಿಎಂಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ದಾಸ್ತಾನು ಮಾಡಲಾಗಿದೆ. ಕೊಠಡಿ ಸುತ್ತಲೂ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಪ್ರತಿ ಕೊಠಡಿಗೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಕಿಟಕಿ, ಬಾಗಿಲುಗಳನ್ನು ಭದ್ರಪಡಿಸಲಾಗಿದೆ. ಯಾವುದೇ ಬೆಂಕಿ, ಇತರ ಅವಘಡಗಳಿಗೆ ಅವಕಾಶಗಳು ಇಲ್ಲದಂತೆ ಗರಿಷ್ಠ ಭದ್ರತಾ ವ್ಯವಸ್ಥೆಯೊಂದಿಗೆ ಸೀಲ್ ಮಾಡಲಾಗಿದೆ. ಪೊಲೀಸ್ ಹಾಗೂ ಕೇಂದ್ರ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಿ ಕಟ್ಟೆಚ್ಚರದಿಂದ ಕಾವಲಿಗಾಗಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ.
ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಮ್‌ಗೆ ತೀವ್ರ ಭದ್ರತೆ ಒದಗಿಸಲಾಗಿದೆ. ದಿನದ 24ಗಂಟೆಯೂ ಸರದಿ ಪ್ರಕಾರ ಸಿಆರ್‌ಪಿಎಫ್, ಕೆಸ್‌ಆರ್‌ಪಿ ಹಾಗೂ ನಮ್ಮ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಲಾಗಿದೆ.
•ಕೆ. ಪರಶುರಾಮ, ಹಾವೇರಿ ಎಸ್ಪಿ,
Related Articles
Advertisement