ಇದಕ್ಕಾಗಿ ಐದು ವರ್ಷದ ಕ್ರಿಯಾಯೋಜನೆ ರೂಪಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ.
ಪಾಟೀಲ ಸೂಚಿಸಿದರು.
Advertisement
ನಗರದ ಜಿಪಂ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕೆಡಿಪಿ ತ್ರೆೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳ ಉಸ್ತುವಾರಿಯಲ್ಲಿ ಜಿಲ್ಲಾ ಯೋಜನಾ ವರದಿಯೊಂದನ್ನು ತಯಾರಿಸಿ ಈ ಕುರಿತು ಪ್ರಸ್ತಾವನೆ
ಸಹ ಸಲ್ಲಿಸುವಂತೆ ಸಲಹೆ ನೀಡಿದರು.
Related Articles
Advertisement
ಮನರೇಗಾಗ ಯೋಜನೆಯಲ್ಲಿ ಕೃಷಿ ಹೊಂಡ-ಚೆಕ್ ಡ್ಯಾಂ ನಿರ್ಮಾಣಕ್ಕೆ ಗಮನಹರಿಸುವ ಜತೆಗೆ ಬರುವ ಬೇಸಿಗೆಯಲ್ಲಿ ನೀರಿನ ಬೇಡಿಕೆಗೆ ಅನುಗುಣವಾಗಿ ಸಮರ್ಥವಾಗಿ ನಿಭಾಯಿಸಲು ಈಗಿನಿಂದಲೇ ಕೆರೆಗಳ ದುರಸ್ತಿ ಹಾಗೂ ಜಲ ಸಂಗ್ರಹಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ವಿಜಯಪುರ ನಗರದ ಕುಡಿಯುವ ನೀರು ಸೌಲಭ್ಯಕ್ಕಾಗಿ ಕೊಲ್ಹಾರ, ಚಿಕ್ಕಗಲಗಲಿ ಜಾಕ್‌ವೆಲ್ ಮತ್ತು ನೀರು ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗಿದೆ. ಭೂತನಾಳ ಕೆರೆಯಿಂದ 12 ಎಂಎಲ್‌ಡಿ ಹಾಗೂ ವಿವಿಧ ಐತಿಹಾಸಿಕ ಬಾವಿಗಳಿಂದ 5 ಎಂಎಲ್‌ಡಿ ಸೇರಿ 17 ಎಂಎಲ್‌ಡಿ ನೀರು ಪಡೆಯಲಾಗುತ್ತಿದೆ.
ಮತ್ತೂಂದೆಡೆ ಐತಿಹಾಸಿಕ ಬಾವಿಗಳು ಶುದ್ಧ ಕುಡಿಯುವ ನೀರಿನ ಘಟಕಗಳ ವ್ಯವಸ್ಥೆ ಸಹ ಮಾಡಲಾಗುತ್ತಿದೆ. ಮಳೆಗಾಲ ಆರಂಭವಾಗಿದ್ದರೂ ಜಿಲ್ಲೆಯ ಹಲವೆಡೆ ಇನ್ನೂ ಕುಡಿಯುವ ನೀರಿನ ಕೊರತೆ ಇದೆ. ಹೀಗಾಗಿ ನೀರಿನ ಸಮಸ್ಯೆ ಸಂಪೂರಿಹಾರ ಕಾಣುವ ವರೆಗೆ ಟ್ಯಾಂಕರ್ ನೀರಿನ ಪೂಬೇಕು ಎಂದು ಸೂಚಿಸಿದರು.
ಕೃಷಿ ಇಲಾಖೆ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಹನಿ ನೀರಾವರಿ, ಕೃಷಿ ಹೊಂಡ ನಿರ್ಮಾಣಕ್ಕೆ ಗುರಿ ಮೀರಿ ಸಾಧನೆ ಮಾಡಬೇಕು. ರಾಜ್ಯದಲ್ಲಿ 1.25 ಲಕ್ಷ ಕೃಷಿ ಹೊಂಡ ನಿರ್ಮಾಣದ ಗುರಿ ಹಾಕಿಕೊಂಡಿದ್ದು, ಜಿಲ್ಲೆಗೆ ಈಗಾಗಲೇ 5 ಸಾವಿರ ಕೃಷಿ ಹೊಂಡ ಮಂಜೂರಾಗಿವೆ. ಕೃಷಿ ಹೊಂಡಕ್ಕೆ ಅಗತ್ಯವಾದ ಪಾಲಿಥಿನ್ ಒದಗಿಸಿ ಯೋಜನೆಪೂೂಳಿಸಿ ಎಂದು ಹೇಳಿದರು. ಪ್ರಸಕ್ತ ಮುಂಗಾರಿನಲ್ಲಿ ನಿಗದಿತ ಪ್ರಮಾಣದ ಮಳೆಯಾಗದ ಕಾರಣ ಛಾಯಾಚಿತ್ರ ಸಹಿತ ಸಮಗ್ರ ಮಾಹಿತಿಯೊಂದಿಗೆ ವರದಿ ತಯಾರಿಸಬೇಕು. ಇದರಿಂದ ರೈತರಿಗೆ ಪರಿಹಾರಧನ ಒದಗಿಸಲು ವಾಸ್ತವ ವರದಿ ಸಲ್ಲಿಸಬೇಕು ಎಂದು
ಸೂಚಿಸಿದರು. ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ವಿವಿಧ ಶಾಲಾ ಕಟ್ಟಡಗಳ ದುರಸ್ತಿಗೆ ಪ್ರಥಮಾದ್ಯತೆ ನೀಡಬೇಕು. ಪ್ರತಿ ಶಾಸಕರ ತಲಾ 25 ಲಕ್ಷ ರೂ. ಅನುದಾನದಲ್ಲಿ ಶಾಲೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಆ ಮೂಲಕ ಯಾವುದೇ ಮಗು ಜೀವಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇಂತಹ ಶಾಲಾ ಕಟ್ಟಡಗಳ ದುರಸ್ತಿಗೆ ಅನುದಾನ ಲಭ್ಯವಾಗಿ ಸಂಪೂರ್ಣ ದುರಸ್ತಿ ಆಗುವ ವರೆಗೆ ಪರ್ಯಾಯ ಸ್ಥಳಗಳಲ್ಲಿ ಪಾಠ ಮಾಡಬೇಕು. ಜಿಲ್ಲೆಯ ಶೈಕ್ಷಣಿಕ ಸಮಸ್ಯೆಗಳ ಕುರಿತು ಸಿ.ಎಂ. ಸಿದ್ಧರಾಮಯ್ಯ ಅವರ ಗಮನಕ್ಕೂ ತರಲಾಗಿದೆ. ಇದಕ್ಕಾಗಿ ಸಮಗ್ರ ವರದಿ ಸಹ ನೀಡಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರದೇ ಸಮಗ್ರ ವರದಿ ಸಿದ್ಧಪಡಿಸಬೇಕು. ಬೇಜವಾಬ್ದಾರಿ ಕಂಡು ಬಂದಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ, ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ, ಜಿಪಂ ಸಿಇಒ ಎಂ. ಸುಂದರೇಶಬಾಬು, ಎಸ್‌ಪಿ ಕುಲದೀಪ್ ಜೈನ್ ಇದ್ದರು.