Advertisement
“ಭೂಗೋಳ ಪಠ್ಯವನ್ನು ಅರ್ಥ ಮಾಡಿಕೊಳ್ಳೋದು ಕಷ್ಟವಾಗ್ತಿದೆ, ಸಮಾಜ ವಿಜ್ಞಾನ ಏಕೋ ತಲೆಗೇ ಹೋಗ್ತಿಲ್ಲ, ಸಮಾಜಶಾಸ್ತ್ರದ ಪಿತಾಮಹರ ಹೆಸರುಗಳು ನಾಲಿಗೆ ಮೇಲೆ ನಿಲ್ತಾ ಇಲ್ವಲ್ಲಾ ? ಏನು ಮಾಡೋದು?’
Related Articles
Advertisement
ಪಠ್ಯದ ವಿಷಯ, ಅದಕ್ಕೆ ತಕ್ಕ ಚಿತ್ರಗಳನ್ನು ಹೊಂದಿಸಿ, ಹಿಂದೆ ಸರಳವಾದ ನಿರೂಪಣೆ ಮಾಡಿದ್ದಾರೆ. ಶಾಲೆಯಲ್ಲಿರುವ ಪಠ್ಯವನ್ನೇ ಇಂಪಾದ ಹಿನ್ನೆಲೆ ಮಾತುಗಳಲ್ಲಿ ತಂದಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ದೊಡ್ಡ ಲಾಭ. ತಾವು ಶಾಲೆಯಲ್ಲಿ ಓದುವ ಪಠ್ಯವೇ ಇದಾಗಿರುವುದರಿಂದ ಮತ್ತು ಪಠ್ಯಕ್ಕೆ ತಕ್ಕ ವಿಷ್ಯುಯಲ್ ಇರುವುದರಿಂದ ಡಿವಿಡಿಯನ್ನು ವೀಕ್ಷಿಸಿದ ನಂತರ ಅವರು ತಲೆಯಲ್ಲಿ ವಿಷಯ ಅಚ್ಚಾಗುವುದರಲ್ಲಿ ಅನುಮಾನವೇ ಇಲ್ಲ.
ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನ ಶಾಸ್ತ್ರ ಕಣ್ಣೆದುರಿಗೇ ನಡೆದಂತೆ ತೋರಿಸುವ ನೈಜ ದೃಶ್ಯಾವಳಿ ಇದರ ಪ್ಲಸ್ ಪಾಯಿಂಟ್. ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರಬೋಸ್, ಗಾಂಧೀಜಿ, ನೆರಹರು ಮೌಂಟ್ ಬ್ಯಾಟನ್, ಅಂಬೇಡ್ಕರ್ ದೃಶ್ಯಭಾಗಗಳು ಪಠ್ಯಕ್ಕೆ ಪೂರಕವಾಗಿವೆ.
ಐಡಿಯಾ ಬಂದದ್ದು ಹೇಗೆ?ಈ ಐಡಿಯಾ ಬಂದದ್ದೇ ವಿಚಿತ್ರ. ಒಂದು ಸಲ ಯಲ್ಲಾಪುರದ ಶಾಲೆಯೊಂದರಲ್ಲಿ ವಿಶೇಷ ತರಗತಿಯನ್ನು ತೆಗೆದು ಕೊಂಡಿದ್ದರು ವಿಶ್ವನಾಥ್. ಇದಕ್ಕಾಗಿ ವೀಡಿಯೋ ಕ್ಲಿಪಿಂಗ್ ಇಟ್ಟುಕೊಂಡು ಪಾಠ ಮಾಡುತ್ತಿದ್ದರು. ಇದನ್ನು ನೋಡಿದ ಶಾಲಾ ಮಂಡಳಿ- “ಇದನ್ನು ಇನ್ನೂ ಚೆನ್ನಾಗಿ ಹಿನ್ನಲೆ ಧ್ವನಿ ಇಟ್ಟು ಮಾಡಿಕೊಡಿ ‘ಎಂದರಂತೆ. ವಿಶ್ವನಾಥ್‌ಗೆ ಹೌದಲ್ಲಾ ಎನಿಸಿ ಕೆಲಸ ಶುರುಮಾಡಿದರು.
ಅದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಬಂತು. ಆದರೆ ಹೂಡಿಕೆ ಮಾಡಲು ಹಣ ಬೇಕಲ್ಲ? ಮಂಡ್ಯದ ಕೊಮ್ಮೇರಹಳ್ಳಿಯ ಆದಿಚುಂಚನಗಿರಿ ಮಠದ ಶ್ರದ್ದಾನಂದ ಸ್ವಾಮಿಜಿ ಅವರು ” ನೀವು ಡಿವಿಡಿ ಮಾಡಿ. ನಿಮ್ಮ ಜೊತೆ ನಾವು ಇರುತ್ತೇವೆ’ ಎಂದು ಒಂದೂ ಕಾಲು ಲಕ್ಷದ ಖರ್ಚನ್ನು ಕೊಟ್ಟರು. ಅಲ್ಲಿಂದ ಶುರುವಾದದ್ದೇ ಈ ಡಿವಿಡಿ ಉರುಫ್ ಪಠ್ಯ ಡಿಜಿಟಲೀಕರಣದ ಯಾತ್ರೆ. ನಂತರ ರೆಕಾರ್ಡಿಂಗ್‌ಗೆ ಸ್ಟುಡಿಯೋ, ವಾಯ್ಸ ಓವರ್ ಎಲ್ಲದಕ್ಕೂ ನೆರವಾಗಿದ್ದು ವಾರ್ತಾ ಇಲಾಖೆಯ ನಿರ್ದೇಶಕರಾದ ವಿಶುಕುಮಾರ್. ವಿಶ್ವನಾಥ್ ಡಿವಿಡಿ ತಯಾರಿಸಿ, ಅದನ್ನು ನೇರವಾಗಿ ಯಾವುದೋ ವಿತರಕರಿಗೆ ರೈಟ್ಸ್ ಕೊಟ್ಟು ಮಾರಿಬಿಡಬಹುದಿತ್ತು. ಆ ಕೆಲಸ ಮಾಡಲಿಲ್ಲ. ಏಕೆಂದರೆ, ಈ ರೀತಿ ಮಾಡುವುದರಿಂದ ತಮಗೆ ಹೆಚ್ಚಿಗೆ ಹಣ ಬರಬಹುದು. ಆದರೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹೊರೆಯಾಗುತ್ತದೆ. ವಿದ್ಯಾರ್ಥಿಗಳನ್ನು ತಲುಪಬೇಕು ಎನ್ನುವ ಮೂಲ ಉದ್ದೇಶವೇ ಬುಡಮೇಲಾಗುತ್ತದೆ ಎನ್ನುವ ಕಾರಣಕ್ಕೆ ಆ ಕೆಲಸ ಮಾಡಲಿಲ್ಲ. ಬದಲಾಗಿ ತಾವೇ ಖುದ್ದು, ನಾಡಿನಾದ್ಯಂತ ಶಾಲೆಗಳಿಗೆ ಭೇಟಿ ಕೊಟ್ಟು, ಡಿವಿಡಿಯನ್ನು ತೋರಿಸಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಬೆಂಗಳೂರು, ಹುಬ್ಬಳ್ಳಿ ಧಾರವಾಡ, ಚಿಕ್ಕಮಗಳೂರು, ಮಂಗಳೂರಿನ ಆಯ್ದ ಶಾಲೆಗಳ ಶಿಕ್ಷಕರು, ಪ್ರಿನ್ಸಿಪಾಲರಿಗೆ ಡಿವಿಡಿ ಕೊಟ್ಟು, ಅವರುಗಳ ಅಭಿಪ್ರಾಯ ಪಡೆದು. ಚೆನ್ನಾಗಿ ಮಕ್ಕಳಿಗೆ ಅರ್ಥವಾಗುತ್ತದೆ. ಸಾರ್ಥಕ ಕೆಲಸ ಅಂತ ಹೇಳಿ, ಭರವಸೆ ಕೊಟ್ಟ ಮೇಲೆ ಮಾರಾಟ ಮಾಡಲು ಮುಂದಾಗಿದ್ದು. ” ಇದರಲ್ಲಿ ಲಾಭದ ಉದ್ದೇಶವಿಲ್ಲ.ನನಗೆ ಪೆನÒನ್ ಬರುತ್ತದೆ. ಜೀವನ ನಡೆಸಲು ತೊಂದರೆ ಇಲ್ಲ. ಹೀಗಾಗಿ ಪರೀಕ್ಷೆಯ ಸಂದರ್ಭದಲ್ಲಿ ಎದುರಾಗುವ ಒದ್ದಾಟದಿಂದ ವಿದ್ಯಾರ್ಥಿಗಳನ್ನು ಪಾರು ಮಾಡಲೆಂದೇ ಈ ಡಿವಿಡಿ ಮಾಡಿದ್ದು ‘ ಎನ್ನುತ್ತಾರೆ ವಿಶ್ವನಾಥ್. ಒಂದೇ ಸಲಕ್ಕೆ ನೋಟ, ಓದು ಎರಡೂ ಆಗುವುದರಿಂದ ವಿದ್ಯಾರ್ಥಿಗಳು ಸುಲಭವಾಗಿ ಗ್ರಹಿಸಬಹುದು. ಗ್ರಹಿಸಿದ್ದನ್ನು ನೆನಪಿಟ್ಟುಕೊಳ್ಳಬುದು. ಮನನ ಮಾಡಿಕೊಳ್ಳಬಹುದಂತೆ. ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಬೆಂಗಳೂರು ರಾಜ್ಯದ ಇನ್ನಿತರ ಕಡೆಯಲ್ಲಿರುವ ನೂರಾರು ಶಾಲೆಯ ವಿದ್ಯಾರ್ಥಿಗಳು ಡಿವಿಡಿಯ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇನ್ನು ನೀವು?