ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯು ಐ.ಡಿ.ಬಿ.ಐ ಬ್ಯಾಂಕಿನ ವ್ಯವಹಾರ ಪ್ರತಿನಿಧಿಯಾಗಿ (Business Correspondent) ಧಾರವಾಡ, ಹಾವೇರಿ, ರಾಯ ಚೂರು, ಬೆಂಗಳೂರು, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಸಂಘಗಳನ್ನು ರಚಿಸಿ ಸಂಘಗಳಿಗೆ ಬ್ಯಾಂಕ್ ಮೂಲಕ ಆರ್ಥಿಕ ನೆರವು ಒದಗಿಸಿ ಸದಸ್ಯರ ಆರ್ಥಿಕ ಹಾಗೂ ಸಾಮಾಜಿಕ ಸಶಕ್ತೀಕರ ಣಕ್ಕೆ ಕಾರಣವಾಗಿದೆ.
ಸೆ.23ರಂದು ಐ.ಡಿ.ಬಿ.ಐ. ಬ್ಯಾಂಕಿನ ಕಾರ್ಯ ನಿರ್ವಾಹಕ ನಿರ್ದೇಶಕ ನಾಗರಾಜ ಗಾರ್ಲ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಕ್ಷೇತ್ರದ ಯೋಜನೆಯ ಕಾರ್ಯ ಚಟುವಟಿಕೆ ಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಕೇಂದ್ರ ಸರಕಾರದ ಪರಿಸರ ಸಂರಕ್ಷಣೆ ಕಾರ್ಯಕ್ರಮದ ಭಾಗವಾಗಿ ಐ.ಡಿ.ಬಿ.ಐ. ಬ್ಯಾಂಕ್ ಪರ ವಾಗಿ ಧರ್ಮಸ್ಥಳ ಪರಿಸರದಲ್ಲಿ ಗಿಡ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಿತು. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಬ್ಯಾಂಕ್ ಅಧಿಕಾರಿಗಳಿಗೆ ಗಿಡವನ್ನು ಹಸ್ತಾಂತರಿಸಿದರು.
ಈ ಯೋಜನೆಯಲ್ಲಿಬ್ಯಾಂಕ್ ವತಿಯಿಂದ 1 ಲಕ್ಷ ಗಿಡ ನೆಡುವ ಗುರಿ ಹೊಂದಿದೆ. ಈ ಕಾರ್ಯಕ್ರಮ ಧರ್ಮಸ್ಥಳದ “ಭೂಮಿ ತಾಯಿ ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿ’ ಯೋಜನೆಯಂತೆ ಪರಿಸರ ಸಂರಕ್ಷಣೆಯ ಗುರಿ ಹೊಂದಲಾಗಿದೆ
ಎಂದು ಬ್ಯಾಂಕ್ ತಿಳಿಸಿದೆ.