Advertisement
ಉಡುಪಿ ಧರ್ಮಪ್ರಾಂತ್ಯದ ವ್ಯಾಪ್ತಿಯ ಸುಮಾರು 500ಕ್ಕೂ ಅಧಿಕ ಕ್ರೈಸ್ತ ಯುವ ಜನರು ಭಾಗವಹಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೈಮ್ ಶೋ, ರಸಪ್ರಶ್ನೆ, ಕೊಲಾಜ್, ಫೇಸ್ ಪೈಂಟಿಂಗ್ ಹಾಗೂ ಹಾಸ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಬಹುಮಾನ ವಿತರಣೆ ಕಾರ್ಯ ಕ್ರಮದ ಮುಖ್ಯ ಅತಿಥಿಯಾಗಿ ಆಗ ಮಿಸಿದ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ|ಫಾ| ಬ್ಯಾಪ್ಟಿಸ್ಟ್ ಮೆನೇಜಸ್ ಮಾತನಾಡಿ ಯುವ ಜನರು ಸ್ಪರ್ಧೆಗಳಲ್ಲಿ ಭಾಗವಹಿಸುವುದರೊಂದಿಗೆ ನೈಜತೆ ಹಾಗೂ ಕ್ರಿಯಾತ್ಮಕ ಚಟು ವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಅಲ್ಲದೆ ಕೊಂಕಣಿ ಭಾಷೆಯ ಉಳಿಕೆ ಮತ್ತು ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
Related Articles
Advertisement
ಇತ್ತೀಚೆಗೆ ನಡೆದ ರಾಷ್ಟ್ರೀಯ ಯುವ ಸಮ್ಮೇಳನದ ಪ್ರಯುಕ್ತ ನಡೆದ ಡೇಸ್‌ಇನ್ ಡಯಾಸಿಸ್ ಡಾಕ್ಯುಮೆಂಟರಿ ರಚನೆಯಲ್ಲಿ ಪೆರಂಪಳ್ಳಿ, ತೊಟ್ಟಂ,ಉಡುಪಿ ಮತ್ತು ಬ್ರಹ್ಮಾವರ ಘಟಕಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದಿದ್ದವು. ಧರ್ಮಪ್ರಾಂತ್ಯದ ಪದಾಧಿಕಾರಿಗಳು ಯುವ ನಿರ್ದೇಶಕ ಫಾ| ಎಡ್ವಿನ್ ಡಿ’ಸೋಜಾ ಅವರನ್ನು ಸಮ್ಮಾನಿಸಿದರು.
ಕಾರ್ಯಕ್ರಮದಲ್ಲಿ ಶಿರ್ವ ವಲಯ ನಿರ್ದೇಶಕ ರೆ|ಫಾ| ಪಾವ್É ರೇಗೊ, ಡಾನ್ ಬೊಸ್ಕೊ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲ ರೆ|ಫಾ| ಮಹೇಶ್ ಡಿ’ಸೋಜಾ, ರೆ|ಫಾ| ಹೆರಾಲ್ಡ್ ಪಿರೇರಾ, ಜಿ.ಪಂ. ಸದಸ್ಯ ವಿಲ್ಸನ್ ರೊಡ್ರಿಗಸ್, ಶಿರ್ವ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲ್ಸನ್ ಡಿ’ಸೋಜಾ, ಬಿಗ್ ಎಫ್‌ಎಂ ಆರ್‌ಜೆ ಎರೋಲ್ ಗೊನ್ಸಾಲ್ವಿಸ್, ಶಿರ್ವ ಘಟಕದ ಅಧ್ಯಕ್ಷ ಅವಿಲ್ ಸಲ್ದಾನ, ಸಚೇತಕರಾದ ವಾಲ್ಟರ್ ಡಿ’ಸೋಜಾ, ಸಿಸ್ಟರ್ ಹಿಲ್ಡಾ ಉಪಸ್ಥಿತರಿದ್ದರು.ಕೇಂದ್ರಿಯ ಅಧ್ಯಕ್ಷ ಲೋಯೆಲ್ ಡಿ’ಸೋಜಾ ಸ್ವಾಗತಿಸಿ, ಕಾರ್ಯದರ್ಶಿ ಫೆಲಿನಾ ಡಿ’ಸೋಜಾ ವಂದಿಸಿ, ರೋಯrನ್ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು.