Advertisement

ಐಸಿಯು ಎಸಿ ಹಾಳು; ರೋಗಿಗಳ ಗೋಳು

08:18 AM May 22, 2019 | Suhan S |

ಬೀದರ: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿನ ಹವಾನಿಯಂತ್ರಿತ (ಎಸಿ)ವ್ಯವಸ್ಥೆ ಎರಡು ದಿನಗಳಿಂದ ಕೈ ಕೊಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳು ಮನೆಯಿಂದ ಫ್ಯಾನ್‌ ತರುವ ಅನಿವಾರ್ಯತೆ ಎದುರಾಗಿದೆ.

Advertisement

ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕ (ಐಸಿಯು)ದಲ್ಲಿ ಹವಾನಿಯಂತ್ರಿತ (ಎಸಿ) ಯಂತ್ರಗಳಿವೆ. ಆದರೆ, ಅವು ದುರಸ್ತಿಯಲ್ಲಿರುವುದರಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಹಾಗಾಗಿ ಇಲ್ಲಿ ದಾಖಲಾಗುವ ರೋಗಿಗಳು ಮನೆಯಿಂದ ಫ್ಯಾನ್‌ ತಂದು ಗಾಳಿ ಪಡೆಯುವ ಸ್ಥಿತಿ ಇದೆ. ಒಟ್ಟು ನಾಲ್ಕು ಏಸಿಗಳನ್ನು ಇಲ್ಲಿ ಅಳವಡಿಸಿದ್ದು, ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಐಸಿಯು ಘಟಕಕ್ಕೆ ಆ ಒಂದು ಏಸಿ ತಂಪು ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ರೋಗಿಗಳು ಮನೆಯಿಂದಲೇ ಫ್ಯಾನ್‌ ಹಿಡಿದುಕೊಂಡು ಬರಬೇಕಾಗಿದೆ.

ಐಸಿಯು ಘಟಕದ ಸಿಬ್ಬಂದಿಗಳ ಪ್ರಕಾರ, ಎಸಿ ದುರಸ್ತಿ ಮಾಡುವಂತೆ ಅನೇಕ ದಿನಗಳಿಂದ ಪತ್ರಗಳನ್ನು ಬರೆದಿರುವುದಾಗಿ ಹೇಳುತ್ತಿದ್ದಾರೆ. ಅಧಿಕಾರಿಗಳು ಯಾರೂ ಈವರೆಗೂ ಸ್ಪಂದಿಸಿಲ್ಲ ಎಂಬ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಏ.24ರಂದು ಗುಂಡಪ್ಪ ಪರೀಟ್ ಅವರ ತಂದೆ ಅನಾರೋಗ್ಯದಿಂದ ತಿವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. ಘಟಕದ ಏಸಿ ಕಾರ್ಯ ನಿರ್ಹಿಸದ ಹಿನ್ನೆಲೆಯಲ್ಲಿ ಮನೆಯಿಂದ ಫ್ಯಾನ್‌ ತಂದು ಬಳಸುತ್ತಿದ್ದಾರೆ. ಇದನ್ನು ಗಮನಿಸಿದ ಬಳಿಕವೂ ಆಸ್ಪತ್ರೆಯ ವೈದ್ಯರು ಹಾಗೂ ಆಸ್ಪತ್ರೆಯ ಅಧಿಕಾರಿಗಳು ಏಸಿ ದುರಸ್ತಿ ಮಾಡಿಸುವ ಕಾರ್ಯಕ್ಕೆ ಮುಂದಾಗದಿರುವುದು ಅಧಿಕಾರ್ರಿಗಳ ಕರ್ತವ್ಯಕ್ಕೆ ನಿದರ್ಶನವಾಗಿದೆ.

ತುರ್ತು ನಿಗಾ ಘಟದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಆಸ್ಪತ್ರೆಯ ಆದ್ಯ ಕರ್ತವ್ಯ. ಅಲ್ಲದೆ, ಐಸಿಯುನಲ್ಲಿ ನಿಗದಿತ ಪ್ರಮಾಣದ ತಾಪಮಾನ ಕಾಪಾಡುವುದು ಕೂಡ ಮುಖ್ಯವಾಗಿರುತ್ತದೆ. ಆ ಘಟಕದಲ್ಲಿ ಹೊರಗಿನ ಗಾಳಿ ಬರಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಸ್ಪತ್ರೆಯ ವಾರ್ಡ್‌-46ರ ಐಸಿಯು ಘಟಕದಲ್ಲಿ ಅನೇಕ ಅವ್ಯವಸ್ಥೆಗಳಿದ್ದು, ಅಧಿಕಾರಿಗಳು ಇತ್ತ ಚಿತ್ತ ಹರಿಸಬೇಕಾಗಿದೆ. ಜೀವದ ಜತೆಗೆ ಹೋರಾಟ ಮಾಡುವ ಜೀವಗಳನ್ನು ಉಳಿಸುವ ಕಾರ್ಯಕ್ಕೆ ಜಿಲ್ಲಾಸ್ಪತೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಮುಂದಾಗಬೇಕಾಗಿದೆ. ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಅನೇಕ ರೋಗಿಗಳು ಒತ್ತಾಯಿಸಿದ್ದಾರೆ.

Advertisement

•ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next