Advertisement

ICSE ಫ‌ಲಿತಾಂಶ ಪ್ರಕಟ

12:31 AM May 15, 2023 | Team Udayavani |

ಹೊಸದಿಲ್ಲಿ: ಐಸಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆಗಳ ಫ‌ಲಿತಾಂಶ ರವಿವಾರ ಪ್ರಕಟವಾಗಿದ್ದು, 10ನೇ ತರಗತಿಯಲ್ಲಿ ಶೇ. 98.94 ಮತ್ತು 12ನೇ ತರಗತಿ ಯಲ್ಲಿ ಶೇ. 96.93 ಫ‌ಲಿತಾಂಶ ದಾಖಲಾಗಿದೆ.

Advertisement

ಎರಡೂ ಪರೀಕ್ಷೆಗಳಲ್ಲಿ ಬಾಲಕಿ ಯರು ಬಾಲಕರಿಗಿಂತ ಉತ್ತಮ ಫ‌ಲಿತಾಂಶ ಪಡೆದಿದ್ದಾರೆ. 10ನೇ ತರಗತಿಯಲ್ಲಿ ಶೇ. 99.80 ಅಂಕ ಗಳೊಂದಿಗೆ 9 ಮಂದಿ ಮೊದಲ ಸ್ಥಾನ ಹಂಚಿ ಕೊಂಡಿದ್ದರೆ 12ನೇ ತರಗತಿಯಲ್ಲಿ ಶೇ. 99.75 ಅಂಕಗಳೊಂದಿಗೆ ಐವರು ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. 10ನೇ ತರಗತಿಯಲ್ಲಿ ಮೊದಲ ಸ್ಥಾನ ಪಡೆದವರು ರುಶಿಲ್‌ ಕುಮಾರ್‌, ಅನನ್ಯಾ ಕಾರ್ತಿಕ್‌, ಶ್ರೇಯಾ ಉಪಾಧ್ಯಾಯ, ಅದ್ವಯ್‌ ಸರ್ದೇಸಾಯಿ, ಯಶ್‌ ಮಾನಿಶ್‌ ಭಾಸಿನ್‌, ತನಯ್‌ ಸುಹಿಲ್‌ ಶಾ, ಹಿಯಾ ಸಾಂಘವಿ, ಅವಿಶಿ ಸಿಂಗ್‌ ಮತ್ತು ಸಂಬಿತ್‌ ಮುಖೋಪಾಧ್ಯಾಯ. 12ನೇ ತರಗತಿಯಲ್ಲಿ ಮೊದ ಲಿಗರು ರಿಯಾ ಅಗರ್ವಾಲ್‌, ಇಪಿತಾ ಭಟ್ಟಾಚಾರ್ಯ, ಮೊಹಮ್ಮದ್‌ ಆರ್ಯಾನ್‌ ತಾರೀಖ್‌, ಶುಭಂ ಕುಮಾರ್‌ ಅಗರ್ವಾಲ್‌ ಮತ್ತು ಮಾನ್ಯಾ ಗುಪ್ತಾ.

Advertisement

Udayavani is now on Telegram. Click here to join our channel and stay updated with the latest news.

Next