Advertisement

ತನ್ನ ಗ್ರಾಹಕರಿಗಾಗಿ ವಾಟ್ಸ್ಯಾಪ್ ಸೇವೆ ಪರಿಚಯಿಸಿದ ICICI ಬ್ಯಾಂಕ್; ಈ ಎಲ್ಲಾ ಸೇವೆಗಳು ಲಭ್ಯ

09:46 AM Mar 31, 2020 | Hari Prasad |

ಮುಂಬಯಿ: ಕೋವಿಡ್ 19 ವೈರಸ್ ಭೀತಿಯಿಂದಾಗಿ ದೇಶಕ್ಕೆ ದೇಶವೇ 21 ದಿನಗಳ ಲಾಕ್ ಡೌನ್ ಸ್ಥಿತಿಗೆ ಒಳಗಾಗಿರುವ ಈ ಸಂದರ್ಭದಲ್ಲಿ ಅವಶ್ಯಕ ಸೇವೆಗಳನ್ನು ಮಾತ್ರವೇ ಮುಂದುವರೆಸಲು ಸರಕಾರ ಅನುಮತಿ ನೀಡಿದೆ. ಅವಶ್ಯಕ ಸೇವೆಗಳಲ್ಲಿ ಬ್ಯಾಂಕಿಂಗ್ ಸೇವೆಗಳೂ ಒಳಗೊಳ್ಳುತ್ತವೆ.

Advertisement

ಆದರೆ ಬ್ಯಾಂಕಿಗೆ ಗ್ರಾಹಕರು ಬಂದಲ್ಲಿ ಆ ಮೂಲಕ ಈ ವೈರಸ್ ಹಬ್ಬುವ ಭೀತಿ ಇಲ್ಲದಿಲ್ಲ. ಹಾಗಾಗಿಯೇ ಹೆಚ್ಚಿನ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಆನ್ ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಹೆಚ್ಚು ಬಳಸುವಂತೆ ವಿನಂತಿ ಮಾಡಿಕೊಂಡಿವೆ. ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿರಿಸಿರುವ ಐಸಿಐಸಿಐ ಬ್ಯಾಂಕ್ ವಾಟ್ಸ್ಯಾಪ್ ಮೂಲಕ ತನ್ನ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಪ್ರಾರಂಭಿಸಿದೆ.

ಈ ನೂತನ ವಾಟ್ಸ್ಯಾಪ್ ಸೇವೆಗಳ ಮೂಲಕ ಪ್ರತೀನಿತ್ಯ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುವ ತನ್ನ ಗ್ರಾಹಕರು ಈ ಲಾಕ್ ಡೌನ್ ಅವಧಿಯಲ್ಲಿ ತಾವಿರುವ ಸ್ಥಳದಿಂದಲೇ ಸುಲಭವಾಗಿ ಬ್ಯಾಂಕ್ ವ್ಯವಹಾರಗಳನ್ನು ನಡೆಸಲು ಅನುಕೂಲವಾಗಲಿದೆ. ಇದರಲ್ಲಿ ಬ್ಯಾಂಕ್ ಬ್ಯಾಲೆನ್ಸ್ ನೋಡುವುದು, ಕೊನೆಯ ಮೂರು ವ್ಯವಹಾರಗಳ ವಿವರಗಳನ್ನು ಪಡೆದುಕೊಳ್ಳುವುದು, ಕ್ರೆಡಿಟ್ ಕಾರ್ಡ್ ಮಿತಿಯ ವಿವರಗಳನ್ನು ಪಡೆದುಕೊಳ್ಳುವುದು, ಈ ಮೊದಲೇ ಜಾರಿಯಾಗಿರುವ ಸಾಲದ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವುದು ಮತ್ತು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಬ್ಲಾಕ್ ಆಥವಾ ಅನ್ ಬ್ಲಾಕ್ ಮಾಡಿಕೊಳ್ಳುವ ಸೇವೆಗಳನ್ನು ಪಡೆದುಕೊಳ್ಳಲು ಅವಕಾಶವಿದೆ.

ಗ್ರಾಹಕರು ಈ ಸೇವೆಗಳನ್ನು ಪಡೆದುಕೊಳ್ಳುವುದು ಹೇಗೆ?
1. ಐಸಿಐಸಿಐ ಬ್ಯಾಂಕಿನ ಅ‍ಧಿಕೃತ ವಾಟ್ಸ್ಯಾಪ್ ನಂಬರನ್ನು (9324953001) ಗ್ರಾಹಕರು ಸೇವ್ ಮಾಡಿಕೊಳ್ಳಬೇಕು. ಬಳಿಕ ಎಂಬ ಸಂದೇಶವನ್ನು ಗ್ರಾಹಕರು ತಾವು ಬ್ಯಾಂಕಿಗೆ ನೀಡಿರುವ ಮೊಬೈಲ್ ನಂಬರಿನಿಂದಲೇ ಈ ನಂಬರಿಗೆ ಕಳುಹಿಸಬೇಕು. ಬಳಿಕ ಲಭ್ಯವಿರುವ ಸೇವಾ ವಿವರಗಳೊಂದಿಗೆ ನಿಮ್ಮ ಮೊಬೈಲ್ ಗೆ ಬ್ಯಾಂಕಿನಿಂದ ಪ್ರತಿಕ್ರಿಯೆ ಸಂದೇಶ ಬರುತ್ತದೆ.

2. ಬಳಿಕ ಸೇವಾ ಪಟ್ಟಿಗಳನ್ನು ನೋಡಿಕೊಂಡು ನಿಮಗೆ ಅಗತ್ಯವಿರುವ ಸೇವೆಯನ್ನು ಆರಿಸಿಕೊಳ್ಳಬೇಕು. ಉದಾಹರಣೆಗೆ:, , ಇತ್ಯಾದಿ.

Advertisement

ವಾಟ್ಸ್ಯಾಪ್ ಮೂಲಕ ಲಭ್ಯವಿರುವ ಸೇವೆಗಳು ಮತ್ತು ಅದನ್ನು ಬಳಸಿಕೊಳ್ಳಬಹುದಾದ ವಿಧಾನ ಇಲ್ಲಿದೆ:

ಅಕೌಂಟ್ ಬ್ಯಾಲೆನ್ಸ್ ನೋಡಲು: , , ಗಳಲ್ಲಿ ನಿಮಗೆ ಅಗತ್ಯವಿರುವುದನ್ನು ಆರಿಸಿಕೊಂಡು ಈ ಕೀ ವರ್ಡ್ ಗಳನ್ನು ಟೈಪ್ ಮಾಡಿ ಬ್ಯಾಂಕಿನ ಅಧಿಕೃತ ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು.

ಕೊನೆಯ ಮೂರು ಟ್ರಾನ್ಸಾಕ್ಷನ್ ಗಳ ವಿವರ ಪಡೆದುಕೊಳ್ಳಲು: , , ಗಳಲ್ಲಿ ನಿಮಗೆ ಅಗತ್ಯವಿರುವುದನ್ನು ಟೈಪ್ ಮಾಡಿ ಕಳುಹಿಸಿ.

ನಿಮ್ಮ ಕ್ರೆಡಿಟ್ ಕಾರ್ಡ್ ನಲ್ಲಿರುವ ಬ್ಯಾಲೆನ್ಸ್ ಮೊತ್ತ ಹಾಗೂ ಕ್ರೆಡಿಟ್ ಮಿತಿ ತಿಳಿದುಕೊಳ್ಳಲು: , , ಗಳಲ್ಲಿ ನಿಮಗೆ ಬೇಕಾಗಿರುವುದನ್ನು ಆಯ್ಕೆ ಮಾಡಿ ಟೈಪ್ ಮಾಡಿ ಮೆಸೇಜ್ ಮಾಡಿ.

ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಗಳನ್ನು ತಕ್ಷಣವೇ ಬ್ಲಾಕ್ ಮಾಡಿಸಿಕೊಳ್ಳಲು: , , ಕೀ ವರ್ಡ್ ಗಳಲ್ಲಿ ನಿಮಗೆ ಸಂಬಂಧಿಸಿರುವುದನ್ನು ಟೈಪ್ ಮಾಡಿ ಮೆಸೇಜ್ ಮಾಡಿ.

ಇನ್ನು ಈ ಮೊದಲೇ ಮಂಜೂರಾಗಿರುವ ಸಾಲಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು: , , , ಗಳಲ್ಲಿ ನಿಮ್ಮ ಆಯ್ಕೆಯನ್ನು ಟೈಪ್ ಮಾಡಿ ಮೆಸೇಜ್ ಮಾಡಬೇಕು.

ನಿಮಗೆ ಸಮೀಪದಲ್ಲಿರುವ ಐಸಿಐಸಿಐ ಬ್ಯಾಂಕಿನ ಎಟಿಎಂ ಮಾಹಿತಿಯನ್ನು ಪಡೆದುಕೊಳ್ಳಲು: ಟೈಪ್ ,

Advertisement

Udayavani is now on Telegram. Click here to join our channel and stay updated with the latest news.

Next