ನವದೆಹಲಿ: ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ಸಾರ್ವಜನಿಕರಿಗೆ 2 ಕೋಟಿ ರೂಪಾಯಿಯೊಳಗಿನ ಮೊತ್ತದ ಫಿಕ್ಸೆಡ್ ಠೇವಣಿಯ ಬಡ್ಡಿ ದರವನ್ನು ಶೇ.7.10ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇ.7.65ರಷ್ಟು ಏರಿಕೆ ಮಾಡಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:Fuel Crisis:ದಿವಾಳಿ ಅಂಚಿನಲ್ಲಿರುವ ಪಾಕಿಸ್ತಾನದಲ್ಲಿ ಇಂಧನ ಕೊರತೆ; 48 ವಿಮಾನ ಹಾರಾಟ ರದ್ದು
ಈ ನೂತನ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರ ಅಕ್ಟೋಬರ್ 16ರಿಂದ ಅನ್ವಯವಾಗಲಿದೆ. ಆದರೆ ಠೇವಣಿ ಮೊತ್ತ 2 ಕೋಟಿ ರೂಪಾಯಿಯೊಳಗಿರಬೇಕು. ಅಲ್ಲದೇ ಎನ್ ಆರ್ ಒ (Non Resident Ordinary account) ಹಾಗೂ ಎನ್ ಆರ್ ಇ (Non Resident External account) ಖಾತೆಯ ಬಡ್ಡಿದರ ಅಕ್ಟೋಬರ್ 18ರಿಂದ ಅನ್ವಯವಾಗಲಿದೆ ಎಂದು ವರದಿ ವಿವರಿಸಿದೆ.
ಕಳೆದ ಎರಡು ದಿನಗಳಿಂದ ಹಲವಾರು ಖಾಸಗಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್ ಗಳು ತನ್ನ ಫಿಕ್ಸೆಡ್ ಡೆಪಾಸಿಟ್ ಬಡ್ಡಿದರವನ್ನು ಪರಿಷ್ಕರಿಸಿದೆ. ಇತ್ತೀಚೆಗೆ ಆರ್ ಬಿಐನ ಹಣಕಾಸು ನೀತಿ ಸಭೆಯಲ್ಲಿ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವುದಾಗಿ ಘೋಷಿಸಿತ್ತು.
ಮೂರು ದಿನಗಳ ಕಾಲ ನಡೆದ ಆರ್ ಬಿಐನ ಹಣಕಾಸು ನೀತಿಯ ಸಭೆಯ ನಂತರ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು, ಶೇ.6.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಗಳು ಬಡ್ಡಿದರದಲ್ಲಿ ಪರಿಷ್ಕರಣೆ ಮಾಡಿರುವುದಾಗಿ ವರದಿ ತಿಳಿಸಿದೆ.