Advertisement

5,516 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಐಸಿಜಿ!

07:29 PM Nov 29, 2021 | Team Udayavani |

ಪೋರಬಂದರ್: 2021 ರ ಮೊದಲ 10 ತಿಂಗಳುಗಳಲ್ಲಿ ದೋಣಿಗಳು ಮತ್ತು ಹಡಗುಗಳಿಂದ 5,516 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ವಕ್ತಾರರು ಸೋಮವಾರ ಬೆಚ್ಚಿ ಬೀಳುವ ಮಾಹಿತಿ ನೀಡಿದ್ದಾರೆ.

Advertisement

2009ರ ಆರಂಭದಿಂದ ವಶಪಡಿಸಿಕೊಂಡ ಡ್ರಗ್ಸ್ 11,524 ಕೋಟಿ ರೂ. ಮೌಲ್ಯದ್ದಾಗಿದ್ದು, . ಜನವರಿ 1, 2021 ರಿಂದ ಅಕ್ಟೋಬರ್ 31, 2021 ರವರೆಗೆ ವಶಪಡಿಸಿಕೊಂಡ ಮಾದಕವಸ್ತುಗಳ ಮೌಲ್ಯ 5,516.25 ಕೋಟಿ ರೂ.ಎಂದು ತಿಳಿಸಿದೆ.

ಪಾಕಿಸ್ತಾನದ ಮಕ್ರನ್ ಕರಾವಳಿ ಮೂಲಕ ಭಾರತಕ್ಕೆ ಹೆಚ್ಚಿನ ಮಾದಕ ದ್ರವ್ಯಗಳು ರವಾನೆಯಾಗುತ್ತದೆ ಎಂದು ಐಸಿಜಿ ಮಹಾ ನಿರ್ದೇಶಕ ಕೆ.ನಟರಾಜನ್ ನವೆಂಬರ್ 25 ರಂದು ಹೇಳಿದ್ದರು.

ನಾವು ಅದರ ಬಗ್ಗೆ ನಿರ್ದಿಷ್ಟ ಪ್ರಮಾಣದ ಗುಪ್ತಚರ ಮಾಹಿತಿ ಹೊಂದಿದ್ದೇವೆ” ಎಂದು ಅವರು ಹೇಳಿದರು.

ಐಸಿಜಿ ವಿವಿಧ ಏಜೆನ್ಸಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವ ಪರಿಣಾಮವಾಗಿ, ಇದು ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶದೊಂದಿಗೆ ಸೂಕ್ಷ್ಮ ಗಡಿಗಳ ಕಣ್ಗಾವಲು ಕಾಯ್ದುಕೊಳ್ಳುವುದನ್ನು ಮುಂದುವರೆಸಿದೆ ಎಂದು ಅವರು ತಿಳಿಸಿದರು.

Advertisement

2.1 ಮಿಲಿಯನ್ ಚದರ ಕಿ.ಮೀ ಗಿಂತ ಹೆಚ್ಚಿನ ಪ್ರದೇಶದಲ್ಲಿ ಕಣ್ಗಾವಲು ನಿರ್ವಹಿಸಲು ನಾವು ಸುಮಾರು 40 ರಿಂದ 44 ಹಡಗುಗಳು ಮತ್ತು 10 ರಿಂದ 12 ವಿಮಾನಗಳನ್ನು ಬಳಸಿಕೊಳ್ಳುವುದನ್ನು ಮುಂದುವರಿಸುತ್ತೇವೆ, ಅಲ್ಲಿ ಯಾವಾಗಲೂ ನಮ್ಮ ಉಪಸ್ಥಿತಿ ಇರುವ ಪರಿಣಾಮವಾಗಿ ಕಳೆದ ಎರಡು ವರ್ಷಗಳಲ್ಲಿ ಸಮುದ್ರ ಮಾರ್ಗದ ಮೂಲಕ ಬರುತ್ತಿದ್ದ 3.5 ಟನ್‌ಗೂ ಹೆಚ್ಚು ಮಾದಕ ದ್ರವ್ಯಗಳನ್ನು ಐಸಿಜಿ ವಶಪಡಿಸಿಕೊಂಡಿದೆ ಎಂದು ಅವರು ತಿಳಿಸಿದರು.

ಗುಜರಾತ್ ಕರಾವಳಿ ಮತ್ತು ಲಕ್ಷದ್ವೀಪ ಕರಾವಳಿಯಲ್ಲಿ ನಡೆಯುತ್ತಿದ್ದ ಮಾದಕ ದ್ರವ್ಯ ಕಳ್ಳಸಾಗಣೆ ಚಟುವಟಿಕೆಗಳು ಈಗ ಸಮಭಾಜಕದಿಂದ ಆಚೆಗೆ ಸಾಗಿವೆ ಎಂದು ನಟರಾಜನ್ ಹೇಳಿದರು.

ಇದು ಐಸಿಜಿಗೆ ಮಾತ್ರವಲ್ಲದೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ), ರಾಜ್ಯ ಮೀನುಗಾರಿಕಾ ಅಧಿಕಾರಿಗಳು, ಬಂದರು ಅಧಿಕಾರಿಗಳು ಮತ್ತು ರಾಜ್ಯ ಗುಪ್ತಚರ ಸಂಸ್ಥೆಗಳಂತಹ ಹಲವಾರು ಇತರ ಏಜೆನ್ಸಿಗಳ ಯಶಸ್ಸು” ಎಂದು ಅವರು ಉಲ್ಲೇಖಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next