Advertisement

ಐಸ್‌ಕ್ಯಾಂಡಿ ಪ್ರಕರಣ: ಮುಂದುವರಿದ ಚಿಕಿತ್ಸೆ

12:44 AM Mar 28, 2019 | Sriram |

ಕುಂದಾಪುರ/ಸಿದ್ದಾಪುರ: ಐಸ್‌ಕ್ಯಾಂಡಿ ಸೇವಿಸಿ ಅಸ್ವಸ್ಥರಾದ ಕೆಲವರು ಇನ್ನಷ್ಟೇ ಚೇತರಿಸಿಕೊಳ್ಳಬೇಕಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸದಾಗಿ ಚಿಕಿತ್ಸೆಗೆ ಬರುವವರೂ ಇದ್ದಾರೆ.

Advertisement

ಬುಧವಾರ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 6 ಮಂದಿ ಚಿಕಿತ್ಸೆಗಾಗಿ ಆಗಮಿಸಿದ್ದು ನಾಲ್ವರು ದಾಖಲಾಗಿ ಸಂಜೆ ವೇಳೆಗೆ ಆಸ್ಪತ್ರೆ ಯಿಂದ ಮನೆಗೆ ಮರಳಿದ್ದಾರೆ. ಜನರಲ್ಲಿ ಆತಂಕ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸಿ ಐಸ್‌ಕ್ಯಾಂಡಿ ತಯಾರಿಸಿದ ಸಂಸ್ಥೆಯನ್ನು ಪತ್ತೆಹಚ್ಚಿ ಅಲ್ಲಿಂದ ಐಸ್‌ಕ್ಯಾಂಡಿ ಮಾದರಿಯನ್ನು ಸಂಗ್ರಹಿಸಿ ಪ್ರಯೋ ಗಾಲಯಕ್ಕೆ ಕಳುಹಿಸಿದ್ದಾರೆ.

ಪ್ರಯೋಗಾಲಯದಿಂದ ಇದೇ ಐಸ್‌ಕ್ಯಾಂಡಿಯಲ್ಲಿನ ಅಂಶಗಳಿಂದ ಅನಾರೋಗ್ಯ ಉಂಟಾಗಿದೆ ಎಂದು ಸಾಬೀತಾದ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆ ನಡೆಯಲಿದೆ. ಈ ರೀತಿ ಅಸುರಕ್ಷಿತ ಮಾದರಿಯಲ್ಲಿ ಆಹಾರ ತಯಾರಿಸುವ ಘಟಕಗಳು ಕಂಡುಬಂದರೆ ತತ್‌ಕ್ಷಣ ತಾಲೂಕು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಉಡುಪಿ ಆಹಾರ ಸುರಕ್ಷತಾ ವಿಭಾಗ ಅಂಕಿತಾಧಿಕಾರಿಯವರು ತಿಳಿಸಿದ್ದಾರೆ. ಆಹಾರ ಉದ್ಯಮ ನಡೆಸುವವರು ಎಫ್ಎಸ್‌ಎಸ್‌ಎಐ ಪರವಾನಿಗೆ/ ನೋಂದಣಿ ಮಾಡಿಸಿರಲೇಬೇಕು ಎಂದು ಅವರು ತಿಳಿಸಿದ್ದಾರೆ.

ಕೆಲ ಸಮಯದ ಹಿಂದೆ ಈ ಪರಿಸರದಲ್ಲಿ ಮಂಗಗಳು ಸತ್ತು ಬಿದ್ದು ಮಂಗನ ಕಾಯಿಲೆ ಭೀತಿ ಆವರಿಸಿದ್ದರೆ ಈಗ ಐಸ್‌ಕ್ಯಾಂಡಿ ಪ್ರಕರಣ ನೆಮ್ಮದಿ ಕೆಡಿಸಿದೆ.

ಹೆಬ್ರಿ: ಐವರು ಆಸ್ಪತ್ರೆಯಲ್ಲಿ
ಹೆಬ್ರಿ: ಐಸ್‌ಕ್ಯಾಂಡಿ ಸೇವಿಸಿ ಅಸ್ವಸ್ಥರಾಗಿದ್ದ ಮುದ್ರಾಡಿ ಪರಿಸರದ 27 ಮಂದಿ ಮಂಗಳವಾರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಈ ಪೈಕಿ ಐವರಿಗೆ ಬುಧವಾರವೂ ಚಿಕಿತ್ಸೆ ಮುಂದುವರಿದಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಓಂಪ್ರಕಾಶ್‌ ಕಟ್ಟಿಮನಿ, ಕುಟುಂಬ ಕಲ್ಯಾಣ ಅಧಿಕಾರಿ ಡಾ| ಶ್ರೀರಾಮ ರಾವ್‌ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next