ಹೊಸದಿಲ್ಲಿ: ಐಸಿಸಿ ಶುಕ್ರವಾರ ವಿಸ್ತರಿಸಿದ ಐಸಿಸಿ ಟಿ20 ಅಂತರಾಷ್ಟ್ರೀಯ ಪುರಷರ ಕ್ರಿಕೆಟ್ ತಂಡಗಳ ರ್‍ಯಾಂಕಿಂಗ್ ಪ್ರಕಟಿಸಿದ್ದು ಭಾರತ 5 ನೇ ಸ್ಥಾನಕ್ಕೆ ಕುಸಿದಿದ್ದು, ಪಾಕಿಸ್ತಾನ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಐಸಿಸಿ ಟಿ20 ಮಾದರಿಯ ಕ್ರಿಕೆಟ್ ಅಭಿವೃದ್ಧಿಗಾಗಿ 80 ದೇಶಗಳ ಟಿ20 ರ್‍ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. 2020 ರಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್ ಅರ್ಹತಾ ಪಂದ್ಯಗಳಿಗೂ ಮುನ್ನ ರ್‍ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ.
2009 ರ ಟಿ20 ವಿಶ್ವಕಪ್ ಚಾಂಪಿಯನ್ ಆಗಿದ್ದ ಪಾಕಿಸ್ಥಾನ 286 ಅಂಕಗಳೊಂದಿಗೆ ಮೊದಲ ಸ್ಥಾನ ಅಲಂಕರಿಸಿದೆ. 262 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ 2 ನೇ ಸ್ಥಾನದಲ್ಲಿದ್ದು, 261 ಅಂಕಗಳೊಂದಿಗೆ ಇಂಗ್ಲೆಂಡ್ ಮೂರನೇ ಸ್ಥಾನ, ಆಸ್ಟ್ರೇಲಿಯಾ ನಾಲ್ಕನೇ ಸ್ಥಾನದಲ್ಲಿದೆ.ನ್ಯೂಜಿಲ್ಯಾಂಡ್ 6 ನೇ ಸ್ಥಾನದಲ್ಲಿದೆ.
ಕ್ರಿಕೆಟ್ ಶಿಶು ಎಂದು ಪರಿಗಣಿಸಲ್‌ಪಟ್ಟ ಅಫ್ಘಾನಿಸ್ಥಾನ 7 ನೇ ಸ್ಥಾನದಲ್ಲಿದ್ದು, ಶ್ರೀಲಂಕಾ 8 ನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ 9 ನೇ ಸ್ಥಾನದಲ್ಲಿದೆ.ಬಾಂಗ್ಲಾದೇಶ 10 ನೇ ರ್‍ಯಾಂಕ್ ಪಡೆದಿದೆ.
ದೈತ್ಯ ರಾಷ್ಟ್ರಗಳಾದ ಅಮೇರಿಕ 31 ನೇ ರ್‍ಯಾಂಕ್, ಚೀನಾ 70 ನೇ ರ್‍ಯಾಂಕ್‌ನಲ್ಲಿ ಕಾಣಿಸಿಕೊಂಡಿದೆ.