Advertisement
ಇದು ಜಾರಿಗೆ ಬಂದರೆ ಬಿಸಿಸಿಐ ನಡೆಸುವ ಐಪಿಎಲ್, ಇಂಗ್ಲೆಂಡ್ ನಡೆಸುವ ದಿ ಹಂಡ್ರೆಡ್, ಆಸ್ಟ್ರೇಲಿಯದ ಬಿಗ್ ಬಾಶ್ ಕೂಟಗಳ ಮೇಲೆ ಹೊಡೆತ ಬೀಳಲಿದೆ. ಈ ಕೂಟಗಳಲ್ಲಿ ಬೇರೆ ದೇಶಗಳ ಕ್ರಿಕೆಟಿಗರಿಗೆ ಮೊದಲಿನಂತೆ ಸುಲಭವಾಗಿರುವುದಿಲ್ಲ.
ಐಸಿಸಿ ಕಾರ್ಯಕಾರಿ ಸಮಿತಿ ಮಾರ್ಗ ದರ್ಶಿ ಸೂತ್ರಗಳನ್ನು ಸಿದ್ಧಪಡಿಸಿದೆ. ಆಪ್ರಕಾರ ತನ್ನ ದೇಶ ಆಯೋಜಿಸುವ ಐಪಿಎಲ್, ಬಿಗ್‌ಬಾಶ್ ಮಾದರಿಯ ಟಿ20 ಕ್ರೀಡಾಕೂಟಗಳಲ್ಲಿ ಆಡುವ ಅಂತಾರಾಷ್ಟ್ರೀಯ ಕ್ರಿಕೆಟಿಗ, ಇನ್ನೊಂದು ದೇಶದ ಟಿ20 ಲೀಗ್‌ನಲ್ಲಿ ಮಾತ್ರ ಆಡಬಹುದು! ಆದ್ದರಿಂದ ಬಿಸಿಸಿಐ ಮತ್ತಿತರ ದೇಶಗಳು ತಾವು ನಡೆಸುವ ಟಿ20 ಲೀಗ್, ರಣಜಿಯಂತಹ ಇನ್ನಿತರ ದೇಶಿ ಕ್ರೀಡಾಕೂಟದ ವೇಳಾಪಟ್ಟಿಯನ್ನು ಐಸಿಸಿಗೆ ಮೊದಲೇ ನೀಡಿ ಅನುಮತಿ ಪಡೆಯಬೇಕು. ಜತೆಗೆ ಆಟಗಾರರು ಕೂಟದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವುದಕ್ಕೂ ಐಸಿಸಿಯಿಂದ ಅನುಮೋದನೆ ಪಡೆಯಬೇಕು. ಇದು ಆಯಾದೇಶಗಳ ಸ್ವಾಯುತ್ತತೆಯನ್ನು ಐಸಿಸಿ ಉಲ್ಲಂಘಿಸಿದಂತೆ ಆಗಿದೆ. ಐಸಿಸಿಯ ಒಪ್ಪಿಗೆ ಪಡೆದು ದೇಶಿ ಕ್ರೀಡಾಕೂಟ ನಡೆಸಬೇಕಾದ ಅಗತ್ಯ ಬಿಸಿಸಿಐಗಿಲ್ಲ. ಆಸ್ಟ್ರೇಲಿಯ, ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆಗಳು ಕೂಡ ಇದನ್ನು ವಿರೋಧಿಸಿವೆ ಎಂದು ಮೂಲಗಳು ಪ್ರತಿಕ್ರಿಯಿಸಿವೆ.