ಬೆಂಗಳೂರು: ಇಲ್ಲಿ ಶನಿವಾರ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ನಿಧಾನಗತಿಯ ಓವರ್‌ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಪಾಕಿಸ್ಥಾನ ತಂಡಕ್ಕೆ ಪಂದ್ಯದ ಶುಲ್ಕದ ಶೇಕಡಾ 10 ರಷ್ಟು ದಂಡವನ್ನು ವಿಧಿಸಲಾಗಿದೆ.
ಡಿಎಲ್‌ಎಸ್ ನಿಯಮದ ಅನ್ವಯ ವಿಜಯದ ಸಮಯದಲ್ಲಿ ನಿಧಾನಗತಿಯ ಓವರ್‌ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಪಾಕ್ ತಂಡಕ್ಕೆ ಆನ್-ಫೀಲ್ಡ್ ಅಂಪೈರ್‌ಗಳಾದ ಪಾಲ್ ವಿಲ್ಸನ್ ಮತ್ತು ರಿಚರ್ಡ್ ಕೆಟಲ್‌ಬರೋ, ಮೂರನೇ ಅಂಪೈರ್ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ನಾಲ್ಕನೇ ಅಂಪೈರ್ ಜೋಯಲ್ ವಿಲ್ಸನ್ ಅವರು ಆರೋಪ ಹೊರಿಸಿದ ಬಳಿಕ ದಂಡ ವಿಧಿಸಲಾಗಿದೆ.
ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಗಳ ರಿಚಿ ರಿಚರ್ಡ್‌ಸನ್ ಅವರು ಈ ನಿರ್ಬಂಧವನ್ನು ವಿಧಿಸಿದ್ದಾರೆ.ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬಂದಿಗಾಗಿ ICC ನೀತಿ ಸಂಹಿತೆಯ ಆರ್ಟಿಕಲ್ 2.22 ಗೆ ಅನುಗುಣವಾಗಿ, ಇದು ಕನಿಷ್ಟ ಮಿತಿ ಮೀರಿದ ಅಪರಾಧಗಳಿಗೆ ಸಂಬಂಧಿಸಿದ್ದಾಗಿದೆ. ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲರಾದ ಪ್ರತಿ ಓವರ್‌ಗೆ ಆಟಗಾರರಿಗೆ ಅವರ ಪಂದ್ಯದ ಶುಲ್ಕದ ಶೇಕಡಾ ಐದರಷ್ಟು ದಂಡ ವಿಧಿಸಲಾಗುತ್ತದೆ.
ನಾಯಕ ಬಾಬರ್ ಅಜಂ ಅವರು ತಪ್ಪನ್ನು ಒಪ್ಪಿಕೊಂಡಿದ್ದು, ಪ್ರಸ್ತಾವಿತ ಮಂಜೂರಾತಿಯನ್ನು ಒಪ್ಪಿಕೊಂದ್ದಿರುವುದರಿಂದ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲವಾಗಿದೆ.
ಫಖರ್ ಜಮಾನ್ ಅವರ ಅತ್ಯಮೋಘ ಶತಕದ ನೆರವಿನಿಂದ ಕಿವೀಸ್ ವಿರುದ್ಧ ಪಾಕಿಸ್ಥಾನ ಅದ್ಭುತ ಗೆಲುವು ಸಾಧಿಸಿ ಸೆಮಿ ಫೈನಲ್ ಆಸೆ ಜೀವಂತವಾಗಿರಿಸಿಕೊಂಡಿದೆ.