Advertisement

ಸ್ಮತಿ ಮಂಧನಾ ಅಜೇಯ ಶತಕಭಾರತಕ್ಕೆ ಭರ್ಜರಿ  ಗೆಲುವು

03:35 AM Jun 30, 2017 | |

ಟಾಂಟನ್‌: ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಅವರ ಆಕರ್ಷಕ ಶತಕದಿಂದಾಗಿ ಭಾರತ ತಂಡವು ಐಸಿಸಿ ವನಿತಾ ವಿಶ್ವಕಪ್‌ ಕ್ರಿಕೆಟ್‌ ಕೂಟದ ಗುರುವಾರದ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ ತಂಡವನ್ನು 7 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ. ಮತ್ತೆ ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಭಾರತ ವನಿತೆಯರು ಸತತ ಎರಡನೇ ಗೆಲುವು ದಾಖಲಿಸಿದ್ದಾರೆ. ಮೊದಲ ಪಂದ್ಯದಲ್ಲಿ ಭಾರತ ಆತಿಥೇಯ ಇಂಗ್ಲೆಂಡ್‌ ತಂಡವನ್ನು ಸೋಲಿಸಿತ್ತು.

Advertisement

ಟಾಸ್‌ ಗೆದ್ದು ಫೀಲ್ಡಿಂಗ್‌ ನಡೆಸಿದ ಭಾರತ ಉತ್ತಮ ಬೌಲಿಂಗ್‌ ದಾಳಿ ನಡೆಸಿ ವೆಸ್ಟ್‌ಇಂಡೀಸ್‌ ಮೊತ್ತವನ್ನು 8 ವಿಕೆಟಿಗೆ 183 ರನ್ನಿಗೆ ನಿಯಂತ್ರಿಸಿತ್ತು. ಆಬಳಿಕ ಸ್ಮತಿ ಮಂಧನಾ ಅವರ ಆಕರ್ಷಕ ಅಜೇಯ ಶತಕದಿಂದಾಗಿ ಭಾರತ 42.3 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು.

ರನ್‌ ಖಾತೆ ತೆರೆಯುವ ಮೊದಲೇ ಪೂನಂ ರಾವುತ್‌ ಅವರನ್ನು ಕಳೆದುಕೊಂಡ ಭಾರತವನ್ನು ಮಂಧನಾ ಆಧರಿಸಿದರು. ದೀಪ್ತಿ ಶರ್ಮ ಔಟಾದ ಬಳಿಕ ಮಂಧನಾ ಅವರನ್ನು ಸೇರಿಕೊಂಡ ನಾಯಕಿ ಮಿಥಾಲಿ ರಾಜ್‌ ಭರ್ಜರಿ ಆಟವಾಡಿ ತಂಡದ ಗೆಲುವು ಖಚಿತಪಡಿಸಿದರು. ಸತತ 7 ಅರ್ಧಶತಕ ದಾಖಲಿಸಿದ್ದ ಮಿಥಾಲಿ ಈ ಪಂದ್ಯದಲ್ಲಿಯೂ ಅರ್ಧಶತಕ ದಾಖಲಿಸುವ ಸೂಚನೆ ನೀಡಿದ್ದರೂ 46 ರನ್ನಿಗೆ ಔಟಾದರು. ಅವರು ಮಂಧನಾ ಜತೆಗೂಡಿ ಮೂರನೇ ವಿಕೆಟಿಗೆ 108 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು.

ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ 90 ರನ್‌ ಗಳಿಸಿದ್ದ ಮಂಧನಾ ಈ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ಗೆಲುವಿನ ರನ್‌ ಹೊಡೆದ ಅವರು 108 ಎಸೆತ ಎದುರಿಸಿದ್ದು 106 ರನ್‌ ಹೊಡೆದು ಅಜೇಯರಾಗಿ ಉಳಿದರು. 13 ಬೌಂಡರಿ ಬಾರಿಸಿದ ಅವರು 2 ಸಿಕ್ಸರ್‌ ಸಿಡಿಸಿದ್ದರು. ಮಂಧನಾ ಈ ಪಂದ್ಯದಲ್ಲಿ ಸಿಕ್ಸರ್‌ ಬಾರಿಸಿದ ಏಕೈಕ ಆಟಗಾರ್ತಿ ಆಗಿದ್ದಾರೆ.

ಈ ಮೊದಲು ವೆಸ್ಟ್‌ಇಂಡೀಸ್‌ ಒಂದು ವಿಕೆಟಿಗೆ 69 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಆಬಳಿಕ ನಾಟಕೀಯ ಕುಸಿತ ಕಂಡ ವೆಸ್ಟ್‌ಇಂಡೀಸ್‌ 91 ರನ್‌ ತಲುಪುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ದೀಪ್ತಿ ಶರ್ಮ, ಪೂನಂ ಮತ್ತು ಹರ್ಮನ್‌ಪ್ರೀತ್‌ ಬಿಗು ದಾಳಿ ಸಂಘಟಿಸಿ ವಿಂಡೀಸ್‌ಗೆ ಪ್ರಬಲ ಹೊಡೆತ ನೀಡಿದ್ದರು.

Advertisement

ಅಂತಿಮ ಹಂತದಲ್ಲಿ ಶಾನೆಲ್‌ ಡಾಲೆ ಮತ್ತು ಆ್ಯಫಿ ಫ್ಲೆಚರ್‌ ಅವರ ಉತ್ತಮ ಆಡಿದರು.  ಫ್ಲೆಚರ್‌ ಮತ್ತು ಅನೀಸಾ ಮೊಹಮ್ಮದ್‌ ಮುರಿಯದ 9ನೇ ವಿಕೆಟಿಗೆ 37 ರನ್‌ ಪೇರಿಸಿದ್ದರಿಂದ  ವೆಸ್ಟ್‌ಇಂಡೀಸ್‌ ಮೊತ್ತ 180 ಗಡಿ ದಾಟುವಂತಾಯಿತು.

ಸಂಕ್ಷಿಪ್ತ ಸ್ಕೋರು: ವೆಸ್ಟ್‌ಇಂಡೀಸ್‌ 8 ವಿಕೆಟಿಗೆ 183 (ಹೇಲೆ ಮ್ಯಾಥ್ಯೂಸ್‌ 43, ಶಾನೆಲ್‌ ಡಾಲೆ 33, ಆ್ಯಫಿ ಫ್ಲೆಚರ್‌ 36 ಔಟಾಗದೆ, ದೀಪ್ತಿ ಶರ್ಮ 27ಕ್ಕೆ 2, ಪೂನಂ ಯಾದವ್‌ 19ಕ್ಕೆ 2, ಹರ್ಮನ್‌ಪ್ರೀತ್‌ ಕೌರ್‌ 42ಕ್ಕೆ 2); ಭಾರತ 42.3 ಓವರ್‌ಗಳಲ್ಲಿ 3 ವಿಕೆಟಿಗೆ 186 (ಸ್ಮತಿ ಮಂಧನಾ 106 ಔಟಾಗದೆ, ಮಿಥಾಲಿ ರಾಜ್‌ 46).

Advertisement

Udayavani is now on Telegram. Click here to join our channel and stay updated with the latest news.

Next