ಮೌಂಟ್‌ಮೌಂಗನುಯಿ: ಐಸಿಸಿ ಮಹಿಳಾ ವಿಶ್ವಕಪ್‌ನ ಲೀಗ್ ಹಂತದ ಶುಕ್ರವಾರ ನಡೆದ ಪಂದ್ಯದಲ್ಲಿ ವೇಗಿ ಶಬ್ನಿಮ್ ಇಸ್ಮಾಯಿಲ್ ಅವರು ಅಂತಿಮ ಓವರ್‌ನಲ್ಲಿ ವಿಕೆಟ್ ಕಬಳಿಸುವ ಮೂಲಕ, ಇನ್ನೊಂದು ರನ್ ಔಟ್ ಮೂಲಕ ಪಾಕಿಸ್ಥಾನದ ವಿರುದ್ಧ ದಕ್ಷಿಣ ಆಫ್ರಿಕಾ ರೋಚಕ ಆರು ರನ್‌ಗಳ ಜಯ ಸಾಧಿಸಿದೆ.
ಕೊನೆಯ ಓವರ್‌ನ ರೋಚಕ ಹೋರಾಟದಲ್ಲಿ ಎರಡು ವಿಕೆಟ್‌ಗಳನ್ನು ಪಡೆದು ದಕ್ಷಿಣ ಆಫ್ರಿಕಾ ಪಂದ್ಯಾವಳಿಯ ಎರಡನೇ ಗೆಲುವಿಗೆ ಸಾಕ್ಷಿಯಾಯಿತು.
ಮೊದಲು ಬ್ಯಾಟ್ ಮಾಡಿದ ಮಹಿಳೆಯರು 50 ಓವರ್ ಗಳಲ್ಲಿ9 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿದ್ದರು . ಪಂದ್ಯಾವಳಿಯ ಮೊದಲ ಗೆಲುವಿಗಾಗಿ 224 ರನ್‌ಗಳನ್ನು ಬೆನ್ನಟ್ಟಿದ ಪಾಕ್ 49.5 ಓವರ್ ಗಳಲ್ಲಿ 217 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಗಬೇಕಾಯಿತು.
ಪಾಕ್ ಮಹಿಳೆಯರ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಸೋತು ಸಂಕಷ್ಟಕ್ಕೆ ಸಿಲುಕಿದೆ.
ಸಂಕ್ಷಿಪ್ತ ಸ್ಕೋರ್‌ಗಳು: ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 223/9 (ಲಾರಾ ವೊಲ್ವಾರ್ಡ್ 75; ಫಾತಿಮಾ ಸನಾ 3-43) ಪಾಕಿಸ್ಥಾನ 49.5 ಓವರ್‌ಗಳಲ್ಲಿ 217 (ಒಮೈಮಾ ಸೊಹೈಲ್ 65; ಶಬ್ನಿಮ್ ಇಸ್ಮಾಯಿಲ್ 3-41)