Advertisement
ರವಿವಾರದ ಪಂದ್ಯ ಎರಡೂ ತಂಡಗಳ ಪಾಲಿಗೆ “ಮಸ್ಟ್ ವಿನ್ ಮ್ಯಾಚ್’ ಆಗಿತ್ತು. ಇಲ್ಲಿ ಅದೃಷ್ಟ ಇಂಗ್ಲೆಂಡ್ ಕೈ ಹಿಡಿಯಿತು. ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ದೊಡ್ಡ ಮೊತ್ತ ಪೇರಿಸಲು ವಿಫಲವಾಗಿ 48.5 ಓವರ್‌ಗಳಲ್ಲಿ 203ಕ್ಕೆ ಕುಸಿಯಿತು. ಇಂಗ್ಲೆಂಡ್ 47.2 ಓವರ್‌ಗಳಲ್ಲಿ 9 ವಿಕೆಟಿಗೆ 204 ರನ್ ಹೊಡೆದು ಜಯಶಾಲಿಯಾಯಿತು.
ಇದು 5 ಪಂದ್ಯಗಳಲ್ಲಿ ಇಂಗ್ಲೆಂಡ್ ಸಾಧಿಸಿದ 2ನೇ ಜಯ. ಅಂಕಪಟ್ಟಿ ಯಲ್ಲಿ 5ನೇ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್ 6 ಪಂದ್ಯಗಳಲ್ಲಿ 4ನೇ ಸೋಲನುಭವಿಸಿತು. ಅಂಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಹೊಂದಿರುವುದು ನಾಲ್ಕೇ ಅಂಕ, ಉಳಿದಿರುವುದು ಒಂದೇ ಪಂದ್ಯ. ಎದುರಾಳಿ ದುರ್ಬಲ ಪಾಕಿಸ್ಥಾನ ಎಂಬುದಷ್ಟೇ ಕಿವೀಸ್ ಪಾಲಿನ ಸಮಾಧಾನ. ಇದನ್ನು ದೊಡ್ಡ ಅಂತರದಿಂದ ಗೆದ್ದರೂ ನ್ಯೂಜಿ ಲ್ಯಾಂಡ್‌ಗೆ “ಟಾಪ್-4′ ಸ್ಥಾನ ಅನುಮಾನ. ಕಾರಣ, ರನ್‌ರೇಟ್. ಅದು ಮೈನಸ್‌ನಲ್ಲಿದೆ. ಹೀಗಾಗಿ 3- 4ನೇ ಸ್ಥಾನಕ್ಕೆ ವಿಂಡೀಸ್, ಭಾರತ ಮತ್ತು ಇಂಗ್ಲೆಂಡ್ ನಡುವೆ ಸ್ಪರ್ಧೆ ಏರ್ಪಡುವುದು ಖಚಿತ. ಆತಂಕದಿಂದ ಪಾರಾದ ಆಂಗ್ಲರು
ಇಂಗ್ಲೆಂಡ್ ಸುಲಭದಲ್ಲಿ ಗೆಲ್ಲಬಹು ದಾಗಿದ್ದ ಪಂದ್ಯ ಇದಾಗಿತ್ತು. 40ನೇ ಓವರ್ ವೇಳೆ 4 ವಿಕೆಟಿಗೆ 175 ರನ್ ಮಾಡಿ ಜಯದತ್ತ ದಾಪುಗಾಲಿಕ್ಕಿತ್ತು. ಆದರೆ ಇಲ್ಲಿಂದ ಮುಂದೆ ಕಿವೀಸ್ ಬೌಲರ್ ಬಲವಾದ ತಿರುಗೇಟು ನೀಡಿದರು. 196ಕ್ಕೆ 9 ವಿಕೆಟ್ ಬಿತ್ತು. ಅನ್ನಾ ಇಂಗ್ಲೆಂಡನ್ನು ದಡ ಮುಟ್ಟಿಸಿದರು.
Related Articles
Advertisement
ನ್ಯೂಜಿಲ್ಯಾಂಡಿನ ಅಗ್ರ ಕ್ರಮಾಂಕವೂ ಅಮೋಘವಾಗಿತ್ತು. 33ನೇ ಓವರ್ ವೇಳೆ ಮೂರೇ ವಿಕೆಟಿಗೆ 137 ರನ್ ಗಳಿಸಿತ್ತು. ಅನಂತರ ಸೋಫಿ ದಾಳಿಗೆ ಸಿಲುಕಿತು. ಅಜೇಯ 52 ರನ್ ಮಾಡಿದ ಮ್ಯಾಡ್ಡಿ ಗ್ರೀನ್ ನ್ಯೂಜಿಲ್ಯಾಂಡಿನ ಟಾಪ್ ಸ್ಕೋರರ್.
ಇಂದಿನ ಪಂದ್ಯವೆಸ್ಟ್ ಇಂಡೀಸ್-ಪಾಕಿಸ್ಥಾನ
ಸ್ಥಳ: ಹ್ಯಾಮಿಲ್ಟನ್
ಆರಂಭ: ಬೆಳಗ್ಗೆ 6.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್