Advertisement

ಭಾರತಕ್ಕೆ ಶಿರಬಾಗಿದ ಆಸೀಸ್‌ ಹುಡುಗ್ರು

06:35 AM Jan 15, 2018 | Team Udayavani |

ಮೌಂಟ್‌ ಮೌಂಗನುಯಿ: ಒಂದು ಕಡೆ ದಕ್ಷಿಣ ಆಫ್ರಿಕಾದಲ್ಲಿ ಭಾರತದ ಹಿರಿಯ ಕ್ರಿಕೆಟಿಗರ ತಂಡ ಒದ್ದಾಡುತ್ತಿದೆ. ಭಾರತೀಯ ಅಭಿಮಾನಿಗಳು ಈ ಬೇಸರದಲ್ಲಿದ್ದಾಗಲೇ ನ್ಯೂಜಿಲೆಂಡ್‌ನಿಂದ ಸಂಭ್ರಮದ ವರ್ತಮಾನವೊಂದು ತಲುಪಿದೆ. 19 ವಯೋಮಿತಿ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ವಿಶ್ವದ ಬಲಿಷ್ಠ ತಂಡಗಳಲ್ಲೊಂದಾಗಿರುವ ಆಸ್ಟ್ರೇಲಿಯಾವನ್ನು ಭಾರತದ ಕಿರಿಯರು 100 ರನ್‌ಗಳ ಭಾರೀ ಅಂತರ ದಿಂದ ಸೋಲಿಸಿದ್ದಾರೆ. ಭಾರತೀಯರ ಅಬ್ಬರಕ್ಕೆ ತತ್ತರಿಸಿದ ಆಸ್ಟ್ರೇಲಿಯಾ ಪ್ರತಿರೋಧವನ್ನೂ ನೀಡದೇ ಸೋತು ಹೋಗಿದೆ.

Advertisement

ಅಭಿಮಾನಿಗಳು ನಿರೀಕ್ಷಿಸಿದಂತೆ ಭಾರತೀಯ ಕ್ರಿಕೆಟಿನ ಹೊಸ ಪ್ರತಿಭೆ, ನಾಯಕ ಪೃಥ್ವಿ ಶಾ ಅತ್ಯುತ್ತಮವಾಗಿಯೇ ಆಡಿದರು. ನಿರೀಕ್ಷೆಯನ್ನು ಈಡೇರಿಸಿದರು. ತಮ್ಮ ಜೊತೆಗಾರ ಮನ್‌ಜೋತ್‌ ಕಾಲಾÅರೊಂದಿಗೆ ಮೊದಲನೆ ವಿಕೆಟ್‌ಗೆ 180 ರನ್‌ ಜೊತೆಯಾಟ ವಾಡಿದರು. ಬೇಸರದ ಸಂಗತಿಯೆಂದರೆ ಈ ಇಬ್ಬರೂ ಶತಕ ಸಾಧಿಸುವ ಹಂತದಲ್ಲಿ ವಿಕೆಟ್‌ ಕಳೆದುಕೊಂಡಿದ್ದು. ಏಕದಿನದ ವೇಗಕ್ಕೆ ತಕ್ಕಂತೆ ಈ ಇಬ್ಬರೂ ರನ್‌ಗತಿಯನ್ನು ಕಾಯ್ದುಕೊಂಡು ಮುನ್ನಡೆದರು. 178 ಎಸೆತಗಳಿಗೆ ಸರಿಯಾಗಿ 180 ರನ್‌ ಒಗ್ಗೂಡಿಸಿದರು. ಆ ಹಂತದಲ್ಲಿ ಪೃಥ್ವಿ ಶಾ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ನೀಡಿ ಹೊರ ನಡೆದರು. ಇದು ಶಾಗೆ ಬೇಸರದ ನಿರ್ಗಮನ. ಇವರ ಬೆನ್ನಲ್ಲೇ ತಂಡ 200 ರನ್‌ ಗಳಿಸಿದ್ದಾಗ ಮನ್‌ಜೋತ್‌ ಕಾಲಾ ಕೂಡ ಔಟಾದರು.

ಈ ಇಬ್ಬರು ಹೆದರಿ, ಅಂಜಿ ಆಡಲಿಲ್ಲ. ಮುಲಾಜಿಲ್ಲದೇ ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿದರು.ಹೊಡೆತದ ಆಯ್ಕೆಯಲ್ಲಿ ಯೋಚನೆ ಮಾಡದೇ ಪಕ್ಕಾ ಅಬ್ಬರದ ಆಟವಾಡಿದರು. ಪೃಥ್ವಿ ಶಾ 100 ಎಸೆತದಲ್ಲಿ 8 ಬೌಂಡರಿ, 2 ಸಿಕ್ಸರ್‌ನೊಂದಿಗೆ 94 ರನ್‌ ಬಾರಿಸಿದರೆ, ಕಾಲಾ 99 ಎಸೆತದಲ್ಲಿ 12 ಬೌಂಡರಿ, 1 ಸಿಕ್ಸರ್‌ನೊಂದಿಗೆ 86 ರನ್‌ ಗಳಿಸಿದರು. ಈ ಇಬ್ಬರು ಔಟಾದ ನಂತರ ಜೊತೆಗಾರಿಕೆ ಬರಲಿಲ್ಲ. ಬಂದವರೆಲ್ಲ ಬೇಗ ಬೇಗ ಹೊರ ನಡೆದರು. ಆದರೆ ತಂಡದ ರನ್‌ ಗಳಿಕೆ ಕುಗ್ಗಲಿಲ್ಲ. ಇದಕ್ಕೆ ಕಾರಣ 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಶುಭಂ ಗಿಲ್‌. 54 ಎಸೆತಗಳಿಗೆ ಉತ್ತರಿಸಿದ ಗಿಲ್‌ ಈ ಅವಧಿಯಲ್ಲಿ ಚೆಂಡನ್ನು 6 ಬಾರಿಗೆರೆ ದಾಟಿಸಿದರು. 1 ಬಾರಿ ಸಿಕ್ಸರ್‌ ಎತ್ತಿದರು. ಮತ್ತೂಂದು ಕಡೆ ವಿಕೆಟ್‌ಗಳು ಉದುರಿಕೊಂಡು ಹೋಗುತ್ತಲೇ ಇದ್ದರೂ ಗಿಲ್‌ ತಮ್ಮ ಆಕ್ರಮಣವನ್ನು ನಿಲ್ಲಿಸಲಿಲ್ಲ.

ಈ ನಡುವೆ ಕ್ರೀಸ್‌ಗಿಳಿದ ಹಿಮಾಂಶು ರಾಣಾ ಮತ್ತು ಅನುಕೂಲ್‌ ರಾಯ್‌ ತಲಾ 14 ಮತ್ತು 6 ರನ್‌ಗಳಿಗೆ ವಿಕೆಟ್‌ ಒಪ್ಪಿಸಿ ಹೊರ ನಡೆದರು. ಇದು ತಂಡ ಮೊತ್ತದ ಕುಗ್ಗಬಹುದೆನ್ನುವ ಭೀತಿಗೆ ಕಾರಣವಾಯಿತು. ಆದರೆ ಇಂತಹ ಗೊಂದಲದಲ್ಲಿ ಬ್ಯಾಟ್‌ ಹೊತ್ತು ಕ್ರೀಸ್‌ಗಿಳಿದ ಅಭಿಷೇಕ್‌ ಶರ್ಮ 8 ಎಸೆತದಲ್ಲಿ 23 ರನ್‌ ಚಚ್ಚಿದರು. ಬೌಲರ್‌ಗಳಿಗೆ ಕಿಂಚಿತ್ತೂ ಹೆದರದೆ ಚಚ್ಚಿದ್ದರಿಂದ ಭಾರತದ ಮೊತ್ತ 300 ದಾಟಿ ಬೆಳೆಯಿತು. 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 328 ರನ್‌ಗಳಿಸಿತು.

ಕುಸಿದ ಆಸೀಸ್‌: 329 ರನ್‌ ಬೃಹತ್‌ ಮೊತ್ತವನ್ನು ಬೆನ್ನತ್ತಲು ಹೊರಟ ಆಸೀಸ್‌ ಆರಂಭದಲ್ಲೇ ಹೆದರಿದಂತಿತ್ತು. ಬೃಹತ್‌ ಗುರಿ ಮೀರುವ ಒತ್ತಡವೇ ಅದನ್ನು ಅರ್ಧ ಸೋಲಿಸಿದಂತಿತ್ತು. ಆ ತಂಡದ ಆರಂಭಕಾರ ಜ್ಯಾಕ್‌ ಎಡ್ವರ್ಡ್ಸ್‌ 90 ಎಸೆತಗಳಲ್ಲಿ 73 ರನ್‌ಗಳಿಸಿದ್ದು ಬಿಟ್ಟರೆ ಬೇರಾರೂ ಗಮನಾರ್ಹ ಆಟವಾಡಲಿಲ್ಲ. ಇದ್ದಿದ್ದರಲ್ಲಿ ಮೆರೊÉ ಮತ್ತು ಹೋಲ್ಟ್ ಪ್ರತಿರೋಧ ತೋರುವ ಯತ್ನ ನಡೆಸಿದರು. ಅವರಿಬ್ಬರೂ ಕ್ರಮವಾಗಿ 38, 39 ರನ್‌ ಬಾರಿಸಿದರು. ಆಸ್ಟ್ರೇಲಿಯಾಕ್ಕೆ ಕಡಿವಾಣ ಹಾಕಿದ್ದು ಭಾರತದ ಇಬ್ಬರು ವೇಗಿಗಳು. ಕಮಲೇಶ್‌ ನಾಗರಕೋಟಿ ಮತ್ತು ಶಿವಮ್‌ ಮಾವಿ ತಮ್ಮ ನಿಖರ ಮತ್ತು ಭರ್ಜರಿ ವೇಗದಿಂದ ಎದುರಾಳಿಗಳನ್ನು ಹೆದರಿಸಿದರು. ಈ ಇಬ್ಬರಿಗೆ ತಲಾ ಮೂರು ವಿಕೆಟ್‌ಗಳು ಒಲಿದು ಬಂದವು.

Advertisement

150 ಕಿ.ಮೀ. ವೇಗದಲ್ಲಿ ಕಮಲೇಶ್‌, ಶಿವಂ ದಾಳಿ
ಈ ಪಂದ್ಯದಲ್ಲಿ ಅತ್ಯಂತ ಗಮನ ಸೆಳೆದ ಮತ್ತೂಂದು ಸಂಗತಿ ಇಬ್ಬರು ಭಾರತೀಯ ವೇಗಿಗಳಾದ ಕಮಲೇಶ್‌ ನಾಗರಕೋಟಿ ಮತ್ತು ಶಿವಂ ಮಾವಿ ದಾಳಿ. ಕಮಲೇಶ್‌ ಸತತವಾಗಿ 150 ಕಿ.ಮೀ, ಶಿವಂ 145 ಕಿ.ಮೀ. ವೇಗದಲ್ಲೂ ಚೆಂಡುಗಳನ್ನು ಎಸೆದರು. ಇದು ಆಸೀಸ್‌ ಬ್ಯಾಟ್ಸ್‌ಮನ್‌ಗಳನ್ನು ತಬ್ಬಿಬ್ಬು ಮಾಡಿತು. ಸಾಮಾನ್ಯವಾಗಿ ಭಾರತೀಯರ ದಾಳಿ ಗರಿಷ್ಠವೆಂದರೆ 135 ಕಿ.ಮೀ. ಸರಾಸರಿಯನ್ನು ದಾಟುವುದಿಲ್ಲ. ಈ ಇಬ್ಬರೂ ಸತತವಾಗಿ ಒಂದೇ ವೇಗವನ್ನು ಕಾಪಾಡಿಕೊಂಡು ಭವಿಷ್ಯದ ತಾರೆಯರಾಗುವ ಸುಳಿವು ನೀಡಿದರು.

ಸ್ಟೀವ್‌ ವಾ, ಸದರೆಲಂಡ್‌
ಪುತ್ರರು ವಿಫ‌ಲ 

ಆಸ್ಟ್ರೇಲಿಯಾ ತಂಡದ ಪಾಲಿಗೆ ಬೇಸರದ ಸಂಗತಿಯೆಂದರೆ ಆ ದೇಶದ ದಂತಕಥೆ ಸ್ಟೀವ್‌ ವಾ ಪುತ್ರ ಆಸ್ಟಿನ್‌ ವಾ ಮತ್ತು ಆಸೀಸ್‌ ಕ್ರಿಕೆಟ್‌ ಸಂಸ್ಥೆಯ ಮಾಜಿ ಮುಖ್ಯಸ್ಥ ಜೇಮ್ಸ್‌ ಸದರೆಲಂಡ್‌ ಪುತ್ರ ವಿಲ್‌ ಸದರೆಲಂಡ್‌ ವೈಫ‌ಲ್ಯ. ಇಬ್ಬರ ಮೇಲೂ ಮಾಧ್ಯಮ ಜಗತ್ತು ಹದ್ದಿನ ಕಣ್ಣಿಟ್ಟಿತ್ತು. ಜನರೂ ಕುತೂಹಲ ತಾಳಿದ್ದರು. ಆಸ್ಟಿನ್‌ 6, ವಿಲ್‌ 10 ರನ್‌ ಗೆ ವಿಕೆಟ್‌ ಕಳೆದುಕೊಂಡು ವಾಪಸ್‌ ತೆರಳಿದರು. ಬೌಲಿಂಗ್‌ನಲ್ಲೂ ಈ ಇಬ್ಬರೂ ಚೆನ್ನಾಗಿಯೇ ಚಚ್ಚಿಸಿಕೊಂಡರು. ಆಸ್ಟಿನ್‌ ಕೇವಲ 6 ಓವರ್‌ಗಳಲ್ಲಿ 64 ರನ್‌ ಕೊಟ್ಟರು. ಇದಕ್ಕೆ ಹೋಲಿಸಿದರೆ ವಿಲ್‌ ಸ್ವಲ್ಪ ಪರವಾಗಿಲ್ಲ.

ಸಂಕ್ಷಿಪ್ತ ಸ್ಕೋರ್‌: ಭಾರತ-7 ವಿಕೆಟಿಗೆ 328 (ಶಾ 94, ಕಾಲಾÅ 86, ಗಿಲ್‌ 63, ಎಡ್ವರ್ಡ್ಸ್‌ 65ಕ್ಕೆ 4). ಆಸ್ಟ್ರೇಲಿಯ-43.5 ಓವರ್‌ಗಳಲ್ಲಿ 228 (ಎಡ್ವರ್ಡ್ಸ್‌ 73, ಹೋಲ್ಟ್ 39, ಮೆಲೊÅ 38, ಬ್ರಿಯಾಂಟ್‌ 29, ನಾಗರ್ಕೋಟಿ 29ಕ್ಕೆ 3, ಮಾವಿ 45ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next