Advertisement
3 ಬಾರಿಯ ಚಾಂಪಿಯನ್ ಭಾರತಕ್ಕೆ ಪೃಥ್ವಿ ಶಾ ಸಾರಥ್ಯವನ್ನು ಹೊಂದಿದ್ದು, ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ತರೆಬೇತುದಾರರಾಗಿದ್ದಾರೆ. “ಬಿ’ ವಿಭಾಗದಲ್ಲಿರುವ ಭಾರತ ಭಾನುವಾರ ಪ್ರಬಲ ಆಸ್ಟ್ರೇಲಿಯಾವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಬಳಿಕ ಜ.16ರಂದು ಪಪುವಾ ನ್ಯೂ ಗಿನಿಯಾ ಹಾಗೂ ಜ.19ರಂದು ಜಿಂಬಾಬ್ವೆ ವಿರುದ್ಧ ಭಾರತ ಸೆಣಸಲಿದೆ. ಶನಿವಾರದ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲಿದೆ. 16 ತಂಡಗಳನ್ನು ಒಟ್ಟು 4 ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಅತ್ಯಧಿಕ ಅಂಕ ಸಂಪಾದಿಸಿದ 2 ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ. ಬಳಿಕ ಸೆಮಿಫೈನಲ್ ಹಾಗೂ ಫೈನಲ್.
2006ರಲ್ಲಿ ಪ್ರಶಸ್ತಿ ಗೆದ್ದು ಪಾಕಿಸ್ತಾನ ಈ ಸಾಧನೆ ಮಾಡಿದೆ. ಒಮ್ಮೆಯೂ ಚಾಂಪಿಯನ್ ಆಗದ ಆತಿಥೇಯ ನ್ಯೂಜಿಲೆಂಡ್ ಈ ಬಾರಿ ಇತಿಹಾಸ ನಿರ್ಮಿಸುವ ಕನಸು ಕಾಣುತ್ತಿದೆ. ಕಿರಿಯ ತಾರೆಯರಿಗೆ ವೇದಿಕೆ: ಐಸಿಸಿ ಉಸ್ತುವಾರಿಯಲ್ಲಿ ನಡೆಯುವ ಅ-19 ವಿಶ್ವಕಪ್ ಕ್ರಿಕೆಟ್ ಎನ್ನುವುದು ಭವಿಷ್ಯದ ಕ್ರಿಕೆಟ್‌ಪಟುಗಳ ಪಾಲಿನ ಭವ್ಯ ವೇದಿಕೆ. ಇಲ್ಲಿನ ಸಾಧಕರು ನಾಳೆ ಹಿರಿಯರ ತಂಡಗಳ ಕ್ರಿಕೆಟ್ ರಾಯಭಾರಿಗಳಾಗಿ ಮಿಂಚುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಕಿರಿಯರ ಪಾಲಿಗೆ ಈ ಪಂದ್ಯಾವಳಿಯೊಂದು ಚಿಮ್ಮು ಹಲಗೆ. ಸಮಕಾಲೀನ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ವಿರಾಟ್ ಕೊಹ್ಲಿ, ಸ್ಟೀವನ್ ಸ್ಮಿತ್, ಕೇನ್ ವಿಲಿಯಮ್ಸನ್, ಅಲ್ಜಾರಿ ಜೋಸೆಫ್ ಅವರೆಲ್ಲ ಅ-19 ವಿಶ್ವಕಪ್ ಕ್ರಿಕೆಟಿನ ಕೊಡುಗೆಗಳೇ ಆಗಿದ್ದಾರೆ. 2016ರ ಪಂದ್ಯಾವಳಿ ಆಡಿದ್ದ ರಿಷಭ್ ಪಂತ್ ಕೂಡ ಟೀಮ್ ಇಂಡಿಯಾದ ಬಾಗಿಲು ಬಡಿಯುತ್ತಿದ್ದಾರೆ. ಆದರೆ ತನಗೆ ಮಾತ್ರ ಈ ಅದೃಷ್ಟ ಇರಲಿಲ್ಲ ಎನ್ನುತ್ತಾರೆ ಕೋಚ್ ರಾಹುಲ್ ದ್ರಾವಿಡ್!
Related Articles
Advertisement
2000: ಲಂಕಾ ಸೋಲಿಸಿ ಕಿರೀಟ ಗೆದ್ದ ಭಾರತ 2000ನೇ ವರ್ಷದಲ್ಲಿ ಶ್ರೀಲಂಕಾದಲ್ಲಿ ನಡೆದ ಅ-19 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಪಟ್ಟ ಪಡೆಯಿತು. ಇದು
ಭಾರತಕ್ಕೆ ಸಿಕ್ಕ ಮೊದಲ ಕಿರಿಯರ ವಿಶ್ವಕಪ್ ಆಗಿದೆ. ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಕೈಫ್ ನಾಯಕತ್ವದ ಭಾರತ ತಂಡ ಶ್ರೀಲಂಕಾ ವಿರುದ್ಧ 6 ವಿಕೆಟ್ ಜಯ ಸಾಧಿಸಿತು. ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. 2008: ವಿರಾಟ್ ಕೊಹ್ಲಿ ಪಡೆಗೆ ಟ್ರೋಫಿ
ಭಾರತಕ್ಕೆ 2ನೇ ಕಿರಿಯರ ಕಪ್ ಸಿಕ್ಕಿದ್ದು, 2008ರಲ್ಲಿ. ಮಲೇಷ್ಯಾದಲ್ಲಿ ನಡೆದ ಕೂಟದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿತ್ತು. ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 12 ರನ್ ಜಯ ದಾಖಲಿಸಿತು. ಈ ಕೂಟದಲ್ಲಿ ಭಾರತ ಒಂದೂ ಪಂದ್ಯದಲ್ಲಿಯೂ ಸೋಲದೇ ಚಾಂಪಿಯನ್ ಪಟ್ಟವನ್ನು ಪಡೆದಿದೆ. 2012: ಆಸ್ಟ್ರೇಲಿಯಾ ವಿರುದ್ಧ ವಿಜಯೋತ್ಸವ
ಭಾರತಕ್ಕೆ ಮೂರನೇ ಕಿರಿಯರ ವಿಶ್ವಕಪ್ ಸಿಕ್ಕಿರುವುದು 2012ರಲ್ಲಿ. ಆಸ್ಟ್ರೇಲಿಯಾದಲ್ಲಿ ನಡೆದ ಕೂಟದಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿತು. ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್‌ಶಿಪ್ ಪಡೆಯಿತು. ಭಾರತ ತಂಡವನ್ನು ದೆಹಲಿ ಬ್ಯಾಟ್ಸ್‌ಮನ್ ಉನ್ಮುಕ್¤ ಚಾಂದ್ ಮುನ್ನಡೆಸಿದ್ದರು. 606 ರನ್
ಎರಡು ಬಾರಿ ಅ-19 ವಿಶ್ವಕಪ್‌ನಲ್ಲಿ ಆಡಿರುವ ಇಂಗ್ಲೆಂಡ್‌ನ ಇಯಾನ್ ಮಾರ್ಗನ್ ದಾಖಲಿಸಿದ ರನ್. ಇದು ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್ ಒಬ್ಬ ಸಂಗ್ರಹಿಸಿದ ಗರಿಷ್ಠ ರನ್. 505 ರನ್
2004ರ ಕಿರಿಯರ ವಿಶ್ವಕಪ್‌ನಲ್ಲಿ ಭಾರತದ ಶಿಖರ್ ಧವನ್ ದಾಖಲಿಸಿದ ರನ್. ಇದು ಒಂದೇ ಅ-19 ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ವೊಬ್ಬ ದಾಖಲಿಸಿದ ಗರಿಷ್ಠ ರನ್ 5 ಭಾರತ ಕಿರಿಯರ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿರುವ ಸಂಖ್ಯೆ
3 ಭಾರತ ಕಿರಿಯರ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿರುವ ಸಂಖ್ಯೆ
2 ಭಾರತ ಕಿರಿಯರ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದಿರುವ ಸಂಖ್ಯೆ
6 ಕಿರಿಯರ ವಿಶ್ವಕಪ್ ಗೆದ್ದ ಒಟ್ಟು ರಾಷ್ಟ್ರಗಳ ಸಂಖ್ಯೆ 20 ಪಂದ್ಯ ನೇರ ಪ್ರಸಾರ
22 ದಿನಗಳ ಈ ಪಂದ್ಯಾವಳಿ ನ್ಯೂಜಿಲೆಂಡಿನ 7 ತಾಣಗಳಲ್ಲಿ ನಡೆಯುತ್ತದೆ. ಒಟ್ಟು 48 ಪಂದ್ಯಗಳಲ್ಲಿ 20 ಪಂದ್ಯಗಳು ನೇರ
ಪ್ರಸಾರ ಕಾಣಲಿವೆ. ಭಾರತದಲ್ಲಿ ಇದು ಸ್ಟಾರ್ ನ್ಪೋರ್ಟ್ಸ್ ಚಾನೆಲ್‌ನಲ್ಲಿ ಮೂಡಿಬರಲಿದೆ. ತಂಡಗಳು
ಗ್ರೂಪ್ ಎ
ಕೀನ್ಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ● ಗ್ರೂಪ್ ಬಿ
ಆಸ್ಟ್ರೇಲಿಯಾ, ಭಾರತ, ಪಪುವಾ ನ್ಯೂಗಿನಿಯಾ,ಜಿಂಬಾಬ್ವೆ ● ಗ್ರೂಪ್ ಸಿ
ಬಾಂಗ್ಲಾದೇಶ, ಕೆನಡಾ, ಇಂಗ್ಲೆಂಡ್, ನಮೀಬಿಯಾ ● ಗ್ರೂಪ್ ಡಿ
ಆಫ್ಘಾನಿಸ್ತಾನ,ಐರೆಲಂಡ್,ಪಾಕಿಸ್ತಾನ,ಶ್ರೀಲಂಕಾ ಭಾರತ ತಂಡ:
ಪೃಥ್ವಿ ಶಾ(ನಾಯಕ),ಶುಭಂ ಗಿಲ್, ಆರ್ಯನ್ ಜುಯಾಲ್, ಅಭಿಷೇಕ್ ಶರ್ಮ, ಅರ್ಶದೀಪ್ ಸಿಂಗ್, ಹರ್ವಿಕ್ ದೇಸಾಯಿ, ಮನ್ ಜೋತ್ ಕಾಲಾ, ಕಮಲೇಶ್ ನಾಗರಕೋಟಿ, ಪಂಕಜ್ ಯಾದವ್, ರಿಯಾನ್ ಪರಾಗ್, ಇಶಾನ್ ಪೊರೆಲ್, ಹಿಮಾಂಶು ರಾಣಾ,
ಅನುಕೂಲ್ ರಾಯ್, ಶಿವಂ ಮಾವಿ, ಶಿವ ಸಿಂಗ್. ನನಗೆ ಅ-19 ವಿಶ್ವಕಪ್ ಕ್ರಿಕೆಟ್ ಆಡುವ ಅವಕಾಶವೇ ಸಿಗಲಿಲ್ಲ. 1988ರ ಮೊದಲ ಆವೃತ್ತಿ ಬಳಿಕ ಮುಂದಿನ 10 ವರ್ಷ ಈ ಪಂದ್ಯಾವಳಿ ನಡೆಯಲೇ ಇಲ್ಲ. ಆದರೆ ಈಗಿನ ಹುಡುಗರಿಗೆ ಅವಕಾಶ ಎದುರಾಗುತ್ತಲೇ ಇದೆ. ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕಿದೆ.
● ರಾಹುಲ್ ದ್ರಾವಿಡ್, ಭಾರತ ಕಿರಿಯರ ತಂಡದ ಕೋಚ್