Advertisement

ICC U-19 ವಿಶ್ವಕಪ್‌ ಕ್ರಿಕೆಟ್‌: ಪರಿಷ್ಕೃತ ವೇಳಾಪಟ್ಟಿ ಪ್ರಕಟ

11:10 PM Dec 11, 2023 | Team Udayavani |

ದುಬಾೖ: ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಗೊಂಡ ಮುಂದಿನ ವರ್ಷದ ಐಸಿಸಿ ಅಂಡರ್‌-19 ಪುರುಷರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಪರಿಷ್ಕೃತ ವೇಳಾಪಟ್ಟಿಯನ್ನು ಐಸಿಸಿ ಸೋಮವಾರ ಪ್ರಕಟಿಸಿದೆ. ಇದು ಜ. 19ರಿಂದ ಫೆ. 11ರ ತನಕ ಸಾಗಲಿದೆ.

Advertisement

ಮೂಲ ವೇಳಾಪಟ್ಟಿಯಂತೆ 15ನೇ ಆವೃತ್ತಿಯ ಈ ಪಂದ್ಯಾವಳಿ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ವಿಪರೀತ ರಾಜಕೀಯ ಹಸ್ತಕ್ಷೇಪದಿಂದಾಗಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನು ಐಸಿಸಿ ಕಳೆದ ನವೆಂಬರ್‌ನಲ್ಲಿ ಅಮಾನತುಗೊಳಿಸಿತ್ತು. ಅನಂತರ ಈ ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾಕ್ಕೆ ವರ್ಗಾಯಿಸಲಾಯಿತು.

ಹರಿಣಗಳ ನಾಡಿನ 5 ತಾಣಗಳಲ್ಲಿ ವಿಶ್ವಕಪ್‌ ಪಂದ್ಯಾವಳಿ ನಡೆಯಲಿದೆ. ಇವುಗಳೆಂದರೆ ಬ್ಲೋಮ್‌ಫಾಂಟೀನ್‌, ಈಸ್ಟ್‌ ಲಂಡನ್‌, ಕಿಂಬರ್ಲಿ, ಪೊಚೆಫ್ಸೂóಮ್‌ ಮತ್ತು ಬೆನೋನಿ. ಪಂದ್ಯಗಳ ಒಟ್ಟು ಸಂಖ್ಯೆ 41.

ಮೊದಲ ಎದುರಾಳಿ ಬಾಂಗ್ಲಾ
ಹಾಲಿ ಚಾಂಪಿಯನ್‌ ಭಾರತ ಜ. 20ರ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಬಳಿಕ ಐರ್ಲೆಂಡ್‌ (ಜ. 25) ಮತ್ತು ಯುಎಸ್‌ಎ (ಜ. 28) ವಿರುದ್ಧ ಆಡಲಿದೆ.

“ಎ’ ವಿಭಾಗ: ಭಾರತ, ಬಾಂಗ್ಲಾದೇಶ, ಐರ್ಲೆಂಡ್‌, ಯುಎಸ್‌ಎ.
“ಬಿ’ ವಿಭಾಗ: ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌, ಸ್ಕಾಟ್ಲೆಂಟ್‌.
“ಸಿ’ ವಿಭಾಗ: ಆಸ್ಟ್ರೇಲಿಯ, ಶ್ರೀಲಂಕಾ, ಜಿಂಬಾಬ್ವೆ, ನಮೀಬಿಯಾ.
“ಡಿ’ ವಿಭಾಗ: ಪಾಕಿಸ್ಥಾನ, ನ್ಯೂಜಿಲ್ಯಾಂಡ್‌, ಅಫ್ಘಾನಿಸ್ಥಾನ, ನೇಪಾಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next