Advertisement

ಅಪಹಾಸ್ಯ ಮಾಡಿ ಇಕ್ಕಟ್ಟಿಗೆ ಸಿಲುಕಿದ ಐಸಿಸಿ

12:46 PM Jun 04, 2019 | sudhir |

ಬ್ರಿಸ್ಟಲ್: ಜವಾಬ್ದಾರಿಯುತ ಸ್ಥಾನದಲ್ಲಿರುವ ಐಸಿಸಿ ಅಫ್ಘಾನಿಸ್ಥಾನ ಕ್ರಿಕೆಟಿಗ ಮೊಹಮ್ಮದ್‌ ಶಾಜಾದ್‌ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯ ಮಾಡಿ ಮುಜುಗರಕ್ಕೀಡಾಗಿದೆ. ತನ್ನ ತಪ್ಪಿನ ಅರಿವಾಗುತ್ತಲೇ ಐಸಿಸಿ ಟ್ವೀಟ್ ಡಿಲೀಟ್ ಮಾಡಿ ತಪ್ಪನ್ನು ಸರಿಪಡಿಸಿ ಕೊಳ್ಳುವ ಪ್ರಯತ್ನ ನಡೆಸಿದೆ.

Advertisement

ಆಸ್ಟ್ರೇಲಿಯ ವಿರುದ್ಧ ಶನಿವಾರ ನಡೆದ ವಿಶ್ವಕಪ್‌ ಪಂದ್ಯದ ವೇಳೆ ಅಫ್ಘಾನಿಸ್ಥಾನ ತಂಡದ ಓಪನರ್‌ ಕಮ್‌ ವಿಕೆಟ್ ಕೀಪರ್‌ ಮೊಹಮ್ಮದ್‌ ಶಾಜಾದ್‌ ಆಸೀಸ್‌ನ ವಾರ್ನರ್‌ ಅವರನ್ನು ಸ್ಟಂಪ್‌ ಮಾಡುವ ವೇಳೆ ಶಾಜಾದ್‌ ಆಯ ತಪ್ಪಿ ಉರುಳಿದ್ದರು. ಈ ಫೋಟೋ ಪೋಸ್ಟ್‌ ಮಾಡಿದ ಐಸಿಸಿ ‘ಇದನ್ನು ಮ್ಯೂಸಿಯಂನಲ್ಲಿ ಇಡಬಹುದು’ ಎಂದು ಪ್ರಕಟಿಸಿತ್ತು. ಇದಕ್ಕೆ ತೀವ್ರ ಪ್ರತಿಕ್ರಿಯೆ ಬರಲು ಆರಂಭವಾ ಗುತ್ತಿದ್ದಂತೆಯೇ ಐಸಿಸಿ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next