Advertisement

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಮುಂದೂಡಿಕೆ

12:21 AM Jan 26, 2021 | Team Udayavani |

ದುಬಾೖ: ಮೊದಲ ಆವೃತ್ತಿಯ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ 8 ದಿನ ಮುಂದೂಡಲ್ಪಟ್ಟಿದೆ. ಐತಿಹಾಸಿಕ ಲಾರ್ಡ್ಸ್‌ನಲ್ಲಿ ಈ ಮುಖಾಮುಖೀ ಜೂ. 18ರಿಂದ 22ರ ತನಕ ತನಕ ಸಾಗಲಿದೆ. ಜೂ. 23 ಮೀಸಲು ದಿನವಾಗಿದೆ. ಮೊದಲು ನಿರ್ಧರಿಸಿದಂತೆ ಪ್ರಶಸ್ತಿ ಸಮರ ಜೂ. 10ರಿಂದ 14ರ ತನಕ ನಡೆಯಬೇಕಿತ್ತು.

Advertisement

ಭಾರತ ತಂಡ ಫೈನಲ್‌ನಲ್ಲಿ ಆಡುವ ಸಾಧ್ಯತೆ ದಟ್ಟವಾಗಿರುವುದರಿಂದ ಈ ಬದಲಾವಣೆ ಎನ್ನಲಾಗಿದೆ. ಒಂದು ವೇಳೆ ಐಪಿಎಲ್‌ ಪಂದ್ಯಾವಳಿ ಮೇ ಕೊನೆಗೆ ಮುಕ್ತಾಯಗೊಂಡರೆ ಕ್ರಿಕೆಟಿಗರಿಗೆ, ಅದರಲ್ಲೂ ಮುಖ್ಯವಾಗಿ ಭಾರತದ ಆಟಗಾರರಿಗೆ ವಿಶ್ರಾಂತಿ ಅಗತ್ಯವಿರುತ್ತದೆ. ಹಾಗೆಯೇ ಲಂಡನ್ನಿಗೆ ತೆರಳಿದ ಬಳಿಕ ಕೆಲವು ದಿನಗಳ ಕ್ವಾರಂಟೈನ್‌ನಲ್ಲೂ ಇರಬೇಕಾಗುತ್ತದೆ. ಇದು ಮುಗಿಸಿ 2-3 ದಿನಗಳ ಅಭ್ಯಾಸವನ್ನೂ ಮಾಡಬೇಕಾಗುತ್ತದೆ. ಇದಕ್ಕೆಲ್ಲ ಹೆಚ್ಚುವರಿ ದಿನಗಳು ಬೇಕಾಗುತ್ತವೆ.

ಸದ್ಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಯಾದಿಯಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್‌ ಮೊದಲೆರಡು ಸ್ಥಾನದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next