Advertisement
ಕುಲದೀಪ್ ಯಾದವ್ ಅವರದು 20 ಸ್ಥಾನಗಳ ಭರ್ಜರಿ ನೆಗೆತ. ಭಾರತದ ಈ ಚೈನಾಮನ್ ಬೌಲರ್ ಈಗ 3ನೇ ಸ್ಥಾನ ಅಲಂಕರಿಸಿದ್ದಾರೆ. ಆಸ್ಟ್ರೇಲಿಯದ ಆ್ಯಡಂ ಝಂಪ 17 ಸ್ಥಾನ ಮೇಲೇರಿ 5ನೇ ಸ್ಥಾನಕ್ಕೆ ಬಂದಿದ್ದಾರೆ. ಸ್ಪಿನ್ನರ್‌ಗಳಿಬ್ಬರ ಈ ನೆಗೆತದಿಂದ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ ಮತ್ತು ಬಾಂಗ್ಲಾದೇಶದ ಮುಸ್ತಾಫಿಜುರ್ ರೆಹಮಾನ್ ಟಾಪ್-20 ಯಾದಿಯಿಂದ ಹೊರಬೀಳಬೇಕಾಯಿತು. ಬೌಲರ್‌ಗಳ ಟಾಪ್-20 ಪಟ್ಟಿಯಲ್ಲಿ 13 ಮಂದಿ ಸ್ಪಿನ್ನರ್‌ಗಳೇ ತುಂಬಿರುವುದು ವಿಶೇಷ.
ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಶಿಖರ್ ಧವನ್ 5 ಸ್ಥಾನಗಳ ಪ್ರಗತಿ ಕಂಡಿದ್ದು, ಜೀವನಶ್ರೇಷ್ಠ 11ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಕ್ರಮವಾಗಿ 76 ಮತ್ತು 41 ರನ್ ಬಾರಿಸಿದ ಧವನ್ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಪಾಕಿಸ್ಥಾನದ ಬಾಬರ್ ಆಜಂ ಅಗ್ರಸ್ಥಾನದಲ್ಲಿದ್ದಾರೆ.
Related Articles
Advertisement
ಪಾಕ್ ನಂ.1, ಭಾರತ ನಂ.2ಟಿ20 ಸರಣಿ 1-1 ಸಮಬಲದಲ್ಲಿ ಮುಗಿದುದರಿಂದ ಭಾರತ ಮತ್ತು ಆಸ್ಟ್ರೇಲಿಯ ಕ್ರಮವಾಗಿ 2ನೇ ಹಾಗೂ 4ನೇ ಸ್ಥಾನದಲ್ಲೇ ಮುಂದುವರಿದಿವೆ. ಆದರೆ ಒಂದೊಂದು ಅಂಕ ಕಳೆದುಕೊಂಡಿವೆ. ಪಾಕಿಸ್ಥಾನ 138 ಅಂಕಗಳೊಂದಿಗೆ ಅಗ್ರಸ್ಥಾನ ಉಳಿಸಿಕೊಂಡಿದೆ. ಟಾಪ್-10 ಟಿ20 ಬೌಲರ್
1. ರಶೀದ್ ಖಾನ್ 793
2. ಶಾದಾಬ್ ಖಾನ್ 752
3. ಕುಲದೀಪ್ ಯಾದವ್ 714
4. ಆದಿಲ್ ರಶೀದ್ 676
5. ಆ್ಯಡಂ ಝಂಪ 670
6. ಐಶ್ ಸೋಧಿ 668
7. ಫಾಹಿಮ್ ಅಶ್ರಫ್ 652
8. ಇಮಾದ್ ವಾಸಿಮ್ 651
9. ಇಮ್ರಾನ್ ತಾಹಿರ್ 640
10. ಶಕಿಬ್ ಅಲ್ ಹಸನ್ 633 ಟಾಪ್-10 ಟಿ20 ಬ್ಯಾಟ್ಸ್‌ಮನ್
1. ಬಾಬರ್ ಆಜಂ 856
2. ಕಾಲಿನ್ ಮುನ್ರೊ 815
3. ಆರನ್ ಫಿಂಚ್ 806
4. ಫಕಾರ್ ಜಮಾನ್ 749
5. ಗ್ಲೆನ್ ಮ್ಯಾಕ್ಸ್‌ವೆಲ್ 745
6. ಕೆ.ಎಲ್. ರಾಹುಲ್ 719
7. ಮಾರ್ಟಿನ್ ಗಪ್ಟಿಲ್ 703
8. ಅಲೆಕ್ಸ್ ಹೇಲ್ಸ್ 697
9. ರೋಹಿತ್ ಶರ್ಮ 689
10. ಜಾಸನ್ ರಾಯ್ 688 ಟಾಪ್-10 ತಂಡಗಳು
1. ಪಾಕಿಸ್ಥಾನ 138
2. ಭಾರತ 126
3. ಇಂಗ್ಲೆಂಡ್ 118
4. ಆಸ್ಟ್ರೇಲಿಯ 117
5. ದಕ್ಷಿಣ ಆಫ್ರಿಕಾ 114
6. ನ್ಯೂಜಿಲ್ಯಾಂಡ್ 112
7. ವೆಸ್ಟ್ ಇಂಡೀಸ್ 102
8. ಅಫ್ಘಾನಿಸ್ಥಾನ 92
9. ಶ್ರೀಲಂಕಾ 87
10. ಬಾಂಗ್ಲಾದೇಶ 77