Advertisement

2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌: ಕ್ರಿಕೆಟ್‌ ಸೇರಿಸಲು ಐಸಿಸಿ ಪ್ರಯತ್ನ

11:00 PM Dec 12, 2021 | Team Udayavani |

ಹೊಸದಿಲ್ಲಿ: 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್‌ ಸ್ಥಾನ ಪಡೆಯುವಂತೆ ಮಾಡಲು ಐಸಿಸಿ ಬಲವಾಗಿ ಶ್ರಮಿಸುತ್ತಿದೆ.

Advertisement

ಸದ್ಯ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಪಟ್ಟಿಯಲ್ಲಿ ಕ್ರಿಕೆಟ್‌ ಇಲ್ಲ. ಅಲ್ಲದೇ 2028ರ ಒಲಿಂಪಿಕ್ಸ್‌ನಿಂದ ವೇಟ್‌ಲಿಫ್ಟಿಂಗ್‌, ಬಾಕ್ಸಿಂಗ್‌, ಆಧುನಿಕ ಪೆಂಟಾಥ್ಲಾನ್‌ ಕ್ರೀಡೆಗಳನ್ನು ಕೈಬಿಡುವುದಾಗಿ ಐಒಸಿ ತಿಳಿಸಿದೆ. ಈ ಕ್ರೀಡೆಗಳ ಆಡಳಿತ ಮಂಡಳಿಗಳು ವಿಪರೀತ ಭ್ರಷ್ಟಾಚಾರದಲ್ಲಿ ನಿರತವಾಗಿವೆ, ಆಟಗಾರರು ಉದ್ದೀಪನ ಸೇವಿಸುತ್ತಿದ್ದಾರೆ.

ಇವನ್ನೆಲ್ಲ ಸರಿಪಡಿಸಿಕೊಳ್ಳಲು 18 ತಿಂಗಳು ಸಮಯ ನೀಡುತ್ತೇವೆ. ಸರಿಯಾಗದಿದ್ದರೆ ಈ ಕ್ರೀಡೆಗಳನ್ನು ಒಲಿಂಪಿಕ್ಸ್‌ನಿಂದ ಹೊರಹಾಕುವುದು ಖಚಿತ ಎಂದು ಐಒಸಿ ಅಧ್ಯಕ್ಷ ಥಾಮಸ್‌ ಬಾಕ್‌ ಹೇಳಿದ್ದಾರೆ.

2023ರಲ್ಲಿ ಆತಿಥೇಯ ಲಾಸ್‌ ಏಂಜಲೀಸ್‌ ಸಂಘಟನಾ ಸಮಿತಿ ಹೆಚ್ಚುವರಿ ಕ್ರೀಡೆಗಳಿಗಾಗಿ ಶಿಫಾರಸು ಮಾಡಲಿದೆ. ಈ ಹೊತ್ತಿನಲ್ಲಿ ಕ್ರಿಕೆಟ್‌ ಮಾನ್ಯತೆ ಪಡೆಯಬಹುದು ಎನ್ನುವುದು ಐಸಿಸಿ ಲೆಕ್ಕಾಚಾರ.

ಇದನ್ನೂ ಓದಿ:ಜಮ್ಮು ಸರ್ಕಾರದ ವಿರುದ್ಧ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕಿಡಿ

Advertisement

ಆದರೆ ಪ್ರಸ್ತುತ ಒಲಿಂಪಿಕ್ಸ್‌ ಕ್ಯಾಲೆಂಡರ್‌ನಲ್ಲಿ ಸೇರಿಕೊಳ್ಳಲು ವಿವಿಧ ದೇಶಗಳ ಕ್ರಿಕೆಟ್‌ ಸಂಸ್ಥೆಗಳು ಸಿದ್ಧ ಇವೆಯೇ ಎಂಬುದೊಂದು ಪ್ರಶ್ನೆ.

ನಿರಂತರ ವೇಳಾಪಟ್ಟಿಯಲ್ಲಿ ಮಗ್ನವಾಗಿರುವ ಈ ಸಂಸ್ಥೆಗಳು ಆದಾಯ ಬರದ ಒಲಿಂಪಿಕ್ಸ್‌ಗೆ ಸೇರಿಕೊಳ್ಳಲು ಸಹಜವಾಗಿಯೇ ಆಸಕ್ತಿ ಹೊಂದಿಲ್ಲ ಎಂಬುದು ವಿಪರ್ಯಾಸ.

Advertisement

Udayavani is now on Telegram. Click here to join our channel and stay updated with the latest news.

Next